Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪಾಕಿಸ್ತಾನದ 9 ಭಯೋತ್ಪಾದಕ ಶಿಬಿರ, 11 ವಾಯುನೆಲೆ, 13 ಯುದ್ಧ ವಿಮಾನ ಧ್ವಂಸ : ಆಪರೇಷನ್ ಸಿಂಧೂರ ವರ್ಷಾಚರಣೆ ; ಭಾರತದಿಂದ ಮಾಹಿತಿ ಬಿಡುಗಡೆ  

Advertisement

ನವದೆಹಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಭಾರತವು ಪಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ (Operation Sindoor)ʼ ಸೇನಾ ಕಾರ್ಯಾಚರಣೆಯ ಮೊದಲ ವಾರ್ಷಿಕೋತ್ಸವದಂದು ಭಾರತವು ಪಾಕಿಸ್ತಾನಕ್ಕೆ ಉಂಟಾದ ಭಾರಿ ನಷ್ಟದ ಅಂಕಿಅಂಶಗಳನ್ನು ಗುರುವಾರ ಬಿಡುಗಡೆ ಮಾಡಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳು, ವಾಯುನೆಲೆಗಳು ಮತ್ತು ಯುದ್ಧ ವಿಮಾನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ವೇಳೆ ಭಾರತೀಯ ವಾಯುಸೇನೆಯು ಪಾಕಿಸ್ತಾನದ 13 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಮತ್ತು ಶತ್ರು ರಾಷ್ಟ್ರದ 11 ವಾಯುನೆಲೆಗಳ ಮೇಲೆ ಭೀಕರ ದಾಳಿ ನಡೆಸಿ ಹಾನಿಗೊಳಿಸಿದೆ ಎಂದು ವಾಯುಸೇನೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎ.ಕೆ. ಭಾರತಿ ಗುರುವಾರ ಬಹಿರಂಗಪಡಿಸಿದ್ದಾರೆ.

,,ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಪ್ರಥಮ ವರ್ಷಾಚರಣೆ ನೆನಪಿಗಾಗಿ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದ ಸೇನಾ ನೆಲೆಗಳಿಗೆ ಹಾನಿ ಮಾಡಿದ್ದೇವೆ ಎಂಬ ಪಾಕಿಸ್ತಾನದ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.

“ಭಾರತಕ್ಕೆ ಯಾವುದೇ ದೊಡ್ಡ ಹಾನಿ ಮಾಡಲು ಅವರಿಂದ ಸಾಧ್ಯವಾಗಲಿಲ್ಲ. ಅವರು ಕ್ಷಿಪಣಿ, ಯುಎವಿ ಅಥವಾ ಇನ್ನಾವುದೇ ತಂತ್ರಗಳನ್ನು ಬಳಸಿದರೂ, ನಾವು ಅವುಗಳನ್ನು ಯಶಸ್ವಿಯಾಗಿ ತಡೆದಿದ್ದೇವೆ ಹಾಗೂ ವಿಫಲಗೊಳಿಸಿದ್ದೇವೆ. ಕೇವಲ ವಾಕ್ಚಾತುರ್ಯ ಅಥವಾ ಸುಳ್ಳು ನಿರೂಪಣೆಗಳು ವಿಜಯವನ್ನು ತಂದುಕೊಡುವುದಿಲ್ಲ; ಗೆಲುವು ಯಾವಾಗಲೂ ಕಠಿಣ ಸತ್ಯಗಳ ಮೇಲೆ ನಿಂತಿರುತ್ತದೆ. ನಾವು ಇಂದು ಆ ಸತ್ಯಗಳನ್ನು ನಿಮ್ಮ ಮುಂದಿಟ್ಟಿದ್ದೇವೆ,” ಎಂದು ಭಾರತಿ ಹೇಳಿದರು..

 

ಏನಿದು ಆಪರೇಷನ್ ಸಿಂಧೂರ ?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಮೂಲದ ಭಯೋತ್ಪಾದಕರ ವಿರುದ್ಧ ಭಾರತವು 2025ರ ಮೇ 6-7ರ ಮಧ್ಯರಾತ್ರಿ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ (POJK) ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲಾಗಿತ್ತು. ಮರುದಿನ ಪಾಕಿಸ್ತಾನವು ಭಾರತದ ನಗರಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲು ಯತ್ನಿಸಿದಾಗ, ಭಾರತವು ತಕ್ಕ ಪ್ರತ್ಯುತ್ತರ ನೀಡಿ ಪಾಕಿಸ್ತಾನದ ವಾಯುನೆಲೆಗಳು ಮತ್ತು ರಕ್ಷಣಾ ಘಟಕಗಳನ್ನು ಧ್ವಂಸಗೊಳಿಸಿತ್ತು. ಮೇ 10ರಂದು ಪಾಕಿಸ್ತಾನದ ಕದನ ವಿರಾಮದ ವಿನಂತಿಯನ್ನು ಭಾರತ ಒಪ್ಪಿಕೊಂಡಾಗ ಸಂಘರ್ಷ ಕೊನೆಗೊಂಡಿತ್ತು.

 

ಮೇ 7 ರಂದು ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಭಾರತ ಸಂಪೂರ್ಣವಾಗಿ ಧ್ವಂಸಗೊಳಿಸಿದೆ.ಸುಮಾರು 300 ಕಿಲೋಮೀಟರ್‌ಗೂ ಹೆಚ್ಚಿನ ದೂರದಲ್ಲಿದ್ದ ಶತ್ರು ರಾಷ್ಟ್ರದ ಪ್ರಮುಖ ವೈಮಾನಿಕ ನೆಲೆಯನ್ನು (Airborne asset) ಹೊಡೆದುರುಳಿಸಲಾಯಿತು. ಈ ಸಂಘರ್ಷವು ಆಧುನಿಕ ಯುದ್ಧದಲ್ಲಿ ವಾಯುಪಡೆಯ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ತಂತ್ರಜ್ಞಾನದ ಗೆಲುವು

ಭಾರತೀಯ ವಾಯುಸೇನೆಯ ನಿಖರ ಗುರಿ (Precision targeting) ಮತ್ತು ಐಎಸಿಸಿಸಿಎಸ್ (IACCCS) ತಂತ್ರಜ್ಞಾನವು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಭಾರತಿ ತಿಳಿಸಿದರು. “ಶತ್ರು ರಾಷ್ಟ್ರದ ಸಾಮರ್ಥ್ಯ ಮತ್ತು ಅವರು ಅಡಗಿಸಿಟ್ಟಿದ್ದ ಯುದ್ಧತಂತ್ರಗಳ ಬಗ್ಗೆ ಈಗ ನಮಗೆ ನೇರವಾದ ಮಾಹಿತಿ ಲಭ್ಯವಾಗಿದೆ,” ಎಂದು ಅವರು ಹೇಳಿದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯರಿದ್ದಾರೆ...ಏನಿದರ ಅರ್ಥ ?ವಿದ್ಯಾರ್ಥಿನಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಡಾ. ದೇವರಾಜನ್ ತಂಗದುರೈ ಅಮಾನತುಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?ಜಿಂಕೆಯನ್ನೇ ನುಂಗಿದ ಹೆಬ್ಬಾವು !ಪುಸ್ತಕ ಅವಲೋಕನ ಕಾರ್ಯಕ್ರಮಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..! ಶತಮಾನದ ಇತಿಹಾಸ ಹೊಂದಿದೆ ಈ ಪ್ರತಿಷ್ಠಿತ ಶಾಲೆಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಭಾರತದ ಆಕಾಶದಲ್ಲಿಲ್ಲ ಮಳೆ ತರುವ ಮೋಡಗಳು ; ಆತಂಕಕಾರಿ ವಾಸ್ತವ ಬಿಂಬಿಸಿದ 3 ಉಪಗ್ರಹಗಳ ಚಿತ್ರಗಳು ; ಇದಕ್ಕೆ ಕಾರಣಗಳೇನು?ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!ಬೆಳಗಾವಿ : ಜಿ.ಎ.ಪ್ರೌಢಶಾಲೆಯ ನೂತನ ಪ್ರಧಾನಿ, ಉಪ ಪ್ರಧಾನಿ ಆಯ್ಕೆ..!