Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಎನ್‌ಸಿಸಿ ಟ್ರ್ಯಾಕಿಂಗ್‌ ಕ್ಯಾಂಪ್‌ ಕೆಡೆಟ್‌ಗಳು ದೇಶ ಪರಂಪರೆಯನ್ನು ಅರಿತುಕೊಳ್ಳಬೇಕು: ಎನ್‌ಸಿಸಿ ಡಿಡಿಜಿ ಬಿ.ಅರುಣಕುಮಾರ ಸಲಹೆ

ಬೆಳಗಾವಿ : ಯುವ ಜನಾಂಗ ದೇಶದ ಸಂಪತ್ತಾಗಿದ್ದು, ಸಂಸ್ಕೃತಿ-ಪರಂಪರೆ ಹಾಗೂ ಪರಿಸರ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ. ಪರಿಸರ ಸಂರಕ್ಷಣೆ ಎನ್‌ಸಿಸಿಯ ಮೂಲ ಧೈಯವಾಗಿದೆ ಎಂದು ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರೇಟ್ ಆಫ್ ಜನರಲ್ ಬಿ.ಅರುಣಕುಮಾರ ಹೇಳಿದರು.

ಅವರು ಬೆಳಗಾವಿ ಜಾಧವ ನಗರದಲ್ಲಿ ಎನ್‌ಸಿಸಿ ಗ್ರೂಪ್ ಆಶ್ರಯದಲ್ಲಿ ನ. 22ರ ವರೆಗೆ ಹಮ್ಮಿಕೊಂಡಿರುವ ಅಖಿಲ ಭಾರತ ಟ್ರ್ಯಾಕಿಂಗ್ (ಚಾರಣ) ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಯುವ ಸಮುದಾಯದಲ್ಲಿ ಸಾಹಸ ಪ್ರವೃತ್ತಿ, ರಾಷ್ಟ್ರೀಯ ಪ್ರಜ್ಞೆ ಹಾಗೂ ಪರಿಸರದ ಕಾಳಜಿ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಚಾರಣ ಶಿಬಿರ ಸಹಕಾರಿಯಾಗಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯು ದೇಶ ಪರಂಪರೆ ಹಾಗೂ ಪರಿಸರವನ್ನು ಅರಿಯುವುದು ಬಹುಮುಖ್ಯ. ಈ ಉದ್ದೇಶದಿಂದ ಬೆಳಗಾವಿ ಚಾರಣ ಶಿಬಿರವನ್ನು ಆಯೋಜಿಸಲಾಗಿದೆ. ದೇಶದ ವಿವಿಧ ಸ್ಥಳಗಳಿಂದ ಆಗಮಿಸಿರುವ ನೀವು ಬೆಳಗಾವಿ ಸುತ್ತಮುತ್ತಲಿನ ಸುಂದರವಾದ ಬೆಟ್ಟಗುಡ್ಡ ಪರಿಸರವನ್ನು ಅರಿಯುತ್ತಿರೀ ಮಾತ್ರವಲ್ಲದೆ ಬೆಳಗಾವಿ ಪಾರಂಪರಿಕ ಇತಿಹಾಸವನ್ನು ತಿಳಿಯಸಲಾಗುವುದು ಎಂದು ಕೆಡೆಟ್‌ಗಳಿಗೆ ಕಿವಿಮಾತು ಹೇಳಿದರು.
ಬೆಳಗಾವಿ ಗ್ರೂಪ್ ಎನ್‌ಸಿಸಿಯ ಕಮಾಂಡರ್ ಕರ್ನಲ್ ಮೋಹನ್ ನಾಯಕ, ಈ ಶಿಬಿರದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ಒಟ್ಟಾಗಿ ಬೆಳಗಾವಿಯ ಸುತ್ತಲಿನ ಪ್ರಾಕೃತಿಕ ಸೌಂದರ್ಯ ಸವಿಯಲಿದ್ದಾರೆ. ಶಿಬಿರದಲ್ಲಿ ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ, ತಮಿಳುನಾಡು, ಪಾಂಡಿಚೇರಿ, ಕೇರಳ ಹಾಗೂ ಲಕ್ಷದೀಪ ದಿಂದ 510 ಎನ್ ಸಿಸಿ ಕೆಡೆಟ್‌ಗಳು, 15 ಅಧಿಕಾರಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ಟ್ರೇನಿಂಗ್‌ ಆಫೀಸರ್‌ ಜಗದೀಶ ಎಸ್‌ಎನ್‌, 26 ಕರ್ನಾಟಕ ಎನ್ ಸಿಸಿ ಬಟಾಲಿಯನ್ ಅಧಿಕಾರಿ ಕರ್ನಲ್ ಸುನೀಲ ದಾಗ‌ರ, ಲೆಫ್ಟಿನೆಂಟ್ ಕರ್ನಲ್ ಸಿದ್ದಾರ್ಥ ರೇಡು, ಸುಬೇದಾರ ಮೇಜರ್ ಕಲ್ಲಪ್ಪ ಪಾಟೀಲ ಇತರರಿದ್ದರು ಉಪಸ್ಥಿತರಿದ್ದರು. ಕೆಡೆಟ್‌ಗಳು ಈ 8 ದಿನದ ಶಿಬಿರದಲ್ಲಿ ಬೆಳಗುಂದಿ ಹಾಗೂ ವೈಜನಾಥ ಬೆಟ್ಟಗಳಲ್ಲಿ ಚಾರಣವನ್ನು ನಡೆಸಲಿದ್ದಾರೆ. ಹಾಗೂ ರಾಜಹಂಸಗಡ, ಮರಾಠಾ ಲೈಟ್ ಎನ್‌ಫಂಟ್ರಿ, ಕಮಾಂಡೋವಿಂಗ್‌, ಬೆಳಗಾವಿ ಕೋಟೆ ಆವರಣ ಮೊದಲ್ಗೊಂಡು ಹಲವಾರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ