Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
National News

ಫ್ರೀ ೩೩ ಜಿವಿ ಮವಲಂಕರ್  ಶೂಟಿಂಗ್ ಚಾಂಪಿಯನ್‌ಶಿಪ್‌ದಲ್ಲಿ ಎನ್‌ಸಿಸಿ ಕೆಡೆಟ್ ಆಕಾಶ ಗುಡಗೇನಟ್ಟಿಗೆ ಚಿನ್ನದ ಪದಕ ರಾಜ್ಯಕ್ಕೆ ಕೀರ್ತಿ ತಂದ ಯುವ ಶೂಟರ್ ಆಕಾಶ ಗುಡಗೇನಟ್ಟಿ

ಜನ ಜೀವಾಳ ಜಾಲ : ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿಎ ವಿದ್ಯಾರ್ಥಿ ಹಾಗೂ ಎನ್‌ಸಿಸಿ ಘಟಕದ ಸೀನಿಯರ್ ಅಂಡರ್ ಆಫೀಸರ್ ಆಕಾಶ ಸತೀಶ್ ಗುಡಗೇನಟ್ಟಿ ಕೇರಳದ ತಿರುವನಂತಪುರAನಲ್ಲಿ ಇಂದು ಜರುಗಿದ ೩೩ನೇ ಜಿ ವಿ ಮವಲಂಕರ್ ರಾಷ್ಟಿçÃಯ ಶೂಟಿಂಗ್ ಚಾಂಪಿಯನ್‌ಶಿಫ್ ಹಾಗೂ ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ(ಖIಈಐಇ) ಹಮ್ಮಿಕೊಂಡಿದ್ದ ಶೂಟಿಂಗ್‌ದಲ್ಲಿ ಚಿನ್ನದ ಪದಕವನ್ನು ಪಡೆದು ಅದ್ವಿತೀಯ ಸಾಧನೆ ಮಾಡಿದ್ದಾನೆ. ಶೂಟಿಂಗ್‌ದಲ್ಲಿ ೬೦೦ ಅಂಕಗಳಲ್ಲಿ ೫೩೫ ಅಂಕಗಳನ್ನು ಪಡೆಯುವ ಮೂಲಕ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾನೆ. ಈತ ಬೆಳಗಾವಿ ವರದಿ ಸಂಪಾದಕ ಸತೀಶ ಗುಡಗೇನಟ್ಟಿಯವರ ಹಿರಿಯ ಸುಪುತ್ರ.

ಭಾರತಾದ್ಯಂತದ ೧೮ ಯುವ ಶೂಟರ್‌ಗಳು ಅಂತಿಮ ಹಂತದ ಸ್ಪರ್ಧಿಸಿದ್ದರು. ಈ ಕಠಿಣ ಶೂಟಿಂಗ್ ಪಂದ್ಯಾವಳಿಯಲ್ಲಿ ಆಕಾಶ್ ಗುಡಗೇನಟ್ಟಿ ಅವರು ಅದ್ಭುತ ಶೂಟಿಂಗ್ ಕೌಶಲವನ್ನು ತೋರ್ಪಡಿಸಿ ಚಿನ್ನಕ್ಕೆ ಕೊರಳೊಡ್ಡಿದ್ದರೆ, ಜೂನಿಯರ್ ವಿಭಾಗದಲ್ಲಿಯೂ ಅಷ್ಟೇ ಕಠಿಣ ಸ್ಪರ್ಧೆಯನ್ನು ಎದುರಿಸಿ ಆಕಾಶ್ ಮತ್ತೊಂದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಟಿದ್ದಾರೆ. ೨೬ ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಎನ್‌ಸಿಸಿ ಕೆಡೆಟ್ ಆಗಿರುವ ಕೆಡೆಟ್ ಆಕಾಶ ಜಿವಿ ಮವಲಂಕರ್ ರಾಷ್ಟಿçÃಯ ಶೂಟಿಂಗ್ ಚಾಂಪಿಯನ್‌ಶಿಫ್‌ದ ಜೂನಿಯರ್ ಹಾಗೂ ಸೀನಿಯರ್ ಎರಡು ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದ ರಾಜ್ಯದ ಪ್ರಥಮ ಎನ್‌ಸಿಸಿ ಕೆಡೆಟ್ ಎಂಬ ಅಭಿದಾನಕ್ಕೆ ಪಾತ್ರನಾಗಿ ರಾಜ್ಯಕ್ಕೇ ಕೀರ್ತಿಯನ್ನು ತಂದಿದ್ದಾರೆ. ಜುಲೈದಲ್ಲಿ ತಮಿಳುನಾಡಿನಲ್ಲಿ ಜರುಗಿದ ನವದೆಹಲಿ ಡಿಜಿಎನ್‌ಸಿಸಿ ಶೂಟಿಂಗ್ ಚಾಂಪಿಯನಶಿಫ್‌ದಲ್ಲಿಯೂ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡು ೩೩ನೇ ಜಿ.ವಿ.ಮವಲಂಕರ್ ರಾಷ್ಟಿçÃಯ ಶೂಟಿಂಗ್ ಚಾಂಪಿಯನ್‌ಶಿಫ್‌ಗೆ ಆಯ್ಕೆಯಾಗಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಯ ಈ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಬೆಳಗಾವಿ ಗ್ರುಫ್ ಕಮಾಂಡರ್ ಕರ್ನಲ್ ಮೋಹನ್ ನಾಯ್ಕ, ೨೬ ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಲೆಫ್ಟನಂಟ್ ಕರ್ನಲ್ ಸುನೀಲ ದಾಗರ, ಎಡಮ್ ಆಫೀಸರ್ ಲೆಫ್ಟನಂಟ್ ಕರ್ನಲ್ ಸಿದ್ದಾರ್ಥ ರೆಡೂ ಶಂಕರ ಯಾದವ್, ಸುಬೇದಾರ್ ಮೇಜರ್ ಕಲ್ಲಪ್ಪಾ ಪಾಟೀಲ, ಕೆಎಲ್‌ಇ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ್ ಕಡಕೋಳ, ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
Lingaraj College NCC Cadet SUO Aakash Gudgennatti Recived Gold Medal Pre 33 All India G V Mavlankar Shooting Championship

Belagavi 8 Nov: NCC Cadet SUO Aakash Satish Gudgennatti of KLES Lingaraj College, Belagavi secured Gold Medal each in Senior and Junior Shooting at the Pre 33 All India G V Mavlankar Shooting Championship held at Thiruvananthapuram, Kerala. Aakash Satish Gudgennatti reprented the 26 Karnataka NCC Battalion . He secured 535 out of 600 points.
Dr Prabhakar Kore, Chairman, KLE Society, Col Mohan Nayak, Group Commander, Belagavi, Col S Darshan (Retd.) Commanding Officer, 26 Karnataka NCC Batallion, LT Colonel Sunil Dagar ,Commanding Officer, 26 Karnataka NCC Batallion, LT Colonel Siddarath Redu(SM), ADM Officer, 26 BN, Subedhar Major Kalappa Patil, Dr.Prakash Kadakol , Joint Secretary, KLE Society, Dr H.S. Melinmani, Principal, Lingaraj College, Smt Girija Hiremath, Principal, Lingaraj PU College, Captain Dr.Mahesh Gurangoudar, NCC Officer, Staff and students have congratulated the cadet.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು