Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಜೂಜಾಟಕ್ಕೆ ಪೊಲೀಸರ ಗುದ್ದು ಒಬ್ಬ ಸಿಸಿಬಿ ಬಲೆಗೆ – ಗ್ರಾಮೀಣ ಠಾಣೆ ದಾಳಿಯಲ್ಲಿ 9 ಮಂದಿ ವಶಕ್ಕೆ

ಬೆಳಗಾವಿ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮತ್ತು ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸರು ಮಂಗಳವಾರ ಕಟ್ಟುನಿಟ್ಟಿನ ದಾಳಿ ನಡೆಸಿ ಒಟ್ಟು 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೂ.68 ಸಾವಿರಕ್ಕೂ ಹೆಚ್ಚು ನಗದು ಹಣ ಜಪ್ತಿ ಮಾಡಲಾಗಿದೆ.

ಸಿಸಿಬಿ ದಾಳಿ: ಟಿ-20 ವಿಶ್ವಕಪ್ ಪಂದ್ಯಗಳ ಮೇಲೆ ಬೆಟ್ಟಿಂಗ್
ಉದ್ಯಮಬಾಗ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡಸ್ಟ್ರಿಯಲ್ ಏರಿಯಾದ ಉತ್ಸವ ಡಬಲ್ ರೋಡ್, ಜೈನ್ ಕಾಲೇಜು ರಸ್ತೆಯ ಬಳಿ ಕ್ರಿಕೆಟ್ ಟಿ-20 ವಿಶ್ವಕಪ್ ಪಂದ್ಯಗಳ ಫಲಿತಾಂಶದ ಮೇಲೆ ಸಾರ್ವಜನಿಕರಿಂದ ಹಣ ಪಣಕ್ಕಟ್ಟಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇರೆಗೆ ಸಿಸಿಬಿ ತಂಡ ದಾಳಿ ನಡೆಸಿತು.
ಖಚಿತ ಮಾಹಿತಿ ಆಧರಿಸಿ ಪಿಐ ಮಂಜುನಾಥ ನಾಯಕ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ಜಿ. ಭಜಂತ್ರಿ ನೇತೃತ್ವದ ತಂಡ ದಾಳಿ ನಡೆಸಿ,
ಪಂಕಜ ದಿಲೀಪ ನಾರಾಯಣಕರ (21), ಸಾ: ಉಪಾರ ಗಲ್ಲಿ, ಖಾಸಬಾಗ, ಬೆಳಗಾವಿ ಅವರನ್ನು ವಶಕ್ಕೆ ಪಡೆದಿದೆ.
ಆರೋಪಿತನಿಂದ ರೂ.40,500/- ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಯಳ್ಳೂರಿನಲ್ಲಿ ಅಂದರ್-ಬಾಹರ್ ಜೂಜಾಟ: 9 ಮಂದಿ ಬಲೆಗೆ
ಇನ್ನೊಂದೆಡೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಯಳ್ಳೂರ-ಅನಗೋಳ ರಸ್ತೆಯ ಹತ್ತಿರ ಖುಲ್ಲಾ ಜಾಗೆಯಲ್ಲಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದವರಲ್ಲಿ
ವಿನಯ ನಾರಾಯಣ ಮೋರೆ (22), ಖಾನಾಪೂರ
ರಾಜ ಸಂಭಾಜಿ ಮಾಪನಕರ (22), ಅನಗೋಳ
ರೋಹಿತ್ @ ಸಾಹಿಲ್ ಶ್ರೀಕಾಂತ ಚೌಧರಿ (23), ಜೇರೆಗಲ್ಲಿ
ಮೊಹಮ್ಮದ್ ಹನೀಪ್ ಬಾಬು ಮುಲ್ಲಾ (61), ಬಸವನ ಕುಡಚಿ
ಫಕಿರಪ್ಪ ಬಸವಣ್ಣ ಕಿಲಾರಿ (60), ತಹಶೀಲ್ದಾರ ಗಲ್ಲಿ
ನಾಗೇಶ ನಾರಾಯಣ ದೆಸೂರಕರ (34), ವಡಗಾಂವ
ಪ್ರಕಾಶ ಮಹಾದೇವ ಸುತಾರ (34), ಕಾಮತ ಗಲ್ಲಿ
ಸಾಗರ ಮನೋಹರ ರಾವುಳ (35), ತಾರಿಹಾಳ
ವಿಜಯ ಸಿದ್ದಪ್ಪ ಮುತ್ತ್ಯಪ್ಪಗೋಳ, ರಾಜಹಂಸಗಲ್ಲಿ, ಅನಗೋಳ
ಇವರಿಂದ ಒಟ್ಟು ರೂ.27,960 /- ನಗದು ಹಣ ಹಾಗೂ ಇಸ್ಪೀಟ್ ಎಲೆಗಳ ಪೆಟ್ಟಿಗೆಗಳನ್ನು ಜಪ್ತಿ ಮಾಡಲಾಗಿದೆ.
ಗ್ರಾಮೀಣ ಠಾಣೆಯ ಪಿಐ ನಾಗನಗೌಡ ಕಟ್ಟಿಮನಿಗೌಡ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸ್ ಎಚ್ಚರಿಕೆ
ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ ಹಾಗೂ ಕ್ರಿಕೆಟ್ ಬೆಟ್ಟಿಂಗ್ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ನಗರದ ವಿವಿಧ ಭಾಗಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ವಿಶೇಷ ನಿಗಾ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ