ಬೆಳಗಾವಿ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಶಿವಾನಂದ ನೀಲಣ್ಣವರ ಪ್ರಕರಣ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣದ ಸಂಬಂಧ ಯಾರೊಬ್ಬರೂ ಅವರ ವಿರುದ್ಧ ಇದುವರೆಗೂ ದೂರು ನೀಡದೆ ಇರುವುದು ಅತ್ಯಂತ ಮಹತ್ವದ ಅಂಶವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಮಟ್ಟಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.
ಶಿವಾನಂದ ನೀಲಣ್ಣವರ ವಿರುದ್ಧ 4500ಕೋಟಿ ವಂಚನೆ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ನೀಲಣ್ಣವರ ಪರ ನ್ಯಾಯವಾದಿ ಮಂಜುನಾಥ ಜಿ.ಎಲ್. ಹೇಳಿಕೆ ನೀಡಿದ್ದು,
ನೀಲಣ್ಣವರ ಅವರನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿದ್ದಾರೆ,ಇನ್ನೂ ಎರಡು ದಿನಗಳ ಕಾಲ ತನಿಖೆ ಆಗುತ್ತದೆ.
ಇದಾದ ನಂತರ ಸಿಐಡಿಗೆ ಅಧಿಕಾರಿಗಳಿಗೆ ಹೋಗುತ್ತದೆ.
ಮೇಲ್ನೋಟಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೀಲಣ್ಣವರ ಅವರ ಕುರಿತು ಈಗ ಕೇಳಿ ಬಂದಿರುವ ಆಪಾದನೆಗಳಿಗೆ ಸಂಬಂಧಿಸಿದ ಮೇಲೆ ಯಾವುದೇ ಲೀಗಲ್ ದೂರು ಇಲ್ಲ.
ಯಾರು ಆತಂಕಕ್ಕೆ ಒಳಗಾಗಬೇಡಿ. ಎಲ್ಲರೂ ಧೈರ್ಯವಾಗಿರಿ ಎಂದ ಅವರು,
ದೇವರ ದಯೆಯಿಂದ ಒಳ್ಳೆಯದು ಆಗುತ್ತದೆ.
ಸತ್ಯಕ್ಕೆ ಜಯ ಸಿಗಲಿದೆ
35 ಸಾವಿರ ಜನರು ಠೇವಣಿ ಹಣ ಇಟ್ಟಿದ್ದಾರೆ.
ಕಾಗದಲ್ಲಿ ಹೆಚ್ಚಿನ ಹಣ ಬಡ್ಡಿ ಕೊಡುವ ಬಗ್ಗೆ ದಾಖಲು ಮಾಡಿಲ್ಲ. ಬೇಲ್ ಗೆ ಮನವಿ ಮಾಡುತ್ತೇವೆ. ಟ್ರಯಲ್ ನಡೆದು ಸತ್ಯಾಂಶ ಬರುತ್ತದೆ.
ಆರ್ ಬಿಐ; ಸೆಬಿ ಗೈಡ್ಲೈನ್ ಉಲ್ಲಂಘನೆ ಆಗಿದೆ. ಎನ್ನುವುದು ಪೊಲೀಸರ ವಾದ. ಆದರೆ, ಯಾರು ದೂರು ಕೊಟ್ಟಿಲ್ಲ, ಪೊಲೀಸರ ಸುಮೋಟ್ ಕೇಸ್ ಹಾಕಿದ್ದಾರೆ ಎಂದು ಹೇಳಿದರು.
