Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿ

ಬೆಳಗಾವಿ : " ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿ  ಸಾಹಿತ್ಯಾಭಿರುಚಿಯನ್ನು ಹೆಚ್ಚಿಸುವ ಕಾರ್ಯ ನಡೆಸಿರುವ ರಂಗಸಂಪದದ ಸಮಾಸ ವೇದಿಕೆಯ ಕಾರ್ಯ ಸ್ತುತ್ಯಾರ್ಹವಾಗಿದೆ " ಎಂದು ಪ್ರೊ. ಶಶಿಧರ ಹೊಸಕೋಟಿ ಹೇಳಿದರು. 

              
ಸಮಾನ ಮನಸ್ಕರ ಮಾಸಿಕ ಸಮ್ಮಿಲನದ ಎರಡನೆಯ ವರ್ಷದ ಮೊದಲ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳು ಅಕಾಡೆಮಿಕ್ ವಲಯಕ್ಕೆ ಸೀಮಿತವಾಗದೆ ಶಿಕ್ಷಣೇತರ ಕ್ಷೇತ್ರಗಳಿಗೂ ವ್ಯಾಪಿಸಿಕೊಳ್ಳುವಂತಾಗಬೇಕು. ಅಂತಹ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತ ಬಂದಿರುವ ಸಮಾಸದ ಸಂಯೋಜಕರು ಅಭಿನಂದನಾರ್ಹರೆಂದರು. 
         
ಸಮಾಸದ 13 ನೆಯ ತಿಂಗಳ ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಪ್ರೊ. ಶಂಕರಮೂರ್ತಿಯವರು ಅನಕೃ ಅವರ ನಟಸಾರ್ವಭೌಮ ಕಾದಂಬರಿಯ ಕುರಿತು ಮಾತನಾಡಿ ರಂಗಭೂಮಿ ಮತ್ತು ಕಲಾವಿದರಿಗೆ ಸಂಬಂಧಿಸಿದಂತೆ ಇಷ್ಟೊಂದು  ವಿಚಾರಗಳನ್ನು ಒದಗಿಸುವ ಬೇರೆ ಕೃತಿ ಕನ್ನಡದಲ್ಲಿಲ್ಲ. ಇಲ್ಲಿಯ ಕಥೆ ಮತ್ತು  ಪಾತ್ರಗಳ ಚಿತ್ರಣ ಅದ್ಭುತವಾಗಿದ್ದು ಕಾದಂಬರಿ ಸಾರ್ವಭೌಮ ಅ. ನ. ಕೃಷ್ಣರಾಯರ ಈ ನಟಸಾರ್ವಭೌಮ ಕನ್ನಡದ  ಒಂದು ಮೇರುಕೃತಿ ಎಂದರು.   

ಆರ್. ಟಿ. ಶರಣಬಸವ ಅವರು ಓರ್ವ  ಓದುಗರಾಗಿ ಅನಕೃ ಕುರಿತು ಮಾತನಾಡಿದರು. 

ಪೂಜಾ ಕಾರಜೋಳ ಸ್ವಾಗತಿಸಿದರು. ಸಮಾಸ ವೇದಿಕೆಯ ಮೊದಲ ವರ್ಷದ 12 ತಿಂಗಳುಗಳಲ್ಲಿ ನಡೆದ ಕಾರ್ಯಕ್ರಮಗಳ ಸಂಕ್ಷಿಪ್ತ ನೋಟವನ್ನೊಳಗೊಂಡ ವಾರ್ಷಿಕ ವರದಿ ಪುಸ್ತಿಕೆಯನ್ನು  ಬಿಡುಗಡೆ ಮಾಡಲಾಯಿತು. ಅದರ ಸಂಪಾದಕ ಎಲ್. ಎಸ್. ಶಾಸ್ರ್ರಿ ಮತ್ತು, ಶಿರೀಷ ಜೋಶಿ, ಡಾ. ರಾಮಕೃಷ್ಣ ಮರಾಠೆ, ಮಮತಾ ಶಂಕರ , ಡಾ. ಎಚ್. ಬಿ.ಕೋಲಕಾರ ಅವರು ಸಮಾಸದ ನಡೆದುಬಂದ ದಾರಿಯನ್ನು ಸ್ಮರಿಸಿದರು. ಡಾ. ಅರವಿಂದ ಕುಲಕರ್ಣಿ ನಿರೂಪಿಸಿದರು. ಪ್ರಸಾದ ಕಾರಜೋಳ ವಂದಿಸಿದರು. 
    
ಧಾರವಾಡ ರಂಗಾಯಣದ ಮುಖ್ಯಸ್ಥ ಝಾಕಿರ್ ನದಾಫ್,   ಪದ್ಮಾ ಕುಲಕರ್ಣಿ  ಆರ್. ಬಿ. ಕಟ್ಟಿ, ಗುರುನಾಥ ಕುಲಕರ್ಣಿ, ಶ್ರೀ ಮುದೇನೂರ,  ಚಾಟೆ, ಜ್ಯೋತಿ ಬದಾಮಿ, ವೆಂ. ಲ. ಜೋಶಿ, ಆನಂದ ಪುರಾಣಿಕ, ಶಶಿಧರ ಚರಂತಿಮಠ,  ಅಶೋಕ ಬೈಲವಾಡ, ಶರಣಯ್ಯ ಮಠಪತಿ , ಚಿದಂಬರ ಮುನವಳ್ಳಿ, ಮದನ ಕಣಬೂರ,  ಬಿ. ಕೆ. ಕುಲಕರ್ಣಿ ಮೊದಲಾದವರನ್ನೊಳಗೊಂಡಂತೆ 55 ಜನ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಹುಕೋಟಿ ವಂಚನೆ : ನೀಲಣ್ಣವರ, ಆಪ್ತರ ನಿವಾಸಗಳ ಮೇಲೆ ಇಡಿ ದಾಳಿSIR : ಗಣತಿ ನಮೂನೆ ಸಲ್ಲಿಸಲು 17 ರವರೆಗೆ ಅವಕಾಶಈ ನಿಗೂಢ ಬಾವಿಯಲ್ಲಿ ಮತ್ತೆ ಅಚ್ಚರಿ ; ಸಮುದ್ರದ ಅಲೆಯಂತೆ ತನ್ನಷ್ಟಕ್ಕೆ ತಾನೇ ಏರಿಳಿಯುವ ನೀರು..!ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅರಸುಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!ಕರ್ನಾಟಕದ 4 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು...!ಯುವಜನತೆ  ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ  ಲಕ್ಷ್ಮೀ ಇದ್ದರೆ DK ಸಂಪುಟಕ್ಕೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿ