ಬೆಳಗಾವಿ: ಖಾನಾಪುರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಈಗ ಮತ್ತೆ ಹುಲಿ ಹಾಗೂ ಚಿರತೆಗಳ ಹಾವಳಿ ಎದುರಾಗಿದೆ. ಇದರಿಂದಾಗಿ ಜನ ಮತ್ತೆ ಆತಂಕಕ್ಕೆ ತುತ್ತಾಗಿದ್ದಾರೆ. ಹುಲಿ ದಾಳಿಗೆ ಸಾಕು ನಾಯಿ ಬಲಿಯಾಗಿದೆ. ಇದು ಜನತೆಯ ಭಯಕ್ಕೆ ಕಾರಣವಾಗಿದೆ. ಜಾಂಬೋಟಿ ಅರಣ್ಯ ಪ್ರದೇಶದ ಬಳಿ ಹುಲಿ ಹಾಗೂ ಚಿರತೆಗಳ ಹೆಜ್ಜೆ ಗುರುತು ಕಂಡು ಬಂದಿದೆ. ರೈತರಾಗಿರುವ ಸಂಭಾಜಿ ಸಡೇಕರ್ ಅವರ ತೋಟದಲ್ಲಿ ಶುಕ್ರವಾರ ಹುಲಿ ಕಾಣಿಸಿಕೊಂಡಿದೆ. ಶನಿವಾರ ಬೆಳಗ್ಗೆ ಅವರ ನಾಯಿ ಮೃತಪಟ್ಟ ಸ್ಥಳದಲ್ಲೇ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದೆ.
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.