Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಹುಲ್‌ ಗಾಂಧಿ ಪರಮಾಪ್ತಗೆ ತಪ್ಪಿದ ಹುದ್ದೆ…! ಕೇರಳದ ನೂತನ ಸಿಎಂ ಆಗಿ ಸತೀಶನ್ ಆಯ್ಕೆ : ಇವರನ್ನೇ ಆಯ್ಕೆ ಮಾಡಿದ್ದು ಯಾಕೆ…?

Advertisement

ನವದೆಹಲಿ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಕಾಂಗ್ರೆಸ್, ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟನ್ನು ಗುರುವಾರ ಕೊನೆಗೂ ಬಿಡಿಸಿದೆ. ಅಚ್ಚರಿಯ ಬೆಳವಣಿಗೆಯಲ್ಲಿ, ಹೈಕಮಾಂಡ್‌ನ ನೆಚ್ಚಿನ ಅಭ್ಯರ್ಥಿಯಾಗಿದ್ದ ಕೆ.ಸಿ. ವೇಣುಗೋಪಾಲ ಅವರನ್ನು ಬದಿಗೊತ್ತಿ, ‘ಜನಪ್ರಿಯ ನಾಯಕ’ ಎಂದೇ ಗುರುತಿಸಿಕೊಂಡಿರುವ ಕೇರಳದ ನಿರ್ಗಮಿತ ವಿಧಾನಸಭೆಯ ವಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವಿ.ಡಿ. ಸತೀಶನ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.  ಕೇರಳ  ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಷಿ ಅವರು ಗುರುವಾರ (ಮೇ 14) ಈ ವಿಷಯವನ್ನು ಪ್ರಕಟಿಸಿದ್ದಾರೆ. 

 ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಹತ್ತು ದಿನಗಳ ನಂತರ ಈ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಮೇ 18 ರಂದು ಅವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆಗಾಗಿ ಕಾಂಗ್ರೆಸ್ ಹೈಕಮಾಂಡ್ ತೀವ್ರ ಕಸರತ್ತು ನಡೆಸಿತ್ತು. ಈ ಸಂಬಂಧ ಸ್ಥಳೀಯ ನಾಯಕರು ಹಾಗೂ ರಾಜ್ಯದ ಮಾಜಿ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಹಲವು ಸುತ್ತಿನ ಸುದೀರ್ಘ ಚರ್ಚೆಗಳನ್ನು ನಡೆಸಲಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ಹಲವು ನಾಯಕರನ್ನು ಮತ್ತು ರಾಜ್ಯ ಘಟಕದ ಸುಮಾರು ಎಂಟು ಮಂದಿ ಮಾಜಿ ಅಧ್ಯಕ್ಷರನ್ನು ಖುದ್ದಾಗಿ ಭೇಟಿ ಮಾಡಿ, ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿ.ಡಿ. ಸತೀಶನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಮತ್ತು ರಮೇಶ್ ಚೆನ್ನಿತ್ತಲ ಅವರು ಪ್ರಬಲ ಪೈಪೋಟಿಯಲ್ಲಿದ್ದರು. ಅಂತಿಮವಾಗಿ ಹೈಕಮಾಂಡ್ ಸತೀಶನ್ ಅವರ ಹೆಸರನ್ನು ಘೋಷಿಸಿದೆ.

ವೇಣುಗೋಪಾಲ ಆಟಕ್ಕೆ ಸತೀಶನ್ ಚೆಕ್-ಮೇಟ್
ಚುನಾವಣಾ ಫಲಿತಾಂಶ ಬಂದು 10 ದಿನಗಳ ಕಾಲ ನಡೆದ ಸುದೀರ್ಘ ಕಸರತ್ತಿನ ನಂತರ ಈ ಘೋಷಣೆ ಹೊರಬಿದ್ದಿದೆ. 61 ವರ್ಷದ ಸತೀಶನ್ ಈ ಓಟದಲ್ಲಿ ಆರಂಭದಲ್ಲಿ ಹಿನ್ನಡೆಯಲ್ಲಿದ್ದರು. 140 ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಯುಡಿಎಫ್‌ಗೆ (UDF) ಭರ್ಜರಿ ಬಹುಮತ ತಂದುಕೊಟ್ಟ ಕೆ.ಸಿ. ವೇಣುಗೋಪಾಲ ಅವರನ್ನೇ ‘ನಾಯಕ’ ಎಂದು ಬಿಂಬಿಸಲಾಗಿತ್ತು. 63 ಶಾಸಕರ ಪೈಕಿ 47 ಮಂದಿ ಹಾಗೂ ರಾಹುಲ್ ಗಾಂಧಿಯವರ ಬೆಂಬಲವೂ ವೇಣುಗೋಪಾಲ್ ಅವರಿಗಿತ್ತು. ಆದರೂ ಅಂತಿಮವಾಗಿ ಅದೃಷ್ಟ ಸತೀಶನ್ ಪರವಾಗಿ ಒಲಿದಿದೆ.

ಪೈಪೋಟಿಯಲ್ಲಿ ಅನಿರೀಕ್ಷಿತವಾಗಿ ಗೆದ್ದ ಸತೀಶನ್:
61 ವರ್ಷದ ಸತೀಶನ್ ಈ ಓಟದಲ್ಲಿ ಆರಂಭದಲ್ಲಿ ‘ಅಂಡರ್‌ಡಾಗ್’ (ಆದರೆ ಗೆಲ್ಲುವ ಸಾಧ್ಯತೆ ಕಡಿಮೆ ಇದ್ದವರು) ಎಂದೇ ಪರಿಗಣಿಸಲ್ಪಟ್ಟಿದ್ದರು. ಇದಕ್ಕೆ ವಿರುದ್ಧವಾಗಿ ಕೆ.ಸಿ. ವೇಣುಗೋಪಾಲ ಹೈಕಮಾಂಡ್ ಫೇವರಿಟ್‌ ಆಗಿದ್ದರು. ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಒಟ್ಟು 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆಲ್ಲುವಲ್ಲಿ ವೇಣುಗೋಪಾಲ ಪಾತ್ರ ದೊಡ್ಡದಿತ್ತು ಎಂದು ಬಿಂಬಿಸಲಾಗಿತ್ತು. ಪಕ್ಷದ ಕಚೇರಿಗಳ ಮುಂದೆ ಅವರನ್ನು ‘ನಾಯಕ’ (ಹೀರೋ) ಎಂದು ಬಣ್ಣಿಸುವ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು.

ವೇಣುಗೋಪಾಲ ಹಿನ್ನಡೆಗೆ ಕಾರಣವಾದ ‘ಗಣಿತ’
63 ವರ್ಷದ ವೇಣುಗೋಪಾಲ ಅವರಿಗೆ 63 ಶಾಸಕರ ಪೈಕಿ 47 ಶಾಸಕರ ಬೆಂಬಲವಿತ್ತು. ಅಲ್ಲದೆ, ರಾಹುಲ್ ಗಾಂಧಿ ಅವರ ಪರಮಾಪ್ತರಾಗಿದ್ದ ಇವರು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವರಾಗಿ ಕೆಲಸ ಮಾಡಿದ ಅಪಾರ ಆಡಳಿತಾತ್ಮಕ ಅನುಭವ ಹೊಂದಿದ್ದರು. ರಾಹುಲ್‌ ಗಾಂಧಿಯ ಆಯ್ಕೆಯಾಗಿದ್ದರು. ಆದರೂ, ಚುನಾವಣೆ ಮುಗಿದು 10 ದಿನ ಕಳೆದರೂ ಮುಖ್ಯಮಂತ್ರಿ ಹುದ್ದೆಗೆ ಹೆಸರು ಘೋಷಣೆ ವಿಳಂಬವಾಗುತ್ತಿರುವುದು ಏನೋ ಅಸಮಾಧಾನವಿದೆ ಎಂಬುದರ ಸೂಚನೆಯಾಗಿತ್ತು.
ಸತೀಶನ್ ಅವರು ಪರವೂರು ಕ್ಷೇತ್ರವನ್ನು 2001 ರಿಂದಲೂ ಕಮ್ಯುನಿಸ್ಟ್ ಪಕ್ಷದ ಪಿ. ರಾಜು ಅವರ ವಿರುದ್ಧ ಗೆದ್ದು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದಾರೆ. ಈ ಬಾರಿ ಸತೀಶನ್ ಅವರ ಪರವಾಗಿ ಕೇರಳದಾದ್ಯಂತ ಜನವಲಯದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು. ವೇಣುಗೋಪಾಲ ಅವರನ್ನು ಮುಖ್ಯಮಂತ್ರಿ ಮಾಡಿದರೆ ಪ್ರತಿಭಟಿಸುವುದಾಗಿ ರಾಜ್ಯದ ಹಲವೆಡೆ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು.

ಕಾಂಗ್ರೆಸ್‌ಗೆ ನಡುಕ ತಂದ ಮಿತ್ರಪಕ್ಷಗಳ ತಂತ್ರ
ಸತೀಶನ್ ಆಯ್ಕೆಯಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಕೇರಳ ಕಾಂಗ್ರೆಸ್ ಮತ್ತು ಆರ್.ಎಸ್.ಪಿ ಪ್ರಮುಖ ಪಾತ್ರ ವಹಿಸಿವೆ. ಈ ಮೂರೂ ಪಕ್ಷಗಳ ಒಟ್ಟು 32 ಶಾಸಕರ ಬೆಂಬಲ ಸತೀಶನ್ ಅವರಿಗಿತ್ತು. ಒಂದು ವೇಳೆ ಇವರ ಮಾತು ಕೇಳದೆ ವೇಣುಗೋಪಾಲ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದರೆ, ಮಿತ್ರಪಕ್ಷಗಳಿಂದ ಸಹಕಾರ ಸಿಗದ ಭೀತಿಯಿತ್ತು.  ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಬಲ 70 ಕ್ಕೆ ಕುಸಿದು, ಬಹುಮತಕ್ಕಿಂತ (71) ಒಂದು ಸ್ಥಾನ ಕಡಿಮೆ ಆಗುತ್ತಿತ್ತು.
ಮುಖ್ಯವಾಗಿ 22 ಸ್ಥಾನಗಳನ್ನು ಹೊಂದಿರುವ ಮುಸ್ಲಿಂ ಲೀಗ್ ಕಾಂಗ್ರೆಸ್‌ಗೆ ಅನಿವಾರ್ಯವಾಗಿತ್ತು. 2019 ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಗೆಲುವಿಗೆ ಮತ್ತು ಪ್ರಿಯಾಂಕಾ ಗಾಂಧಿ ಅವರ ಉಪಚುನಾವಣೆ ಗೆಲುವಿಗೆ ಮುಸ್ಲಿಂ ಲೀಗ್‌ನ ತಳಮಟ್ಟದ ಸಂಘಟನೆ ಕಾರಣವಾಗಿತ್ತು. ಅವರ ಅಸಮಾಧಾನ ಎದುರಿಸಲು ಕಾಂಗ್ರೆಸ್ ಸಿದ್ಧವಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅದು ಸತೀಶನ್‌ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಿಸಿತು.

ಈ ಘೋಷಣೆ ನಂತರ ಮುಸ್ಲಿಂ ಲೀಗ್‌ನ ರಾಜ್ಯ ಘಟಕದ ಅಧ್ಯಕ್ಷ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಘಲ್ ಕಾಂಗ್ರೆಸ್ ನಿರ್ಧಾರವನ್ನು ಸ್ವಾಗತಿಸಿದ್ದಾರೆ. “ಕಾಂಗ್ರೆಸ್ ನಮ್ಮ ಸಲಹೆ ಕೇಳಿದೆ, ಸತೀಶನ್ ಉತ್ತಮ ಆಡಳಿತ ನೀಡಲಿದ್ದಾರೆ” ಎಂದು ಅವರು ಹೇಳಿದ್ದಾರೆ.

ವೇಣುಗೋಪಾಲ ಪರಮಾಪ್ತರಿಗೆ ಸತೀಶನ್ ಸಂದೇಶ:
ಮುಖ್ಯಮಂತ್ರಿ ಹುದ್ದೆಗೆ ತಮ್ಮ ಹೆಸರು ಘೋಷಣೆಯಾದ ಬೆನ್ನಲ್ಲೇ ಮಾತನಾಡಿದ ಸತೀಶನ್, ಸಮನ್ವಯದ ಮಾತುಗಳನ್ನಾಡಿದ್ದಾರೆ. “ಇದು ನನ್ನ ವೈಯಕ್ತಿಕ ಸಾಧನೆಯಲ್ಲ. ವೇಣುಗೋಪಾಲ್ ಅವರ ಸಂಘಟನೆ ಈ ಗೆಲುವಿಗೆ ಕಾರಣ. ರಮೇಶ್ ಚೆನ್ನಿತ್ತಲ ಕೂಡ ನನ್ನ ನಾಯಕರು. ಸೋತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾಮೂಹಿಕ ಪ್ರಯತ್ನದಿಂದ ಹೊಸ ಕೇರಳ ಕಟ್ಟುತ್ತೇನೆ” ಎಂದಿದ್ದಾರೆ.
ಉಪಚುನಾವಣೆಯ ಆತಂಕ ಮತ್ತು ಸಾಂಸ್ಥಿಕ ಸವಾಲು
ವೇಣುಗೋಪಾಲ್ ಅವರನ್ನು ಕೈಬಿಡಲು ಮತ್ತೊಂದು ಪ್ರಮುಖ ಕಾರಣವೆಂದರೆ ಅವರು ಈಗಾಗಲೇ ಲೋಕಸಭಾ ಸಂಸದರಾಗಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದರೆ ಆರು ತಿಂಗಳೊಳಗೆ ವಿಧಾನಸಭೆಗೆ ಉಪಚುನಾವಣೆ ಎದುರಿಸಬೇಕಿತ್ತು. ಈ ಹಿಂದೆ ಮಮತಾ ಬ್ಯಾನರ್ಜಿ ಮತ್ತು ಯೋಗಿ ಆದಿತ್ಯನಾಥ ಅವರು ಇಂತಹ ಸಂದರ್ಭ ಎದುರಿಸಿದ್ದರೂ, ಉಪಚುನಾವಣೆಯಲ್ಲಿ ಯಾವುದೇ ವ್ಯತಿರಿಕ್ತ ಫಲಿತಾಂಶ ಬಂದರೆ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬ ಆತಂಕ ಕಾಂಗ್ರೆಸ್‌ಗಿತ್ತು. ಅಲ್ಲದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ವೇಣುಗೋಪಾಲ ಅವರನ್ನು ರಾಷ್ಟ್ರ ರಾಜಕಾರಣದಿಂದ ಬಿಡುಗಡೆ ಮಾಡುವುದು ಪಕ್ಷದ ಸಾಂಸ್ಥಿಕ ದೃಷ್ಟಿಯಿಂದ ನಷ್ಟ ಎಂದು ಭಾವಿಸಲಾಯಿತು.ಅಲ್ಲದೆ,  ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವಿರುವಂತಹ ಅಧಿಕಾರ ಸಂಘರ್ಷ ಕೇರಳದಲ್ಲಿ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಹೈಕಮಾಂಡ್‌ನ ಮನಸ್ಸು ವೇಣುಗೋಪಾಲ ಪರವಾಗಿದ್ದರೂ, ಮಿತ್ರಪಕ್ಷಗಳ ಒತ್ತಡ ಮತ್ತು ಉಪಚುನಾವಣೆಯ ಭೀತಿಯಿಂದಾಗಿ ಕಾಂಗ್ರೆಸ್ ವಿ.ಡಿ. ಸತೀಶನ್ ಅವರನ್ನು ಸಿಂಹಾಸನದ ಮೇಲೆ ಕೂರಿಸಿದೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರಕಾರದಿಂದ ವಿಶೇಷ ಯೋಜನೆ ಮತ್ತು ಅನುದಾನ ಒದಗಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಕಿರಣ್ ಜಾಧವ ಆಟೋನಗರ, ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಿSSLC ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಥಳಿತವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನಇನ್ಮುಂದೆ ವೈದ್ಯರ ಚೀಟಿ ಇಲ್ಲದೇ ಕೆಮ್ಮಿನ ಔಷಧ ಮಾರಾಟ ನಿಷೇಧಮಾರಿಹಾಳ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ; ಉಚಿತ ನೇತ್ರ ತಪಾಸಣೆಯಿಂದ ಗ್ರಾಮಸ್ಥರಿಗೆ ಪ್ರಯೋಜನಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ ಸರ್ಕಾರಶರಣರು ಜನಪರವಾದ ಸಾಹಿತ್ಯಕ್ಕೆ ಒತ್ತು ನೀಡಿದರು: ಡಾ.ವಿದ್ಯಾವತಿ ಕುಂದರಗಿ* *ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಹಣದ ತೊಂದರೆಯುದ್ದರೂ ಪರರ ಹಣ ಬೇಡವೆಂದು ಚಿಕ್ಕೋಡಿಯಲ್ಲಿ ಪ್ರಾಮಾಣಿಕತೆ ಮೆರೆದ ಕುಂದಾಪುರದ ವ್ಯಕ್ತಿ..!ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ