Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶಿಕ್ಷಕರಿಗೆ ಮರ್ಯಾದೆ ಕೊಡದೆ 'ನನ್ನನ್ನು ಬಂದು ಏಕೆ ಭಿಕ್ಷೆ ಬೇಡುತ್ತೀರಿ' ಎಂದವರು ಇಂದು ಎಲ್ಲಿ?


ಬೆಳಗಾವಿ : ಜನಜೀವಾಳ ಜಾಲ : ಅನೇಕ ತೊಂದರೆ ತಾಪತ್ರಯ, ಅನಾರೋಗ್ಯದ ವಿಚಾರಗಳು ಇದ್ದ ಶಿಕ್ಷಕರು ತರಬೇತಿ ಸಮಯದಲ್ಲಿ ಆದೇಶ ಬಂದಾಗ ಕ್ಯಾನ್ಸಲ್ ಮಾಡುವಂತೆ ಅವಲತ್ತುಕೊಂಡ ಶಿಕ್ಷಕರನ್ನು ಏಕವಚನದಲ್ಲಿ  'ನನ್ನನ್ನು ಬಂದು ಏಕೆ ಭಿಕ್ಷೆ ಬೇಡುತ್ತೀರಿ'   ಬೇಕಾಬಿಟ್ಟಿ ಮಾತನಾಡಿದ ಪಾಲಿಕೆಯ ಉಪಯುಕ್ತ ಡಾ. ಸಿದ್ದು ಹುಲ್ಲೋಳ್ಳಿ ಈಗ ನಿಗದಿತ ಅವಧಿಯಲ್ಲಿ ಶಿಕ್ಷಕರಿಗೆ ಆದೇಶ ಹಾಗೂ ಮ್ಯಾಪಿಂಗ್ ಸಾಮಗ್ರಿಗಳನ್ನು ನೀಡುವ ತಮ್ಮ ಕಾರ್ಯವೈಖರಿಯನ್ನು ಮರೆತರೆ? ಎಂದು ಈಗ ಪ್ರಶ್ನಿಸುತ್ತಿದ್ದಾರೆ ಗಣತಿದಾರರು.


ಎಲ್ಲ ಸಿದ್ಧತೆ ಆದ ಮೇಲೆ ಕರೆಸಿದ್ದರೆ ಆಗುತ್ತಿಲ್ಲವೇ?: ಇಂದು ಮಧ್ಯಾಹ್ನ 12 ಗಂಟೆಗೆ ತುರ್ತು ಆದೇಶ ಕಳುಹಿಸಿ ಇಂದು ಮೂರು ಗಂಟೆಗೆ ಹಾಜರಾಗುವಂತೆ ತಿಳಿಸಿ ಪೂರ್ವ ಸಿದ್ಧತೆ ಇಲ್ಲದೆ ಜಾತ್ರೆ ಮಾಡುವ ಅಗತ್ಯವಾದರೂ ಏನಿತ್ತು ? ಸಂಬಂಧಿಸಿದ ಪಾಲಿಕೆ ಅಧಿಕಾರಿಗಳು? ಶಿಕ್ಷಕರು ತಮ್ಮ ವೈಯಕ್ತಿಕ ಕಾರ್ಯಗಳನ್ನೆಲ್ಲ ಬದಿಗೊತ್ತಿ ಬಂದು ಇತ್ತ ಗಣತಿ ಆದೇಶ ಪಡೆಯದೆ ಖಾಲಿ ಕೈಯಲ್ಲಿ ಮರಳಿದ್ದಾರೆ. ಅವತ್ತಿನ ಗಣತಿ ಕೆಲಸ ಅಂದೇ ಮಾಡಬೇಕು. ಇಂದೇ ತರಬೇತಿ ಪಡೆಯಬೇಕು ಎಂದು ಹೇಳಿ ಸಾಚಾತನ ಪ್ರದರ್ಶಿಸುವ ಪಾಲಿಕೆ ಅಧಿಕಾರಿಗಳು ತಮ್ಮ ಕೆಲಸವನ್ನು ಬೇಕಾಬಿಟ್ಟಿ ತುರ್ತು ಸಂದೇಶ ಮಾಡಿ ಆದೇಶ ನೀಡದೆ ಕಳಿಸಿರುವುದು ಎಷ್ಟು ಸರಿ?


ಅಧಿಕಾರಿಗಳ ಆಜ್ಞೆ ಆಟ...!
ಬಿರು ಬಿಸಿಲಲ್ಲಿ ಆದೇಶ ಪಡೆಯಲು
ಶಿಕ್ಷಕರ ಪರದಾಟ...!!: ಕಳೆದ ಒಂದು ವಾರದಿಂದ ನಡೆಯುತ್ತಿರುವ ತರಬೇತಿಗೆ ಅನೇಕ ಶಿಕ್ಷಕರು ಕಾರಣಾಂತರಗಳಿಂದ ಹತ್ತು-ಹದಿನೈದು ನಿಮಿಷ ತಡವಾಗಿ ಬಂದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ವಿದ್ಯಾರ್ಥಿಗಳಂತೆ ಒಂದು ಗಂಟೆಗಳ ಕಾಲ ತರಬೇತಿಯಿಂದ ಹೊರಗೆ ನಿಲ್ಲಿಸಿದ ಉಪಆಯುಕ್ತ ಇಂದು ತಮ್ಮ ಅಪರಿಪೂರ್ಣ ಕಾರ್ಯದ ಬಗ್ಗೆ, ತ್ವರಿತ ಹಾಜರಾಗಿ ಎನ್ನುವ ಅಪ್ರಬುದ್ದ ಆಜ್ಞೆಯ ಬಗ್ಗೆ ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವರೇ? ಆಕ್ರೋಶದ ವ್ಯಕ್ತಪಡಿಸುತ್ತಿವೆ ಬೆಳಗಾವಿ ಜಿಲ್ಲೆಯ ಶಿಕ್ಷಕ ಸಂಘಟನೆಗಳು.


ಆಗುತ್ತಿದ್ದಾರೆ ಶಿಕ್ಷಕರೇ ಶಿಕಾರಿಗಳು...!!: ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳ್ಳಿ ಅವರೇ ನಿಮಗೆ ಶಿಕ್ಷಕರ ಅಳಲು ಅರ್ಥವಾಗುವುದಿಲ್ಲವೇ? ಇದು ಓಡೋಡಿ ಬಂದು ಇಂದು ಮಧ್ಯಾಹ್ನ ಹಾಜರಾದ ಶಿಕ್ಷಕ ವಲಯ ಜನ ಜೀವಾಳದ ಮುಂದೆ  ತೀವ್ರ ಅಕ್ರೋಶ ವ್ಯಕ್ತಪಡಿಸಿತು.


Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ