Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ವಿಮಾನಯಾನ ಸಚಿವರು-- ಬೆಳಗಾವಿ- ಮುಂಬೈ ನಡುವೆ "ಸ್ಟಾರ್ ಏರ್" ವಿಮಾನಯಾನ ಸೇವೆ ಪ್ರಾರಂಭ

ಬೆಳಗಾವಿ: "ಸ್ಟಾರ್ ಏರ್" ವಿಮಾನಯಾನ ಸಂಸ್ಥೆಯು ಈ ಮುಂಚಿತವಾಗಿ ರದ್ದುಗೊಳಿಸಿದ ಬೆಳಗಾವಿ - ಮುಂಬೈ ನಡುವಿನ ವಿಮಾನಯಾನ ಸೇವೆಯನ್ನು ಪುನಃ ಪ್ರಾರಂಭ ಮಾಡಲಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆಯಷ್ಟೆ ಸ್ಟಾರ್ ಸಂಸ್ಥೆಯು ಬೆಳಗಾವಿ - ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು. ಇದನ್ನು ರದ್ದುಗೊಳಿಸದೆ ಇರುವ ಬಗ್ಗೆ ಕೋರಿ ಅವರು, ಸ್ಟಾರ್ ಏರ್ ಸಂಸ್ಥೆಯು ಅಧ್ಯಕ್ಷ ಸಂಜಯ ಘೋಡಾವತ್ ರವರಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಕೋರಿದ್ದರು. ಅದರಂತೆ ಪತ್ರವನ್ನು ಸಹ ಬರೆಯಲಾಗಿತ್ತು.

ಇದರ ಫಲವಾಗಿ ಸ್ಟಾರ್ ಏರ್ ವಿಮಾನವು ಬೆಳಗಾವಿ - ಮುಂಬೈ ನಡುವೆ ವಿಮಾನ ಹಾರಾಟವನ್ನು 29ನೇ ಮಾರ್ಚ್, 2026 ರಿಂದ ಪ್ರಾರಂಭಿಸಲಿದೆ. ಇದು ಬೆಳಗಾವಿಯನ್ನು ( S5111) ಬೆಳ್ಳಿಗ್ಗೆ 07:20ಕ್ಕೆ ಬಿಟ್ಟು ಮುಂಬೈಯನ್ನು ಬೆಳಿಗ್ಗೆ 08:25ಕ್ಕೆ ತಲುಪುವುದು, ಅದರಂತೆ ಮುಂಬೈಯನ್ನು (S5112) ಸಂಜೆ 19:45ಕ್ಕೆ ಬಿಟ್ಟು ಬೆಳಗಾವಿ ನಗರವನ್ನು 20:50ಕ್ಕೆ ತಲುಪುವುದು.

ಮನವಿಗೆ ಸ್ಪಂದಿಸಿ, ಬೆಳಗಾವಿ-ಮುಂಬೈ-ಬೆಳಗಾವಿ ಮಾರ್ಗದಲ್ಲಿ ವಿಮಾನಯಾನ ಸೇವೆ ಪ್ರಾರಂಭ ಮಾಡಿ ಸಹಕರಿಸಿದ ಸ್ಟಾರ್ ಏರ್ ಸಂಸ್ಥೆಯ ಅಧ್ಯಕ್ಷ ಸಂಜಯ ಘೋಡಾವತ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ