Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಾರ್ಮುಜ್‌ನಲ್ಲಿ ಅಮೆರಿಕ ಪೈಲಟ್‌ಗಳ ಜೀವ ಉಳಿಸಿದ ಡ್ರೋನ್ ಬೋಟ್ ; ಇದರ ಹಿಂದಿನ ಮಾಸ್ಟರ್‌ಮೈಂಡ್ ಭಾರತದ ಮೂಲದ ʼವಿಭವʼ ಯಾರು ?

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ಪಡೆಗಳಿಂದ ಹೊಡೆದುರುಳಿಸಲ್ಪಟ್ಟ ಅಮೆರಿಕದ ಅಪಾಚೆ ಹೆಲಿಕಾಪ್ಟರ್‌ನ ಪೈಲಟ್ ಮತ್ತು ಸಹ-ಪೈಲಟ್‌ರನ್ನು ರಕ್ಷಿಸುವಲ್ಲಿ ಅಮೆರಿಕ ನೌಕಾಪಡೆಯ ಡ್ರೋನ್ ಬೋಟ್ (ಮಾನವರಹಿತ ದೋಣಿ) ಯಶಸ್ವಿಯಾಗಿದೆ. ಅತ್ಯಂತ ಸಾಹಸಮಯವಾಗಿದ್ದ ಈ ರಕ್ಷಣಾ ಕಾರ್ಯಾಚರಣೆಗೆ ಬಳಕೆಯಾದ ಸ್ವಯಂಚಾಲಿತ ಮಾನವ ರಹಿತ ದೋಣಿಯನ್ನು, ಭಾರತೀಯ ಮೂಲದ ವಿಭವ್ ಅಲ್ತೇಕರ್ ಸಹ-ಸ್ಥಾಪಕರಾಗಿರುವ ಟೆಕ್ಸಾಸ್ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಸಮುದ್ರದಲ್ಲಿ ಸಿಲುಕಿದ್ದ ಸೈನಿಕರನ್ನು ರಕ್ಷಿಸಲು ಅಮೆರಿಕ ಸೇನೆಯು ಮಾನವರಿಲ್ಲದ ಸ್ವಯಂಚಾಲಿತ ನೌಕೆಯನ್ನು ಬಳಸಿದ್ದು ಇದೇ ಮೊದಲು ಎನ್ನಲಾಗಿದೆ.

ಅಮೆರಿಕದ ಸಶಸ್ತ್ರ ಪಡೆಗಳು ‘ಸರೋನಿಕ್ ಟೆಕ್ನಾಲಜೀಸ್’ (Saronic Technologies) ಕಂಪನಿ ಅಭಿವೃದ್ಧಿಪಡಿಸಿರುವ ‘ಕೋರ್ಸೇರ್’ (Corsair) ಎಂಬ ಡ್ರೋನ್ ಬೋಟ್ ಅನ್ನು ಕಳೆದ ಕೆಲವು ಸಮಯದಿಂದ ಬಳಸುತ್ತಿವೆ.
‘ಕೋರ್ಸೇರ್’ ಬೋಟ್‌ನ ಪ್ರಮುಖ ವೈಶಿಷ್ಟ್ಯಗಳು: ಇದು 24 ಅಡಿ ಉದ್ದವಿದ್ದು, ಡೀಸೆಲ್ ಇಂಧನದಿಂದ ಚಲಿಸುತ್ತದೆ. ಇದು ಗಂಟೆಗೆ ಗರಿಷ್ಠ 35 ನಾಟ್ಸ್ ವೇಗದಲ್ಲಿ ಚಲಿಸುವ ಇದು, 1,000 ನಾಟಿಕಲ್ ಮೈಲಿಗಿಂತಲೂ ಅಧಿಕ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಆಧಾರದ ಮೇಲೆ ಇದು ಕಾರ್ಯನಿರ್ವಹಿಸುತ್ತದೆ. ಇದು ಸುಮಾರು 1,000 ಪೌಂಡ್ ತೂಕದ ಸಾಮಗ್ರಿಗಳನ್ನು ಹೊತ್ತೊಯ್ಯಬಲ್ಲದು.

ಈ ದೋಣಿಯು ಸದ್ಯ ಅಮೆರಿಕ ನೌಕಾಪಡೆಯ ‘ಟಾಸ್ಕ್ ಫೋರ್ಸ್ 59’ ರ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಈ ವಿಶೇಷ ಪಡೆಯು ಕೃತಕ ಬುದ್ಧಿಮತ್ತೆ ಆಧಾರಿತ ಮಾನವರಹಿತ ನೌಕೆಗಳು ಮತ್ತು ಡ್ರೋನ್‌ಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಸಾಂಪ್ರದಾಯಿಕ ಸೇನಾ ಸಾಮಗ್ರಿಗಳಿಗೆ ಪರ್ಯಾಯವಾಗಿ ಮಾನವರಹಿತ ವಾಹನಗಳನ್ನು ವಿಸ್ತರಿಸುವ ಪೆಂಟಗನ್‌ನ ಮಹತ್ವಾಕಾಂಕ್ಷಿ ಯೋಜನೆಯಡಿ ಇದನ್ನು ನಿಯೋಜಿಸಲಾಗಿದೆ.
ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸರೋನಿಕ್ ಟೆಕ್ನಾಲಜೀಸ್ ಕಂಪನಿಯು ಸ್ವಯಂಚಾಲಿತ ನೌಕೆಗಳ ತಯಾರಿಕೆಗಾಗಿ ಅಮೆರಿಕ ನೌಕಾಪಡೆಯೊಂದಿಗೆ 392 ಮಿಲಿಯನ್ ಅಮೆರಿಕನ್‌ ಡಾಲರ್ ಮೌಲ್ಯದ ಬೃಹತ್ ಉತ್ಪಾದನಾ ಒಪ್ಪಂದವನ್ನು ಮಾಡಿಕೊಂಡಿದೆ.
ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಈ ಕಂಪನಿಯನ್ನು ಸೆಪ್ಟೆಂಬರ್ 2022 ರಲ್ಲಿ ಸ್ಥಾಪಿಸಲಾಯಿತು. 11 ವರ್ಷಗಳ ಕಾಲ ಅಮೆರಿಕದ ಪ್ರಸಿದ್ಧ ‘ನೇವಿ ಸೀಲ್ಸ್’ (Navy SEALs) ಪಡೆಯಲ್ಲಿದ್ದ ಡಿನೋ ಮಾವ್ರೂಕಾಸ್ ಸೇರಿದಂತೆ ನಾಲ್ವರು ಸೇರಿ ಇದನ್ನು ಆರಂಭಿಸಿದರು. ಅವರಲ್ಲಿ ಭಾರತೀಯ ಮೂಲದ ವಿಭವ್ ಅಲ್ತೇಕರ್, ಡೌಗ್ ಲ್ಯಾಂಬರ್ಟ್ ಮತ್ತು ರಾಬ್ ಲೆಹ್ಮನ್ ಇತರ ಮೂವರು ಸಹ-ಸ್ಥಾಪಕರಾಗಿದ್ದಾರೆ.

ಯಾರು ಈ ವಿಭವ ಅಲ್ತೇಕರ್ ?
ಸರೋನಿಕ್ ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ (CTO) ವಿಭವ ಅಲ್ತೇಕರ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಂಪನಿಯ ವೆಬ್‌ಸೈಟ್ ಪ್ರಕಾರ, ವಿಭವ, ಕಂಪನಿಯ ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಸಾಫ್ಟ್‌ವೇರ್ ಆರ್ಕಿಟೆಕ್ಚರ್ ಅಭಿವೃದ್ಧಿಯ ನೇತೃತ್ವ ವಹಿಸಿದ್ದಾರೆ.
ಅಲ್ತೇಕರ್ ಅವರು ಕಂಪನಿಯ ‘ಫಾರ್ವರ್ಡ್ ಡಿಪ್ಲಾಯ್ಡ್ ಎಂಜಿನಿಯರಿಂಗ್, ಪ್ರಾಡಕ್ಟ್ ಮತ್ತು ಸ್ಪೆಷಲ್ ಪ್ರೋಗ್ರಾಮ್ಸ್’ ಹಾಗೂ ಸಾಫ್ಟ್‌ವೇರ್ ವಿಭಾಗ ಮುನ್ನಡೆಸುತ್ತಿದ್ದಾರೆ. ಇದರೊಂದಿಗೆ ಪರ್ಸೆಪ್ಶನ್ (ಗ್ರಹಿಕೆ), ನ್ಯಾವಿಗೇಷನ್, ಮಷಿನ್ ಲರ್ನಿಂಗ್, ಕಮಾಂಡ್ ಅಂಡ್ ಕಂಟ್ರೋಲ್ ಮತ್ತು ಸಿಸ್ಟಮ್ಸ್ ಇಂಟಿಗ್ರೇಷನ್ ಒಳಗೊಂಡ ಬಹು-ಶಿಸ್ತಿನ ತಂಡಗಳೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ.
ವಿಭವ ಅಲ್ತೇಕರ್ ಅವರು ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಕಡಲ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಪರಿಣತಿ ಹೊಂದಿರುವ ಅತ್ಯಂತ ಯಶಸ್ವಿ ‘ಪರ್ಸೆಪ್ಶನ್ ಎಂಜಿನಿಯರ್’ ಆಗಿದ್ದಾರೆ. ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಅವರು ಅಮೆರಿಕದ ರಕ್ಷಣಾ ಇಲಾಖೆಯ (DoD) ತಂತ್ರಜ್ಞಾನದ ಪ್ರಗತಿಗಾಗಿ ವಿನಿಯೋಗಿಸಿದ್ದಾರೆ. ಈ ಹಿಂದೆ ಪ್ರಸಿದ್ಧ ರಕ್ಷಣಾ ತಂತ್ರಜ್ಞಾನ ಸಂಸ್ಥೆ ‘ಆಂಡುರಿಲ್’ (Anduril) ನ ಆರಂಭಿಕ ಎಂಜಿನಿಯರ್‌ಗಳಲ್ಲಿ ಒಬ್ಬರಾಗಿದ್ದ ಇವರು, ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ‘ಘೋಸ್ಟ್ ಶಾರ್ಕ್’ (Ghost Shark) ಡ್ರೋನ್ ಜಲಾಂತರ್ಗಾಮಿ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಎಂಜಿನಿಯರಿಂಗ್ ನೇತೃತ್ವ ವಹಿಸಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕರೆ: ಪ್ರವೀಣ ಗುಡಿಜಗತ್ತಿನ ಆವಿಷ್ಕಾರದಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರ ಅಪಾರ: ಕುಲಪತಿ ಸಿ. ಎಂ. ತ್ಯಾಗರಾಜ ಆಡಳಿತದಲ್ಲಿ ಇನ್ಮುಂದೆ 'ಬಂಗಾಳಿ' ಕಡ್ಡಾಯ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಘೋಷಣೆಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿನ್ಯಾನೋ ಜಾಥಾ-2026' ಕಾರ್ಯಕ್ರಮ