Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೊಸ ಜಾಹೀರಾತು ನೀತಿ-ಮುಚ್ಚುವ ಸ್ಥಿತಿಗೆ ಬಂದು ತಲುಪಿದ ಪತ್ರಿಕೆಗಳು : ಈ ಹೊಸ ನೀತಿ ಸ್ಥಗಿತಗೊಳಿಸಲು ಸಚಿವದ್ವಯರಿಗೆ ಸಂಪಾದಕರು, ಪತ್ರಕರ್ತರಿಂದ ಮನವಿ

Advertisement


ವಿಜಯಪುರ: ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–2026 ನ್ನು ಸ್ಥಗಿತಗೊಳಿಸಿ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಅಭಿವೃದ್ದಿಗೆ ಪೂರಕ ನೀತಿಯನ್ನು ಅಳವಡಿಸಿ ಅನುಷ್ಠಾನಕ್ಕೆ ತರಬೇಕೆಂದು ಸಚಿವರಾದ ಡಾ. ಎಂ.ಬಿ.ಪಾಟೀಲ ಹಾಗೂ ಶಿವಾನಂದ ಅವರಲ್ಲಿ ಜಿಲ್ಲಾ ಪತ್ರಿಕೆಗಳು ಮನವಿ ಸಲ್ಲಿಸಿವೆ.

ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿವೆ. ಆದರೆ ಹೊಸ ಜಾಹೀರಾತು ನೀತಿಯಲ್ಲಿ ಈ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣ ವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ, ಈ ನೀತಿಯನ್ನು ರೂಪಿಸುವ ವೇಳೆ ಯಾವುದೇ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತಯಾರಿಸಿರುವುದು ವಿಷಾದನೀಯವಾಗಿದೆ ಎಂದು ತಿಳಿಸಿದೆ.

ಬೃಹತ್ ಮತ್ತು ಮದ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹಾಗೂ ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೇಳುತ್ತಿರುವಾಗ, ಹೊಸ ಜಾಹೀರಾತು ನೀತಿಯಿಂದಾಗಿ ಪತ್ರಿಕೆಗಳು ಮುಚ್ಚುವ ಸ್ಥಿತಿಗೆ ಬಂದು ತಲುಪಿದಂತಾಗಿದೆ. ಆದ್ದರಿಂದ ತಕ್ಷಣವೇ ಹೊಸ ಜಾಹೀರಾತು ನೀತಿಯನ್ನು ನಿಲ್ಲಿಸಿ ಪತ್ರಿಕೆಗಳಿಗೆ ಪೂರಕವಾಗುವ ನೀತಿಯನ್ನು ತರಬೇಕೆಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಬೇಕೆಂದು ಮನವಿ ಮಾಡಿಕೊಂಡಿತು.

ಜಾಹೀರಾತು ನೀತಿಯಲ್ಲಿ ಯಾವ ಅಂಶಗಳು ಇರಬೇಕೆಂಬುದರ ಬಗ್ಗೆ ಸಮಗ್ರ ವಿವರಣೆಯನ್ನು ನೀಡಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಅವರಲ್ಲಿ ಪತ್ರಿಕೆಗಳ ಹಿತಾಸಕ್ತಿಯನ್ನು ಪರಿಗಣಿಸುವಂತೆ ಒತ್ತಾಯಿಸುವದಾಗಿ ಭರವಸೆಯನ್ನು ಪತ್ರಿಕಾ ಬಳಗಕ್ಕೆ ನೀಡಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಇರ್ಪಾನ್ ಶೇಖ, ಹಿರಿಯ ಸಂಪಾದಕರಾದ ಮೋಹನ ಕುಲಕರ್ಣಿ, ಪಾಂಡುರಂಗ ಮಮದಾಪುರ, ಮಹೇಶ ಶೆಟಗಾರ, ಮಾಧವರಾವ ಕುಲಕರ್ಣಿ, ಸುಶೀಲೇಂದ್ರ ನಾಯಕ, ಕೌಶಲ್ಯ ಪನಾಳಕರ, ಸಂಜಯ ಕೊಂಡಗೂಳಿ, ಸೀತಾರಾಮ ಕುಲಕರ್ಣಿ, ಇಂದುಶೇಖರ ಮಣೂರ, ಸಂಜೀವ ಕುಲಕರ್ಣಿ, ಶರದಕುಮಾರ ಅರ್ಜುಣಗಿ, ಸಿದ್ದಣ್ಣ ವಿಜಾಪುರ, ಅವಿನಾಶ ಬಿದರಿ, ಚಿದಂಬರ ಕುಲಕರ್ಣಿ, ಪವನ ಕುಲಕರ್ಣಿ, ಶರಣು ಮಸಳಿ, ವಿನೋದ ಸಾರವಾಡ, ಕೆ. ಕೆ. ಕುಲಕರ್ಣಿ, ಗುರು ಗದ್ದನಕೇರಿ, ಫಯಾಜ್ ಕಲಾದಗಿ, ಪುಂಡಲಿಕ ಮುರಾಳ ಮುಂತಾದವರು ಉಪಸ್ಥಿತರಿದ್ದರು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರಕಾರದಿಂದ ವಿಶೇಷ ಯೋಜನೆ ಮತ್ತು ಅನುದಾನ ಒದಗಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಕಿರಣ್ ಜಾಧವ ಆಟೋನಗರ, ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಿSSLC ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಥಳಿತವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನಇನ್ಮುಂದೆ ವೈದ್ಯರ ಚೀಟಿ ಇಲ್ಲದೇ ಕೆಮ್ಮಿನ ಔಷಧ ಮಾರಾಟ ನಿಷೇಧಮಾರಿಹಾಳ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ; ಉಚಿತ ನೇತ್ರ ತಪಾಸಣೆಯಿಂದ ಗ್ರಾಮಸ್ಥರಿಗೆ ಪ್ರಯೋಜನಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ ಸರ್ಕಾರಶರಣರು ಜನಪರವಾದ ಸಾಹಿತ್ಯಕ್ಕೆ ಒತ್ತು ನೀಡಿದರು: ಡಾ.ವಿದ್ಯಾವತಿ ಕುಂದರಗಿ* *ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಹಣದ ತೊಂದರೆಯುದ್ದರೂ ಪರರ ಹಣ ಬೇಡವೆಂದು ಚಿಕ್ಕೋಡಿಯಲ್ಲಿ ಪ್ರಾಮಾಣಿಕತೆ ಮೆರೆದ ಕುಂದಾಪುರದ ವ್ಯಕ್ತಿ..!ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ