ಸಚಿನ್ ತೆಂಡೂಲ್ಕರ್ ಪೂರ್ವಜರು ಬೆಳಗಾವಿಯಲ್ಲೂ ನೆಲೆಸಿದ್ರಾ ? ಅವರ ಪೂರ್ವಜರ ನಾಡು ಕರುನಾಡು !


ಭಾರತೀಯ ಕ್ರಿಕೆಟ್ ದಿಗ್ಗಜರಾದ
ರವಿಶಾಸ್ತ್ರಿ ಹಾಗೂ ಸಂಜಯ್ ಮಾಂಜ್ರೇಕರ್ ಅವರ ನಂತರ
ಸಚಿನ್ ತೆಂಡೂಲ್ಕರ್ ಅವರ
ಪೂರ್ವಜರ ನಾಡು ಕರ್ನಾಟಕ ಎನ್ನುವ ಕುತೂಹಲಕಾರಿ ಸತ್ಯ ಬೆಳಕಿಗೆ ಬಂದಿದೆ.

ಉಡುಪಿ :
ಭಾರತ ಏಕೆ ಇಡೀ ಕ್ರಿಕೆಟ್ ಜಗತ್ತನ್ನೇ ಎರಡೂವರೆ ದಶಕಗಳ ಕಾಲ ಆಳಿದ್ದ ಸಚಿನ್ ತೆಂಡೂಲ್ಕರ್ ಅವರು ಉಡುಪಿ ಮೂಲದವರೇ . ಹೌದು ಕೆಲ ಮಾಹಿತಿ ಪ್ರಕಾರ ಅವರ ಪೂರ್ವಜರು ಉಡುಪಿ ಬಳಿಯ ಆತ್ರಾಡಿಯಲ್ಲಿ ನೆಲೆಸಿದ್ದರು. ಭೂ ಒಡೆತನದ ವಿಚಾರದಲ್ಲಿ ತಕರಾರು ಬಂದು ಅತ್ರಾಡಿಯಿಂದ ಕುಂದಾನಗರಿ ಬೆಳಗಾವಿಗೆ ವಲಸೆ ಬಂದಿದ್ದರು. ಅನಂತರ ಬೆಳಗಾವಿಯಿಂದ ಮುಂಬೈಗೆ ಹೋಗಿ ಅಲ್ಲೇ ನೆಲೆಸಿದ್ದರು.

 

ತಮ್ಮ ಕುಟುಂಬಕ್ಕೆ ಸೇರಿದ ನಾಗಬನವನ್ನು ಸಚಿನ್ ತೆಂಡೂಲ್ಕರ್ ಅವರ ಅಜ್ಜ ನಿರ್ಮಿಸಿದ್ದು ಎನ್ನುತ್ತಾರೆ ಅತ್ರಾಡಿಯ ಅಪ್ಪು ಪ್ರಭು ಅವರು.

ಈ ಬಗ್ಗೆ ನಮ್ಮ ತಂದೆಯವರು ಅನೇಕ ಸಲ ನಮ್ಮ ಬಳಿ ಹೇಳಿದ್ದಾರೆ ಎಂದು ಅಪ್ಪು ಪ್ರಭು ನೆನಪಿಸಿಕೊಂಡಿದ್ದಾರೆ. ಸಚಿನ್ ಅವರ ಪೂರ್ವಜರು ಹಾಗೂ ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ಆತ್ರಾಡಿಯಲ್ಲಿನ ನಾಗಬನಕ್ಕೆ ಸಚಿನ್ ತೆಂಡೂಲ್ಕರ್ ಇದುವರೆಗೆ ಆಗಮಿಸಿಲ್ಲ. ಆದರೆ ಇಚ್ಛೆಯಿದ್ದರೆ ಸಚಿನ್ ತೆಂಡೂಲ್ಕರ್ ಮುಂದಿನ ದಿನಗಳಲ್ಲಿ ಇಲ್ಲಿಗೆ ಬರಬಹುದು ಎನ್ನುತ್ತಾರೆ ಅಪ್ಪು ಪ್ರಭು ಅವರು.

ಅತ್ರಾಡಿಯ ಅಪ್ಪು ಪ್ರಭು ಹೇಳುವಂತೆ ನಮ್ಮ ತಂದೆ ವಿಠಲ ಪ್ರಭು, ಲಕ್ಷ್ಮಣ ಪ್ರಭು, ರಾಮಪ್ರಭು, ಕೃಷ್ಣ ಪ್ರಭು (ರಾಮಕೃಷ್ಣ) ಅವಳಿ-ಜವಳಿ ಮಕ್ಕಳು. ಅನಂತ ಪ್ರಭು ಸೇರಿ ಐವರು ಸಹೋದರರು. ಈ ಐವರಲ್ಲಿ ಲಕ್ಷ್ಮಣ ಪ್ರಭು ದೊಡ್ಡವರು ಹಾಗೂ ನನ್ನ ತಂದೆ ಕೊನೆಯವರು. ರಾಮ-ಲಕ್ಷ್ಮಣರ ಅವರಲ್ಲಿ ಒಬ್ಬರು ಸಚಿನ್ ತೆಂಡೂಲ್ಕರ್ ಅವರ ಅಜ್ಜ. ಆದ್ದರಿಂದ ಸಚಿನ್ ತೆಂಡೂಲ್ಕರ್ ಅವರ ಪೂರ್ವಜರು ಅತ್ರಾಡಿಯವರು ಎಂದು ಅನೇಕರು ನಮ್ಮ ಬಳಿ ಹೇಳಿದ್ದರು. ನಮ್ಮ ತಂದೆಯವರು ಸಹಾ ಈ ವಿಚಾರವನ್ನು ನನ್ನ ಬಳಿ ಹೇಳಿದ್ದಾರೆ ಎಂದು ಅಪ್ಪು ಪ್ರಭು ಪ್ರತಿಕ್ರಿಯಿಸಿದ್ದಾರೆ.

 

*ಆಲ್ ರೌಂಡರ್ ರವಿಶಾಸ್ತ್ರಿ ಮೂಲವೂ ಕಾರ್ಕಳ :*
ಹಿಂದೊಮ್ಮೆ ಭಾರತೀಯ ಕ್ರಿಕೆಟ್ ಜಗತ್ತನ್ನು ಆಳಿದ ಹೆಸರಾಂತ ಆಲ್ ರೌಂಡರ್, ನಿಕಟಪೂರ್ವ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಮೂಲವೂ ಕರುನಾಡು. ಅವರು 2016 ರಲ್ಲಿ ಕಾರ್ಕಳ ತಾಲ್ಲೂಕಿನ ಎರ್ಲಪ್ಪಾಡಿಯಲ್ಲಿರುವ ಕರ್ವಾಲು ವಿಷ್ಣುಮೂರ್ತಿ ದೇವಳಕ್ಕೆ ಆಗಮಿಸಿ ತಮ್ಮ ಪೂರ್ವಿಕರ ಮೂಲ ನಾಗಬನದಲ್ಲಿ ಪೂಜೆ ಸಲ್ಲಿಸಿದ್ದರು. ವಿವಾಹವಾಗಿ ಹದಿನೆಂಟು ವರ್ಷಗಳ ಕಾಲ ಅವರಿಗೆ ಮಕ್ಕಳಿರಲಿಲ್ಲ. ನಂತರ ಮೂಲ ನಾಗದೇವರ ನೆಲೆಗೆ ತೆರಳಿ ಪೂಜೆ ಸಲ್ಲಿಸಬೇಕು ಎಂಬ ಜೋತಿಷಿಗಳ ಮಾತಿನಂತೆ ಕರ್ವಾಲಿಗೆ ಬಂದ ರವಿಶಾಸ್ತ್ರಿ ಅವರು ತಮ್ಮ ಪೂರ್ವಜರು ನಂಬಿಕೊಂಡು ಬಂದ ಮೂಲ ನಾಗ ದೇವರ ನಾಗಬನವಿರುವ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮಕ್ಕೆ ಆಗಮಿಸಿದ್ದರು. ಬಳಿಕ ಸಂಕಲ್ಪಿಸಿ ಕೊಂಡಂತೆ ನಾಗ ದೇವರಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಅನಂತರ ಅವರು ಹೆಣ್ಣು ಮಗುವನ್ನು ಪಡೆದಿದ್ದರು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ರವಿಶಾಸ್ತ್ರಿ ಕರ್ವಾಲು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ವಿಷ್ಣುಮೂರ್ತಿ ದೇವರಿಗೆ ಹೂವಿನ ಪೂಜೆ ಹಾಗೂ ನಾಗದೇವರಿಗೆ ಆಶ್ಲೇಷ ಬಲಿ ಸೇವೆ, ಪಂಚಾಮೃತ ಅಭಿಷೇಕ, ನಾಗದರ್ಶನ ಸೇವೆ ಸಲ್ಲಿಸಿರುತ್ತಾರೆ. ಈ ಸೇವೆಯಿಂದ ನನಗೆ ಸಾಕಷ್ಟು ಯಶಸ್ಸುಗಳು ಲಭಿಸಿವೆ, ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದ ಅಂದರೆ ನನಗೆ ಬಹಳ ಖುಷಿ ಹಾಗೂ ಸಂತೃಪ್ತಿ ಬಂದಿದೆ ಎಂದು ರವಿಶಾಸ್ತ್ರಿ ಅಂದು ನುಡಿದಿದ್ದರು. ಮಾತ್ರವಲ್ಲ ತಮ್ಮ ಪೂರ್ವಜರ ಕರ್ವಾಲು ಗ್ರಾಮದ ಸರಕಾರಿ ಶಾಲೆಗೆ 1ಲಕ್ಷ ₹ ದೇಣಿಗೆಯಾಗಿ ನೀಡಿದ್ದರು.

*ಸಂಜಯ ಮಾಂಜ್ರೇಕರ್:*
ಭಾರತೀಯ ಕ್ರಿಕೆಟ್ ತಂಡದ ಇನ್ನೊಬ್ಬ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ವೀಕ್ಷಕ ವಿವರಣೆಗಾರ ಸಂಜಯ ಮಾಂಜ್ರೇಕರ್ ಸಹಾ ಮಂಗಳೂರಲ್ಲೇ ಜನಿಸಿದ್ದರು.
1965 ರ ಜುಲೈ 12 ರಂದು ಅವರು ಜನಿಸಿದ್ದರು.


Leave A Reply

Your email address will not be published.