ಎಂ.ಜಿ.ಹಿರೇಮಠ ಡಿಸಿಯಾಗಿ ಮತ್ತೆ ನಿಯೋಜನೆ


ಬೆಳಗಾವಿ: ಎಂ. ಜಿ. ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಮತ್ತೆ ನಿಯೋಜನೆ ಮಾಡಲಾಗಿದೆ .

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸ್ವಂತ ಜಿಲ್ಲೆಯಾಗಿರುವ ಕಾರಣಕ್ಕೆ ಹಿರೇಮಠ
ಅವರ ಬದಲಿಗೆ ವೆಂಕಟೇಶ್ ಕುಮಾರ್ ಅವರನ್ನು ಜಿಲ್ಲಾಧಿಕಾರಿಯನ್ನಾಗಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿತ್ತು. ಇದೀಗ ಚುನಾವಣೆ ಮುಗಿದು ಇಪ್ಪತ್ತು ದಿನಗಳ ನಂತರ ರಾಜ್ಯ ಸರಕಾರ ಹಿರೇಮಠ ಅವರನ್ನು ಮತ್ತೆ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.


Leave A Reply

Your email address will not be published.