Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ (Karnataka SSLC Result 2026) ಗುರುವಾರ (ಏ.23) ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಲಿದೆ.


ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು https://karresults.nic.in/ ಮತ್ತು ಕರ್ನಾಟಕ ಒನ್‌ ಆ್ಯಪ್‌ (KarnatakaOne Mobile App) ಮೂಲಕ ನೋಡಬಹುದಾಗಿದೆ. ಹಾಗೂ ವಿದ್ಯಾರ್ಥಿಗಳ ನೊಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸ್‌ ಆ್ಯಪ್‌/ಎಸ್‌ಎಂಎಸ್ (SMS) ಮೂಲಕವೂ ಫಲಿತಾಂಶದ ಮಾಹಿತಿಯನ್ನು ರವಾನಿಸಲಾಗುತ್ತದೆ.


ಈ ವರ್ಷ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು (Marks Card) ಏಪ್ರಿಲ್‌ 23 ರಂದು ಮಧ್ಯಾಹ್ನ 12 ಗಂಟೆಗೆ ಡಿಜಿಲಾಕರ್ https://www.digilocker.gov.in/ ಮೂಲಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.


ಅಂಕಪಟ್ಟಿಯನ್ನು ಡಿಜಿಲಾಕರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳವ ಪ್ರಕ್ರಿಯೆಯನ್ನು ಈ Video link https://www.youtube.com/shorts/mu-B4tBwaf8 ಬಳಸಿ ತಿಳಿದುಕೊಳ್ಳಬಹುದು. ಫಲಿತಾಂಶ ಪಟ್ಟಿಯು ಸಂಬಂಧಿತ ಶಾಲೆಗಳಿಗೆ ಏಪ್ರಿಲ್‌ 23 ಮಧ್ಯಾಹ್ನ 12 ಗಂಟೆಗೆ ಲಭ್ಯವಾಗಲಿದೆ ಎಂದು ಪರೀಕ್ಷಾ ಮಂಡಲಿ ತಿಳಿಸಿದೆ.


ಪರೀಕ್ಷೆ ಫಲಿತಾಂಶ ನೋಡುವುದು ಹೇಗೆ?
ಮೊದಲು ವೆಬ್‌ಸೈಟ್ karresults.nic.in ಗೆ ಭೇಟಿ ಕೊಡಬೇಕು.
ವೆಬ್‌ಸೈಟ್‌ ಪರದೆ ಮೇಲೆ ಕಾಣುವ SSLC Result 2026 ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
ಬಳಿಕ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ಮಾಹಿತಿ ನಮೂದಿಸಬೇಕು
ವಿವರ ಹಾಕಿದ ಬಳಿಕ ಸಲ್ಲಿಸು/ಸಮ್ಮಿಟ್ ಬಟನ್ ಒತ್ತಬೇಕು
ಪರದೆ ಮೇಲೆ ಅಂಕಪಟ್ಟಿ ಕಾಣಿಸುತ್ತದೆ
ಅದು ನಿಮ್ಮ ಅಂಕಪಟ್ಟಿಯೇ ಎಂದು ಪರಿಶೀಲಿಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಡಿಜಿಲಾಕರ್ ಮತ್ತು ಕರ್ನಾಟಕ ಒನ್ ಅಪ್ಲಿಕೇಶನ್‌ನಲ್ಲೂ ಸಹ KSEAB 10 ನೇ ತರಗತಿ ಅಂಕಪಟ್ಟಿ 2026 ದೊರೆಯಲಿದೆ. ಆಪ್‌ಗಳನ್ನು ಪ್ಲೆಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿ ನಮೂದಿಸಿ ನೀವು ಅಲ್ಲಿ ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ