Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಟಿ20 ವಿಶ್ವಕಪ್ 2026 : ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಜಯ ; ಸೆಮಿಫೈನಲ್‌ ಪ್ರವೇಶಿಸಿದ ಟೀಂ ಇಂಡಿಯಾ

ಅತ್ಯಗತ್ಯ ಸಂದರ್ಭದಲ್ಲಿ ಮರಳಿ ಅರಳಿದ ಸಂಜು ಸ್ಯಾಟ್ಸನ್ ಭರ್ಜರಿ ಬ್ಯಾಟಿಂಗ್‌ನಿಂದ ಹಾಲಿ ಚಾಂಪಿಯನ್' ಭಾರತ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

ಈಡನ್‌ ಗಾರ್ಡನ್‌ನಲ್ಲಿ ತಮ್ಮ ವೃತ್ತಿಜೀವನದ ಅವಿಸ್ಮರಣೀಯ ಇನಿಂಗ್ಸ್ ಆಡಿದ ಕೇರಳದ ಸಂಜು ( 97, 502, 4X12, 6x4) 3.5 ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ಎದುರು ಜಯಿಸಿತು.196 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡವನ್ನು ಆರಂಭಿಕ ಬ್ಯಾಟರ್ ಸಂಜು ಅವರು ಗೆಲುವಿನತ್ತ ಮುನ್ನಡೆಸಿದರು. ಅವರಿಗೆ ತಿಲಕ್ ವರ್ಮಾ (27 ರನ್) ಮತ್ತು ಹಾರ್ದಿಕ್ ಪಾಂಡ್ಯ (17 ರನ್) ಬೆಂಬಲ ನೀಡಿದರು. ಆತಿಥೇಯ ತಂಡವು 19.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 199 ರನ್ ಗಳಿಸಿತು.
ಮಾ. 5 ರಂದು ಮುಂಬೈನಲ್ಲಿ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸೂಪರ್ 8ರ ಒಂದನೇ ಗುಂಪಿನಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತ ತಂಡಗಳು ಈ ಪಂದ್ಯಕ್ಕೂ ಮುನ್ನ ತಲಾ 2 ಅಂಕ ಗಳಿಸಿದ್ದವು. ಸೆಮಿಫೈನಲ್ ಅವಕಾಶಕ್ಕಾಗಿ ಈ ಪಂದ್ಯದಲ್ಲಿ ಜಯಿಸುವುದು ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಆದ್ದರಿಂದ ಎರಡೂ ತಂಡಗಳು ತೀವ್ರ ಸೆಣಸಾಟ ನಡೆಸಿದ್ದವು.

ಕೋಲ್ಕತ್ತಾ: 2026ರ ಟಿ20 ವಿಶ್ವಕಪ್‌ನ ಸೂಪರ್‌ 8 ರ ಹಂತದಲ್ಲಿ ಭಾರತವು ತಂಡವು ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್‌ಗಳ ಜಯಗಳಿಸಿ ಸೆಮಿ ಫೈನಲ್‌ ಪ್ರವೇಶಿಸಿದೆ. ಸಂಜು ಸ್ಯಾಮ್ಸನ್ ಸಮಯೋಚಿತ ಪ್ರದರ್ಶನ ನೀಡುವ ಮೂಲಕ ಈಡನ್ ಗಾರ್ಡನ್‌ನಲ್ಲಿ ಆತಿಥೇಯರಿಗೆ ಗೆಲುವು ತಂದುಕೊಟ್ಟರು. ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಸೆಮಿ ಫೈನಲ್‌ ಪಂದ್ಯ ನಡೆಯಲಿದೆ.

ವಿಂಡೀಸ್ ನೀಡಿದ 195 ರನ್​ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ ಆರಂಭದಲ್ಲೇ ಅಭಿಷೇಕ ಶರ್ಮಾ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಳೆದುಕೊಂಡರೂ, ಈ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್‌ ತಾಳ್ಮೆ ಮತ್ತು ವಿವೇಚನಾಯುತ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸ್ಯಾಮ್ಸನ್ 50 ಎಸೆತಗಳಲ್ಲಿ 97 ರನ್ ಗಳಿಸಿದರು.
ಅಭಿಷೇಕ್ ಶರ್ಮಾ ಅವರ ಫಾರ್ಮ್ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ, ಅವರು 11 ಎಸೆತಗಳಲ್ಲಿ ಕೇವಲ 10 ರನ್ ಗಳಿಸಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ವಿಫಲರಾದರು.
ಪಂದ್ಯದ ಮೂರನೇ ಓವರ್‌ನಲ್ಲಿ ಸ್ಯಾಮ್ಸನ್ 17 ರನ್ ಗಳಿಸಿದ್ದಾಗ, ಅಭಿಷೇಕ ಕೊನೆಯ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕುವ ಅಗತ್ಯವಿರಲಿಲ್ಲ. ಆದರೂ ಅವರು ಹೊಡೆಯಲು ಹೋಗಿ ಅಕೀಲ್ ಹೊಸೈನ್ ಎಸೆತದಲ್ಲಿ ಹೆಟ್ಮೆಯರ್ ಅವರಿಗೆ ಸರಳ ಕ್ಯಾಚ್ ನೀಡಿ ಔಟಾದರು. ಅವರ ಬ್ಯಾಟಿಂಗ್ ಮಾತ್ರವಲ್ಲ; ಫೀಲ್ಡಿಂಗ್ ಕೂಡ ಹವ್ಯಾಸಿ ಕ್ರಿಕೆಟ್‌ಗಿಂತಲೂ ಕಳಪೆಯಾಗಿತ್ತು. ಅವರು ಎರಡು ಸುಲಭ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ವೆಸ್ಟ್‌ ಇಂಡೀಸ್‌ ಬೃಹತ್‌ ಮೊತ್ತ ಪೇರಿಸಲು ಕಾರಣವಾಯಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್​ಗೆ ಉತ್ತಮ ಆರಂಭ ಸಿಕ್ಕಿತು. ಶಾಯ್ ಹೋಪ್ ಹಾಗೂ ಚೇಸ್ ಮೊದಲ ವಿಕೆಟ್​ಗೆ 68 ರನ್​ಗಳ ಜೊತೆಯಾಟ ನೀಡಿದರು. ವಿಂಡೀಸ್​ನ ಈ ಆರಂಭಕ್ಕೆ ಭಾರತದ ಫಿಲ್ಡರ್​ಗಳ ಕೊಡುಗೆಯೂ ಅಪಾರವಾಗಿತ್ತು. ವರುಣ್ ಚಕ್ರವರ್ತಿ ರನೌಟ್ ಮಿಸ್‌ ಮಾಡಿದರೆ, ಅಭಿಷೇಕ ಶರ್ಮಾ ಎರಡು ಸುಲಭ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆದ ವಿಂಡೀಸ್ ವಿಕೆಟ್​ಗಳ ಪತನದ ನಡುವೆಯೂ ಭಾರತದ ಬೌಲರ್​ಗಳ ಮೇಲೆ ಸವಾರಿ ನಡೆಸಿತು.
ಮೊದಲ 10 ಓವರ್​ಗಳಲ್ಲಿ ಭಾರತ ಉತ್ತಮವಾಗಿ ಬೌಲ್ ಮಾಡಿ ಕೇವಲ 82 ರನ್ ಬಿಟ್ಟುಕೊಟ್ಟಿತು. ಆದರೆ ಕೊನೆಯ 10 ಓವರ್​ಗಳಲ್ಲಿ ವಿಂಡೀಸ್ 113 ರನ್ ಕಲೆ ಹಾಕಿತು. ವಿಂಡೀಸ್ ಪರ ರೊಸ್ಟನ್ ಚೇಸ್ ಅತ್ಯಧಿಕ 40 ರನ್​ಗಳನ್ನು ಗಳಿಸಿದರೆ, ಪೊವೆಲ್ ಹಾಗೂ ಜೇಸನ್ ಹೋಲ್ಡರ್ ಕ್ರಮವಾಗಿ 34 ಮತ್ತು 37 ರನ್​ಗಳ ಅಜೇಯ ಇನ್ನಿಂಗ್ಸ್ ಆಡಿದರು. ಇವರಿಬ್ಬರ ನಡುವೆ ಐದನೇ ವಿಕೆಟ್​ಗೆ 74 ರನ್​ಗಳ ಜೊತೆಯಾಟವೂ ಮೂಡಿಬಂತು. ಇದರ ಪರಿಣಾಮವಾಗಿ ವಿಂಡೀಸ್ ಪಡೆ 20 ಓವರ್​ಗಳಲ್ಲಿ 195 ರನ್ ಕಲೆಹಾಕಿತು. ಭಾರತದ ಪರ ಜಸ್ಪ್ರೀತ್ ಬುಮ್ರಾ ತಮ್ಮ ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿ ಎರಡು ವಿಕೆಟ್ ಪಡೆದರು. ವರುಣ ಚಕ್ರವರ್ತಿ ನಾಲ್ಕು ಓವರ್‌ಗಳಲ್ಲಿ ಒಂದು ವಿಕೆಟ್ ಪಡೆದು 40 ರನ್ ಬಿಟ್ಟುಕೊಟ್ಟರು.
ಸ್ಯಾಮ್ಸನ್ ಚೆನ್ನಾಗಿ ಆಡದಿದ್ದರೆ ಪಂದ್ಯದ ಫಲಿತಾಂಶ ಬೇರೆಯೇ ಆಗಬಹುದಿತ್ತು.ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ ಅಜೇಯ 97 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ತಿಲಕ ವರ್ಮಾ 27 ರನ್​ ಗಳಿಸಿದರು. ಕೊನೆಯಲ್ಲಿ ಶಿವಂ ದುಬೆ ಅಜೇಯ 8 ರನ್​ ಗಳಿಸಿದರು. ಭಾರತವು ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆ ಜಯಗಳಿಸುವ ಮೂಲಕ ಸೆಮಿ ಫೈನಲ್‌ ಪ್ರವೇಶಿಸಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ