This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ನಿಜವಾಗುತ್ತಾ ಭವಿಷ್ಯ !ಮೋದಿ ತವರಲ್ಲಿ ಮತ್ತೆ ಕೇಸರಿ ಅಲೆ ! The future is coming true! The saffron wave is again in Modi's house!


 

ಗಾಂಧಿನಗರ :
ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ ವಿಧಾನಸಭೆ ಚುನಾವಣೆ ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಈ ಬಾರಿಯೂ ಬಿಜೆಪಿ ಮತ್ತೆ ಗೆಲ್ಲಲಿದೆ ಎಂದು ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್ ಮತ್ತು ಸಿ ಫೋರ್ ಸಮೀಕ್ಷೆ ಭವಿಷ್ಯ ನುಡಿದಿವೆ. ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಏಳನೇ ಬಾರಿಗೆ ಮತ್ತೆ ಗೆಲುವು ಸಾಧಿಸಲಿದೆ ಎಂದು ನುಡಿದಿದೆ. ಈ ಸಲ ಕಳೆದ ಸಲಕ್ಕಿಂತ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ.

ಗುಜರಾತ್ ವಿಧಾನಸಭೆ ಒಟ್ಟು 182 ಸದಸ್ಯರನ್ನು ಹೊಂದಿದ್ದು ಬಹುಮತಕ್ಕೆ 92 ಸದಸ್ಯರು ಅಗತ್ಯ. ಬಿಜೆಪಿ 133-143, ಕಾಂಗ್ರೆಸ್ 28-37, ಆಮ್ ಆದ್ಮಿ ಪಕ್ಷಗಳು 5-14 ಈ ಬಾರಿಯ ಚುನಾವಣೆಯಲ್ಲಿ ಸ್ಥಾನ ಗಳಿಸಲಿವೆ ಎಂಬ ಸಮೀಕ್ಷೆ ಹೊರಬಿದ್ದಿದೆ.
ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 99 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 77, ಪಕ್ಷೇತರರು 3, ಬಿಟಿಪಿ 2 ಮತ್ತು ಎನ್ ಸಿಪಿ 1ಸ್ಥಾನ ಗೆದ್ದಿದ್ದವು. 1998 ರಿಂದ ಬಿಜೆಪಿ ಗುಜರಾತ್ ನಲ್ಲಿ ಅಧಿಕಾರದಲ್ಲಿದೆ. ಅಂದಿನಿಂದ ನಡೆದ 6ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷ ಒಮ್ಮೆಯೂ ಸೋತಿಲ್ಲ.


Jana Jeevala
the authorJana Jeevala

Leave a Reply