Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ರಾಜಕಾರಣದಲ್ಲಿ ಸಕ್ಸಸ್ ಆದವರು ರಾಜ್ಯ ರಾಜಕಾರಣದಲ್ಲಿ ಸಕ್ಸಸ್ ಆಗುವುದರಲ್ಲಿ ಅನುಮಾನಗಳೇ ಇಲ್ಲ ಸತೀಶ ಜಾರಕಿಹೊಳಿ ಅವರಿಗೆ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬಿಂಬಗಳು ಸ್ಪಷ್ಟವಾಗಿ ಕಾಣಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಸತೀಶ್ ಜಾರಕಿಹೊಳಿ ಅವರಿಗೆ ಪ್ರೆಸ್ ಕ್ಲಬ್ ನೀಡಿದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಯೇ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ ಮತ್ತು ಖಚಿತತೆ ಸತೀಶ್ ಜಾರಕಿಹೊಳಿಯವರಿಗೆ ಇರುವ ಕಾರಣದಿಂದಲೇ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಜಾರಕಿಹೊಳಿಯವರನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ತೇರನ್ನು ಎಳೆಯುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈಗಳ ಪಕ್ಕದಲ್ಲೇ ಜಾರಕಿಹೊಳಿಯವರ ಕೈಗಳಿವೆ ಎಂದು ನುಡಿದರು.

ಜಾರಕಿಹೊಳಿಯವರು ಹೆಚ್ಚು ಮಾತಾಡುವುದಿಲ್ಲ, ಐವತ್ತು ಮಂದಿ ಸೇರಿರುವ ಸಭೆಯಾಗಲಿ, ಐದು ಲಕ್ಷ ಮಂದಿ ಸೇರಿರುವ ಸಭೆಯಾಗಲಿ ಐದೇ ನಿಮಿಷದಲ್ಲಿ ಮಾತು ಮುಗಿಸುತ್ತಾರೆ ಎಂದು ಬಹಳ ಮಂದಿ ನನಗೆ ಹೇಳಿದ್ದಾರೆ. ಅವರಿಗೆಲ್ಲಾ ನಾನು ಒಂದೇ ಉತ್ತರ ಕೊಡುತ್ತೇನೆ, "ದಡದಲ್ಲಿ ನಿಂತು ನೋಡುವಾಗ ಸಮುದ್ರ ಬಹಳ ಪ್ರಶಾಂತವಾಗಿ ಕಾಣುತ್ತದೆ. ಆದರೆ ಸಮುದ್ರದ ರಭಸ ಇರುವುದು ಅದರ ಆಳದಲ್ಲಿ. ಜಾರಕಿಹೊಳಿಯವರ ಮೌನದ ಆಳದಲ್ಲಿ ಅವರ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ ಎಂದರು.

ಯಾವತ್ತು Easy chair politics ಗೆ ಒರಗಿಕೊಳ್ಳದ ಸತೀಶ್ ಅವರು ಬಹಳ ಕಷ್ಟವಾದ ಹಾದಿಯನ್ನೇ ಆರಿಸಿಕೊಂಡು ಅದರಲ್ಲಿ ಸಕ್ಸಸ್ ಆಗುತ್ತಾರೆ. ಇದು ಸ್ಪಷ್ಟವಾಗಿ ಮತ್ತೊಮ್ಮೆ ಗೋಚರಿಸಿದ್ದು ಶಿಗ್ಗಾಂವ್ ಉಪ ಚುನಾವಣೆಯಲ್ಲಿ. ಯಾವ ಮಾಧ್ಯಮದವರೂ ಕಲ್ಪಿಸಿಕೊಳ್ಳದ ರೀತಿಯಲ್ಲಿ ಹಲವು ಸವಾಲುಗಳ ನಡುವೆಯೂ ಕಾಂಗ್ರೆಸ್ ಅನ್ನು ಗೆಲ್ಲಿಸಿಕೊಂಡೇ ಬಂದರು. ಇದಕ್ಕಾಗಿ ಅವರು ಮಾಡಿದ ಕೆಲಸವನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ.

ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತರು ಹೇಗೆ ಇಡೀ ಕ್ಷೇತ್ರದ ತುಂಬ ಹರಡಿ ಹೋಗಿದ್ದರು. ಅವರ ಮೂಲಕ ಹೇಗೆ ಕ್ಷೇತ್ರದ ರಾಜಕೀಯ ಚಿತ್ರಣವನ್ನು ಬದಲಿಸಿದರು ಎನ್ನುವುದು ಪ್ರತಿಯೊಬ್ಬ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೂ ಪಾಠ ಆಗುತ್ತದೆ ಎಂದು ವಿವರಿಸಿದರು.

ಸೈದ್ಧಾಂತಿಕ ರಾಜಕಾರಣ ಅಳಿವಿನ‌ ಅಂಚಿನಲ್ಲಿರುವ ಈ ಕಾಲಘಟ್ಟದಲ್ಲಿ " ಮಾನವ ಬಂಧುತ್ವ ವೇದಿಕೆ" ಮೂಲಕ ಇಡೀ ರಾಜ್ಯದಲ್ಲಿ ಸೈದ್ಧಾಂತಿಕ‌ ಪಡೆಯನ್ನು ಕಟ್ಟುತ್ತಿದ್ದಾರೆ. ಇವತ್ತು ಅಭಿಮಾನಿ ಪಡೆಯನ್ನು ಕಟ್ಟುವುದು ಬಹಳ ಸಲೀಸು. ಧಾರವಾಹಿ ನಟರೂ ಅಭಿಮಾನಿ ಪಡೆ ಕಟ್ಟುತ್ತಾರೆ. ಆದರೆ ಸೈದ್ಧಾಂತಿಕ‌ ಪಡೆ ಕಟ್ಟವುದು ಬಹಳ ದೊಡ್ಡ ಸವಾಲು. ಅಧಿಕಾರ-ಹಣ-ಜಾತಿಯ ಬಲ ಇದ್ದರೆ ರಾತ್ರಿ ಬೆಳಗಾಗುವುದರೊಳಗೆ ಅಭಿಮಾನಿಗಳು ಸಾಲುಗಟ್ಟುತ್ತಾರೆ. ಆದರೆ ಸೈದ್ದಾಂತಿಕ ಪಡೆ ಕಟ್ಟಲು ನಿತ್ಯ ಕಸರತ್ತು ಮಾಡಬೇಕಾಗುತ್ತದೆ. ಈ ಕಸರತ್ತನ್ನು ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯದ ತುಂಬ ಮಾಡುತ್ತಿದ್ದಾರೆ. ಈ ಮಾನವ ಬಂಧುತ್ವ ವೇದಿಕೆ ಕಾಂಗ್ರೆಸ್ಸಿಗೆ ಸೈದ್ಧಾಂತಿಕವಾಗಿ ನೀರು ಗೊಬ್ಬರ ಹಾಕುತ್ತಿದೆ ಎಂದು ವಿವರಿಸಿದರು.

ಜಾರಕಿಹೊಳಿ ಅವರಲ್ಲದೆ ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತಗಳು ಮತ್ತು ವಿಪರೀತ ಆರ್ಥಿಕ ಹೊರೆಯ ಬಳಿಕವೂ ಸಮತೋಲನದಿಂದ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕೇ ನಾನು ಆಗಲೇ ಹೇಳಿದ್ದು, ಸತೀಶ್ ಅವರು ಕಷ್ಟವಾದ ಸವಾಲುಗಳಿಗೇ ಕೈ ಹಾಕಿ ಅದರಲ್ಲಿ ಸಕ್ಸಸ್ ಆಗುತ್ತಾರೆ.

ಬೆಳಗಾವಿ ರಾಜಕಾರಣದಲ್ಲಿ ಸಕ್ಸಸ್ ಆದವರು ರಾಜ್ಯ ರಾಜಕಾರಣದಲ್ಲಿ ಸಕ್ಸಸ್ ಆಗುವುದರಲ್ಲಿ ಅನುಮಾನಗಳೇ ಇಲ್ಲ.

ಹಾಗೆಯೇ ಬಹಳ ದೊಡ್ಡ ಉದ್ಯಮಿಯಾಗಿ ಸಕ್ಸಸ್ ಆಗಿದ್ದರೂ, ಉದ್ಯಮ ಮತ್ತು ರಾಜಕಾರಣವನ್ನು ಪರಸ್ಪರ ಬೆರೆಸದೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವಲ್ಲೂ ಸಕ್ಸಸ್ ಆಗಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಬೆಂಗಳೂರು ಪ್ರೆಸ್ ಕ್ಲಬ್ , ವರ್ಷದ ವ್ಯಕ್ತಿ ಪ್ರಶಸ್ತಿಗೆ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಸಮಾಜವಾದಿ ಚಿಂತಕರೂ, ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿ ವರ್ಮಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅವರು, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿ