ಬೆಳಗಾವಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12 ವರ್ಷ ಸಂದಿದೆ. ಈ ಹಿನ್ನಲೆಯಲ್ಲಿ ಅವರು ಮಾಡಿರುವ ಸಾಧನೆಗಳ ಪುಸ್ತಕವನ್ನು ಬಿಜೆಪಿ ನಾಯಕರು ಬೆಳಗಾವಿಯ ಸಾಹಿತಿಗಳಿಗೆ ವಿತರಿಸಿದರು.
ಸಾಹಿತಿ ಎಂ.ಎಸ್. ಇಂಚಲ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಬೆಳಗಾವಿ ಮೇಯರ್ ಪ್ರೀತಿ ಕಾಮಕರ, ಉಪ ಮೇಯರ್ ಹನುಮಂತ ಕೊಂಗಾಲಿ ಹಾಗೂ ಬಿಜೆಪಿ ನಾಯಕರು ತೆರಳಿ ಮೋದಿಯವರ ಸಾಧನೆಯ ಪುಸ್ತಕ ವಿತರಿಸಿದರು
ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಡಾ.ಬಸವರಾಜ ಜಗಜಂಪಿ ಅವರ ಮನೆಗೆ ಮಹಾನಗರ ಪಾಲಿಕೆ ಸದಸ್ಯ ಶ್ರೇಯಸ್ ನಾಕಾಡಿ, ವಿಜಯ ಕೊಡಗನೂರು ಮತ್ತಿತರರು ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರ ಪುಸ್ತಕ ವಿತರಿಸಿದರು.