ಬೆಳಗಾವಿ: ರಾಣಿ ಚನ್ನಮ್ಮ ವೃತ್ತದ ಬಳಿ ಸೋಮವಾರ ಕಾರು ಚಾಲನೆ ಮಾಡಿದ ಬಾಲಕನನ್ನು ಗುರುತಿಸಿದ ಬೆಳಗಾವಿ ಪೊಲೀಸರು, ಆತನ ಪಾಲಕರಿಗೆ ಈಗ ಮೋಟಾರು ವಾಹನ ಕಾಯ್ದೆಯಡಿ ನೋಟಿಸು ನೀಡುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ. ವಾಹನದ ಮಾಲೀಕತ್ವ ಹೊಂದಿದ್ದ ಬಾಲಕನ ತಂದೆಗೆ ರೂ.25 ಸಾವಿರ ದಂಡ ವಿಧಿಸಲಾಗಿದೆ.
ಸೋಮವಾರ ಬೆಳಿಗ್ಗೆ 10.50ರ ಸುಮಾರಿಗೆ ಬಾಲಕ ಕಾರು ಚಲಾಯಿಸುತ್ತಿದ್ದ. ಸಂಚಾರ ವಿಭಾಗದ ಪೊಲೀಸರು ವಾಹನ ಸಮೇತ ಬಾಲಕನನ್ನು ಠಾಣೆಗೆ ಕರೆ ತಂದರು. ಪಾಲಕರನ್ನು ಕರೆಯಿಸಿ ತಿಳಿವಳಿಕೆ ಹೇಳಿ, ದಂಡ ವಿಧಿಸಲಾಗಿದೆ ಎಂದು ಬೆಳಗಾವಿ ಮಹಾನ್ರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ತಿಳಿಸಿದ್ದಾರೆ.