ಬೆಳಗಾವಿ : ಶಿವಗಿರಿ ಕೋ ಆಪ್ ಕ್ರೆಡಿಟ್ ಸೊಸೈಟಿ ಲಿ ಬೆಳಗಾವಿ ಇವರ ವತಿಯಿಂದ ಬಿಲ್ಲವರ ಅಸೋಸಿಯೇಶನ್ ಸಹಯೋಗದೊಂದಿಗೆ ದಿನಾಂಕ 7/6/2026 ರವಿವಾರದಂದು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ದಂತ ವೈದ್ಯೆ
ಡಾ.ತೇಜಸ್ವಿನಿ ಹೊಂಗಲ್ ಉದ್ಘಾಟಿಸಿದರು ಸೊಸೈಟಿಯ ಅಧ್ಯಕ್ಷ ಸುಜನ್ ಕುಮಾರ್ , ಬಿಲ್ಲವ ಸಂಘದ ಅಧ್ಯಕ್ಷ ಸುನಿಲ್ ಆರ್ ಪೂಜಾರಿ ಹಾಗು ಸೊಸೈಟಿಯ ಕಟ್ಟಡ ಮಾಲಿಕ ಹಾಗು ಉದ್ಯಮಿ ಸುನಿಲ್ ನಾಯ್ಕ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ ಹಾಗೂ ಸಂಘದ ಹಿತೈಷಿಗಳಾದ
ಉಡುಪಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಡಾ. ಸುನೀತಾ ಬಂಗೇರ ಅವರು ರೂ. 11000 ದೇಣಿಗೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು . ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳನ್ನು ಪಡೆದುಕೊಂಡರು . ಸೊಸೈಟಿಯ ನಿರ್ದೇಶಕರು ಹಾಗು ಸಿಬ್ಬಂದಿವರ್ಗ , ಬಿಲ್ಲವ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗು ಮಹಿಳಾ ಮಂಡಳಿಯ ಸದಸ್ಯರು ಹಾಜರಿದ್ದರು. ವ್ಯವಸ್ಥಾಪಕರಾದ ಚಂದ್ರ ಎಚ್ ಪೂಜಾರಿ ನಿರೂಪಿಸಿ ವಂದಿಸಿದರು.
