Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ದಂಡುಮಂಡಳಿ ವ್ಯಾಪ್ತಿಯಡಿ ಬರುವ ನಾಗರಿಕ ಕ್ಷೇತ್ರವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಸಂಸದ ಶೆಟ್ಟರ್ ಚರ್ಚೆ

ಬೆಳಗಾವಿ : ನವ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿ, ರಕ್ಷಣಾ ಸಚಿವಾಲಯದ ಆದೇಶದಂತೆ ಬೆಳಗಾವಿ ದಂಡುಮಂಡಳಿ ವ್ಯಾಪ್ತಿಯಡಿ ಬರುವ ನಾಗರಿಕ ಕ್ಷೇತ್ರವನ್ನು ಗುರುತಿಸಿದ್ದು, ಇದನ್ನು ಶೀಘ್ರ ಮಹಾನಗರ ಪಾಲಿಕೆ ಬೆಳಗಾವಿಗೆ ಹಸ್ತಾಂತರಿಸುವ ಕ್ರಮದ ಬಗ್ಗೆ ಚರ್ಚಿಸಲಾಯಿತು ಎಂದು ಬೆಳಗಾವಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ಬೆಳಗಾವಿ ದಂಡುಮಂಡಳಿ ವ್ಯಾಪ್ತಿಯಡಿ ಗುರುತಿಸಲಾದ ನಾಗರಿಕ ಕ್ಷೇತ್ರವನ್ನು ಗುರುತಿಸಿದ್ದು ಹಾಗೂ ಇದನ್ನು ಮಹಾನಗರ ಪಾಲಿಕೆ ಬೆಳಗಾವಿಗೆ ಹಸ್ತಾಂತರಿಸುವ ಕುರಿತಾದ ಸಮಗ್ರವಾದ ಮಾಹಿತಿಯನ್ನು ಈಗಾಗಲೇ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನವ-ದೆಹಲಿ ರಕ್ಷಣಾ ಇಲಾಖೆ ಕಾರ್ಯದರ್ಶಿಗಳು, ಇವರಿಗೆ ಕಳುಸಿರುವ ವಿಚಾರವನ್ನು ಸಂಸದರು ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿ, ಆದಷ್ಟು ಶೀಘ್ರ ಈ ಹಸ್ತಾಂತರ ಕಾರ್ಯ ನಡೆಯುವಂತೆ ನೋಡಿಕೊಳ್ಳಲು ಕೋರಿದರು.

ಬೆಳಗಾವಿಯಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ಕೈಗಾರಿಕೆಗಳನ್ನು ಸ್ಥಾಪಿಸಲು ಜಮೀನು ಇತ್ಯಾದಿಗಳ ಸೌಲಭ್ಯ ಲಭ್ಯವಿರುವ ಪ್ರಯುಕ್ತ ಈ ನಿಟ್ಟಿನಲ್ಲಿಯೂ ಸಹ ವಿಷಯವನ್ನು ಅವಲೋಕಿಸುವಂತೆ ಕೋರಲಾಯಿತು.

ಚರ್ಚೆಗನುಗುಣವಾಗಿ ಪ್ರಸ್ತಾಪಿತ ವಿಷಯಗಳ ಕುರಿತು ಅವಲೋಕಿಸಿ, ಶೀಘ್ರ ಕ್ರಮವನ್ನು ಜರುಗಿಸುವುದಾಗಿ ಕೇಂದ್ರ ರಕ್ಷಣಾ ಸಚಿವರು ಭರವಸೆ ನೀಡಿದ್ದಾಗಿ ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿಬಹುಕೋಟಿ ರೂ.ವಂಚನೆ ಪ್ರಕರಣ: ಆರೋಪಿಯ ಬಂಧನಶಾಲಾ ಹಾಸ್ಟೆಲ್‌ನಲ್ಲಿ ಮಲಗಿದ್ದ ವಿದ್ಯಾರ್ಥಿನಿಯರಿಗೆ ಹಾವು ಕಡಿತ; ಮೂವರು ಸಾವು, ಮೂವರು ಗಂಭೀರಬೆಳಗಾವಿಗೆ ಮತ್ತೆ ಅನ್ಯಾಯ : ಬೆಂಗಳೂರು–ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಕ್ಕೆ ಸಿದ್ಧತೆ : ಪ್ರಯಾಣದ ಅವಧಿ 16 ತಾಸುಮೇಯರ್, ಉಪ ಮೇಯರ್ ಪಾಲಿಕೆಯಲ್ಲಿ ರಾಜ್ಯದ ಪರ ಗೊತ್ತುವಳಿ ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ: ಅಶೋಕ ಚಂದರಗಿನಕಲಿ ಹೆಸರಿನಲ್ಲಿ 25 ಮದುವೆ ; ತಮ್ಮ ಅಳಿಯನ ವಿರುದ್ಧವೇ ದೂರು ದಾಖಲಿಸಿದ ಬಿಜೆಪಿ ಶಾಸಕ : ಇಬ್ಬರ ಬಂಧನನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನʼಪ್ರತಿಭಟನೆ ಪ್ರತಿಧ್ವನಿಸಲಿಲ್ಲ….ʼ : ಕಾಂಗ್ರೆಸ್‌ ಸಂಸದ ಶಶಿ ತರೂರ ಹೇಳಿಕೆಗೆ ಕಾಂಗ್ರೆಸ್‌ ನಾಯಕ ವೇಣುಗೋಪಾಲ ಎಚ್ಚರಿಕೆಜೈಲಿನಲ್ಲಿದ್ದ ಪ್ರಿಯಕರನ ಭೇಟಿಗೆ ಬಂದ ಅಪ್ರಾಪ್ತ ಬಾಲಕಿಯ ಜೇಬಿನಲ್ಲಿ ಸಿಕ್ಕಿತು 10 ಜೀವಂತ ಗುಂಡುಗಳು….!ಭಾರತದಲ್ಲಿ ʼಏಜ್ ವೆರಿಫಿಕೇಷನ್ʼ ಫೀಚರ್‌ ಪರೀಕ್ಷೆಗೆ ಮುಂದಾದ ವಾಟ್ಸ್ಆ್ಯಪ್‌ವಿದೇಶಿ ಉದ್ಯೋಗದ ಆಮಿಷ ; ಪೋರ್ಚುಗಲ್‌ಗೆ ಹೋದ ಭಾರತದ ಯುವತಿ ಬಿಯರ್ ಶಾಪ್‌ ಮಾಲೀಕನಿಗೆ ಮಾರಾಟ….?!