Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಷ್ಣು ಶಿಂಧೆ ಅವರ ಮಣ್ಣಿನ ಮಾಯೆ ಕೃತಿ ಲೋಕಾರ್ಪಣೆ: ಲೇಖಕ ಭ್ರಷ್ಟನಾದರೆ ಸಮಾಜ ಅಧಃಪತನ - ಸತ್ಯಾನಂದ ಪಾತ್ರೋಟ

ಬೆಳಗಾವಿ : ಬರಹಗಾರರ ಜಾತಿ, ಧರ್ಮ, ಲಿಂಗತ್ವ ತಾರತಮ್ಯಗಳನ್ನು ಮಿತಿಗಳನ್ನು ಮೀರಿ ಮನುಷ್ಯತ್ವದ ಪರವಾಗಿ ಬರೆಯಬೇಕು ಮತ್ತು ಆ ರೀತಿ ಬದುಕಬೇಕು. ಲೇಖಕ ಭ್ರಷ್ಟನಾದರೆ ಸಮಾಜವನ್ನು ಅಧಃಪತನಕ್ಕೆ ದೂಡಿದಂತೆ. ಇಂದು ಬಹುತೇಕ ಬರಹಗಾರರು ಅವಕಾಶವಾದಕ್ಕೆ ಒಳಗಾಗಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಾಮೀಪ್ಯ ಸಾಧಿಸಿದ್ದಾರೆ ಎಂದು ನಾಡಿನ ಖ್ಯಾತ ಕವಿ, ಸಾಂಸ್ಕೃತಿಕ ಚಿಂತಕ ಸತ್ಯಾನಂದ ಪಾತ್ರೋಟ ಹೇಳಿದ್ದಾರೆ.

ವಿಜಯಪುರ ಮಹಿಳಾ ವಿಶ್ವವಿದ್ಯಾಲಯ ಮಂಡ್ಯ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ, ಪ್ರಾಧ್ಯಾಪಕ ಡಾ. ವಿಷ್ಣು ಶಿಂಧೆ ಅವರ "ಮಣ್ಣಿನ ಮಾಯೆ" ಕಥಾ ಸಂಕಲನ ಬೆಳಗಾವಿಯ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ‌ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಬಸವಣ್ಣ, ಅಂಬೇಡ್ಕರ್, ಕುವೆಂಪುರಂಥವರ ಚಿಂತನೆಗಳು ಲೇಖಕರಿಗೆ ಆದರ್ಶವಾಗಬೇಕು. ಪಂಪ ರಾಜಾಶ್ರಯದಲ್ಲಿದ್ದರೂ ಪ್ರಭುತ್ವ, ಸಾಮಾಜಿಕ, ಧಾರ್ಮಿಕ ಮಿತಿಗಳನ್ನು ದಾಟಿ ಮನುಷ್ಯತ್ವದ ಪರವಾಗಿ ನಿಂತಿರುವುದು ಮಾದರಿಯಾಗಬೇಕು. ಭಾರತೀಯ ಬಹುತ್ವದೊಂದಿಗೆ ಸಮಕಾಲೀನತೆ ಮುಖಾಮುಖಿಯಾಗಿ ಬದ್ಧತೆ ಕಾಯ್ದುಕೊಳ್ಳಬೇಕು. ಕೃಷ್ಣಾ ನದಿ ತೀರದ ಬದುಕಿನ ಸಂವೇದನೆಗಳಿಂದ ಕೂಡಿದ ವಿಷ್ಣು ಶಿಂಧೆ ಅವರ ಕತೆಗಳು ಬಹುತ್ವ ಸಂಸ್ಕ್ರತಿಯನ್ನು ಪ್ರತಿಪಾದಿಸುತ್ತವೆ ಎಂದು ವಿಶ್ಲೇಷಿಸಿದರು.

ಲೇಖಕರು ಇಂದು ಪ್ರಶಸ್ತಿ, ಪ್ರಚಾರಕ್ಕೆ, ಅಧಿಕಾರದ ಲಾಲಸೆಗೆ ಗಂಟು ಬಿದ್ದು, ಅವಕಾಶವಾದದ ಒಳ ಮತ್ತು ಹೊರ ಒಪ್ಪಂದ ಮೂಲಕ ಒಬ್ಬರಿಗೊಬ್ಬರು ಪರಸ್ಪರ ಪೂರಕವಾಗಿ ಬರೆಯುತ್ತಿದ್ದಾರೆ. ಇಂಥವರ ಬರಹ ಸಾಮಾಜಿಕವಾಗಿ ಯಾವುದಕ್ಕೂ ಉಪಯೋಗವಾಗುವುದಿಲ್ಲ ಮತ್ತು ಅಂಥ ಸಾಹಿತ್ಯಕ್ಕೆ ಯಾವುದೇ ಬೆಲೆಯಿಲ್ಲ. ಬರಹಗಾರರಿಗೆ ಸಾಮಾಜಿಕ ಬದ್ಧತೆ ಅತೀ ಮುಖ್ಯ ಎಂದು ತಿಳಿಸಿದರು.

ಯುವ ಧುರೀಣ, ರಾಯಣ್ಣ ಗೋಗ್ರೀನ್ ಫೌಂಡೇಶನ್ ಅಧ್ಯಕ್ಷ ಸದಾಶಿವ ದೇಶಿಂಗೆ ಮಾತನಾಡಿ, ಬೆಳಗಾವಿ ಜಿಲ್ಲೆಯ ರಾಯಬಾಗ ಸೇರಿದಂತೆ ಕನ್ನಡ ಪ್ರಾದೇಶಿಕ ಭಾಷಾ ಸೊಗಡಿನಲ್ಲಿ ಬರಹಗಾರರು ಸೃಜನಶೀಲ ಕೃತಿಗಳನ್ನು ನೀಡಿದರೆ ಸಾಹಿತ್ಯಕ್ಕೆ ಗುರುತರ ಕೊಡುಗೆಯಾಗುತ್ತದೆ ಎಂದು ತಿಳಿಸಿದರು.

ಕತೆಗಾರ, ವಿಮರ್ಶಕ ಲಿಂಗರಾಜ ಸೊಟ್ಟಪ್ಪನವರ್ ಕೃತಿ‌ ಕುರಿತು ಮಾತನಾಡಿದರು. ಲೇಖಕ ವಿಷ್ಣು ಶಿಂಧೆ ಮಾತನಾಡಿ, ಮಣ್ಣಿನ ಮಾಯೆ ಕೃಷ್ಣಾ ನದಿ ತೀರದ ಸಂವೇದನೆ ಒಳಗೊಂಡಿದ್ದು, ಇಲ್ಲಿಯ ಕತೆಗಳು ವೈಯಕ್ತಿಕವಾಗಿ ತುಂಬಾ ಖುಷಿ ನೀಡಿವೆ ಎಂದರು.

ಅಧ್ಯಕ್ಷತೆ ವಹಿಸಿದ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ, ಡಾ. ಯಲ್ಲಪ್ಪ ಹಿಮ್ಮಡಿ ಅವರು, ನಿರಂತರ ಅಧ್ಯಯನ ಹಾಗೂ ವಾಸ್ತವ ಜಗತ್ತಿನ ಸೂಕ್ಷ್ಮ ನಿರೀಕ್ಷಿಸಿ ಸಂವೇದನಾಶೀಲ ಕೃತಿಗಳ ರಚನೆಗೆ ಮುಂದಾಗಬೇಕು. ಈ ದೃಷ್ಟಿಯಿಂದ ವಿಷ್ಣು ಶಿಂಧೆ ಒಬ್ಬ ಗಮನಾರ್ಹ ಲೇಖಕರಾಗಿ ಗಮನ ಸೆಳೆಯುತ್ತಾರೆ ಎಂದು ಹೇಳಿದರು.

ಕೃಷ್ಣಾ ಘೋರ್ಪಡೆ, ಡಾ. ಸಿದ್ಧಗಂಗಮ್ಮ, ಡಾ.ರಾಮಕೃಷ್ಣ ಮರಾಠೆ, ಡಾ. ಕೆ. ಎನ್. ದೊಡ್ಡಮನಿ, ಪ್ರೊ. ಮಾರುತಿ ಬುದ್ಯಾಳ, ಪ್ರೊ. ಹೊಸಳ್ಳಿ, ರವಿ ಕೋಟಾರಗಸ್ತಿ, ರಮಾನಾಥ ಬನಶಂಕರಿ ಮೊದಲಾದವರು ಉಪಸ್ಥಿತರಿದ್ದರು. ಪ್ರೊ. ಶಶಿಕಾಂತ ತಾರದಾಳೆ ಪರಿಚಯಿಸಿ ಸ್ವಾಗತಿಸಿದರು. ಡಾ. ಜಗನಾಥ ಗೆನೆಣ್ಣವರ ನಿರೂಪಿಸಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ