ಮದುವೆ ನೋಂದಣಿಯಲ್ಲಿ ಭಾರಿ ಬದಲಾವಣೆ..!

ಮದುವೆ ನೋಂದಣಿಯಲ್ಲಿ ಭಾರಿ ಬದಲಾವಣೆ..!
ಇನ್ನೂ ಮುಂದೆ ಸಬ್ ರಜಿಸ್ಟ್ರಾರ್ ಆಫೀಸ್ ಗೆ ಹೋಗುವಂತಿಲ್ಲ.
ಏಜೆಂಟ್ ರಿಗೆ ಸಲಾಂ ಹೊಡೆಯಬೇಕಾಗಿಲ್ಲ.
ಬೆಂಗಳೂರು : ಮದುವೆಯಾದ ಹಾಗೂ ಆಗುವ ನವ ಜೋಡಿಗಳ ಮದುವೆ ನೋಂದಣಿ ಮಾಡುವವರು ಜಿಲ್ಲಾ ಹಾಗೂ ತಾಲೂಕು ಉಪ ನೋಂದಣಿ ಹಾಗೂ ಮುದ್ರಾಂಕ ಕಛೇರಿಗಳಲ್ಲಿ ಮಾತ್ರ ಮಾಡಬೇಕಿತ್ತು. ಆದರೆ ಇನ್ನೂ ಮುಂದೆ ಮದುವೆ ನೋಂದಣಿಯನ್ನು ಗ್ರಾಮ ಪಂಚಾಯತಿಗಳಲ್ಲಿ ಮಾಡಲು ಸರಕಾರ ಮಹತ್ವದ ಹೊಸ ಆದೇಶ ಹೊರಡಿಸಿದೆ.
ಈಗ ನಗರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದುವೆಯಾದ ನವ ಜೋಡಿಗಳು ಕಡ್ಡಾಯವಾಗಿ ಉಪ ನೋಂದಣಿ ಕಛೇರಿಗಳಲ್ಲಿ ನೋಂದಣಿ ಮಾಡಬೇಕಿತ್ತು. ಇದರಿಂದಾಗಿ ಹಳ್ಳಿಗಳಲ್ಲಿ ಮದುವೆಯಾದ ಜೋಡಿಗಳಿಗೆ ಕಿರಿಕಿರಿ ಹಾಗೂ ತೊಂದರೆ ಉಂಟಾಗಿತ್ತು. ಯಾಕೆಂದರೆ ಉಪ ನೋಂದಣಿ ಕಛೇರಿಗಳಲ್ಲಿ ಇಲ್ಲ ಸಲ್ಲದ ಕಾಗದ ಪತ್ರಗಳನ್ನು ಕೇಳುತ್ತಿದ್ದರು. ಇದರಿಂದಾಗಿ ಏಜೆಂಟರಿಗೆ ದುಪ್ಪಟ್ಟು ಹಣ ಸುರಿಯಬೇಕಾಗಿತ್ತು. ಹೀಗಾಗಿ ಆದ ಮದುವೆಗಳಲ್ಲಿ ಅರ್ಧದಷ್ಟು ನೋಂದಣಿಯಾಗುತ್ತಿರಲಿಲ್ಲ.
ಇದನ್ನೆಲ್ಲಾ ಅರಿತ ಸರ್ಕಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮದುವೆ ನೋಂದಣಿಯ ಅಧಿಕಾರವನ್ನು ನೀಡಿ ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.
ಇನ್ನೂ ಮಂದೆ ಗ್ರಾಮ ಪಂಚಾಯಿತಿಗಳಲ್ಲಿ ಮದುವೆ ನೋಂದಣಿ ಕಾರ್ಯ ನಡೆಯಲಿದ್ದು ಕದ್ದು ಮುಚ್ಚಿ ಪ್ರೇಮ ವಿವಾಹ ಆಗುವ ಜೋಡಿಗಳಿಗೆ ಪಕ್ಕಾ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ.