Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಪಕ್ಷದ ವಿಚಾರ ಬಂದಾಗ ಮಾಜಿ ಸಚಿವ ಎ.ಬಿ. ಪಾಟೀಲ ಹಾಗೂ ನಾನು ಒಂದೇ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಸಂಘ- ಸಂಸ್ಥೆ ವಿಚಾರ ಬಂದಾಗ ಎ. ಬಿ. ಪಾಟೀಲ ಹಾಗೂ ನಾವು ಬೇರೆ ಬೇರೆ, ಆದರೆ ಪಕ್ಷದ ವಿಚಾರ ಬಂದಾಗ ನಾವು ಅವರು ಒಂದೇ ಎಂದು ಲೋಕೋಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಸಂಘ-ಸಂಸ್ಥೆಗಳ ಚುನಾವಾಣೆ ಬಂದಾಗ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಬೇರೆ ಬೇರೆಯಾಗಿದ್ದೇವೆ ಹೊರತು ಪಕ್ಷದ ವಿಚಾರ ಬಂದಾಗ ನಾವು ಅವರು ಕೂಡಿ ಪ್ರಚಾರ ಮಾಡುತ್ತೇವೆ. ಈ ಕುರಿತು ಅವರು ಸಹ ಇದೇ ರೀತಿಯಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಪಕ್ಷದ ಚಿಹ್ನೆ ಬಂದಾಗ ನಾವು- ಮಾಜಿ ಸಚಿವ ಎ.ಬಿ.ಪಾಟೀಲ ಒಟ್ಟಾಗಿ ಪಕ್ಷದ ಪರ ಪ್ರಚಾರ ಮಾಡುತ್ತೇವೆ ಎನ್ನುವ ಮೂಲಕ ವಿರೋಧಿಗಳಿಗೆ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದರು.

ಭೂಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮ: ನಕಲಿ ಆಧಾರ ಕಾರ್ಡ್‌ ಸೃಷ್ಟಿಸಿ ಜಮೀನು ಕಬಳಿಕೆ ಮಾಡುವಂತಹ ಭೂಗಳ್ಳರ ವಿರುದ್ಧ ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಹುಕ್ಕೇರಿ ತಾಲೂಕಿನಲ್ಲಿ ಭೂಗಳ್ಳರ ಪ್ರಕರಣಗಳು ಸಾಕಷ್ಟುಕಂಡು ಬರುತ್ತಿದ್ದು, ಇಂಥಹ ದಂಧೆಗೆ ಕೈಹಾಕಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂತಹ ಭೂಗಳ್ಳತನ ದಂಧೆಯನ್ನು ಮಾಡಿಕೊಂಡ ತಂಡದ ವಿರುದ್ದ ನಾವು ಕೂಡಾ ಹೆಚ್ಚು ಮುತುವರ್ಜಿ ವಹಿಸಿ ಕಡಿವಾಣ ಹಾಕುವಂತಾ ಕೆಲಸ ಮಾಡುತ್ತೀದ್ದೇವೆ. ಅಲ್ಲದೇ ಇಡಿ ಜಿಲ್ಲೆಯಲ್ಲೇ ಈ ಭೂ ಮಾಫೀಯಾಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಲಿತ ಸಿಎಂ ಕೂಗು ನಮ್ಮ ಕೈಯಲಿಲ್ಲ: ದಲಿತ ಸಿಎಂ ಬಗ್ಗೆ ಹೇಳುವದರಿಂದ ಸುಮ್ಮನೆ ಅನಾವಶ್ಯಕ ಸಮಸ್ಯೆ ಉದ್ಭವವಾಗುತ್ತಿದೆ ಹೊರತು ಉಪಯೋಗ ಏನು ಆಗುವದಿಲ್ಲ. ಅಷ್ಟಾಗ್ಯೂ ದಲಿತ ಸಿಎಂ ಕೂಗು ನಮ್ಮ ಕೈಯಲ್ಲಿಲ್ಲ ಎಂದು ಹೇಳಿದರು.

25 ಶಾಸಕರು ನಮಗೂ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್‌ ಗೆ ಪತ್ರ ಬರೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 25 ಶಾಸಕರಿಗೆ ಸಚಿವ ಸ್ಥಾನ ಬೇಕೆನ್ನುವದರಲ್ಲಿ ತಪ್ಪೇನಿದೆ. ಅವರವರ ಅರ್ಹತೆ ನೋಡಿ ಅವರಿಗೆ ಕೊಡಬಹುದು. ಇಲ್ಲವೆಂದು ಯಾರು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.

ಖಾಲಿ ಹುದ್ದೆಗಳ ಭರ್ತಿಗೆ ಬಿಜೆಪಿ-ಕಾಂಗ್ರೆಸ್ ಸಮಸ್ಯೆಯಲ್ಲ: ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್‌ ಸಮಸ್ಯೆಯಲ್ಲ. ಇದರ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಒಂದು ಸಭೆ ಮಾಡಿದ್ದಾರೆ ಎಂದು ಹೇಳಿದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!