Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಅಧಿವೇಶನಕ್ಕೆ ಹೋದಾಗ ತಾನು ನೆಟ್ಟ ಗಿಡವನ್ನು ಪರಿಶೀಲಿಸಿದ ಶಾಸಕ ಅಶೋಕ್ ರೈ ಗಿಡಗಳ ಮೇಲಿನ ಪ್ರೀತಿಯನ್ನು ಬೆಳಗಾವಿಯಲ್ಲೂ ಮರೆಯಲಿಲ್ಲ..

ಬೆಳಗಾವಿ : ಈ ಮಳೆಗಾಲ ಬಂದಾಗ ನಾವು ಹಲವು ಕಡೆ ವನಮಹೋತ್ಸವ ಮಾಡುವುದನ್ನು ಕಾಣುತ್ತೇವೆ. ಗಿಡಗಳನ್ನು ತಾವು ನೆಡುವ ಮೂಲಕ ನೀವು ಗಿಡಗಳನ್ನು ನೆಟ್ಟು ಬೆಳೆಸಬೇಕು,ಪರಿಸರ ಪ್ರೇಮ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ. ವನಮಹೋತ್ಸವ ಪುಣ್ಯ‌ದಿನದಂದು ನೆಟ್ಟ ಬದುಕಿದೆಯೋ ಸತ್ತಿದೆಯೋ ಎಂದು ಆ ಬಳಿಕ ನೋಡುವವರೇ ಇಲ್ಲ..ಇದು ಎಲ್ಲೆಡೆಯೂ ನಡೆಯುವ ಸಂಗತಿ..ಇರ್ಲಿ ಬಿಡಿ

ಪುತ್ತೂರು-ಉಪ್ಪಿನಂಗಡಿ ರಸ್ತೆಯ ಬದಿಗಳಲ್ಲಿ ಹಾಗೂ ಇನ್ನಿತರ ರಸ್ತೆ ಹಾದು ಹೋಗುವ ಕಡೆಗಳಲ್ಲಿ ಕಳೆದ ಎರಡು ವರ್ಷದಿಂದ ವಿವಿಧ ಕಾಟು ಗಿಡಗಳನ್ನು ನೆಡಲಾಗಿದೆ. ನೆಟ್ಟದ್ದು ಅರಣ್ಯ ಇಲಾಖೆ,‌ಸಾಮಾಜಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಆದರೆ ಗಿಡ ನೆಡಿಸಿದ್ದು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು.
ಶಾಸಕನಾಗಿ ಆಯ್ಕೆಯಾದ ಮೊದಲ ದಿನದಿಂದಲೇ ಈ ಕೆಲಸವನ್ನು ಆರಂಭ ಮಾಡಿದ್ದರು. ಇಂದು ಬಹುತೇಕ ರಸ್ತೆ ಬದಿಯಲ್ಲಿ ಗಿಡಗಳು ಸೊಂಪಾಗಿ ಬೆಳೆಯುತ್ತಿರುವುದನ್ನು‌ಕಂಡು ಅನೇಕರು‌ಖುಷಿ ಪಟ್ಟಿದ್ದಾರೆ. ವಿಶೇಷವೆಂದರೆ ಮರದಿಂದ ಕಾಟು‌ಮಾವನ್ನೂ ಕೊಯ್ಯದಂತೆ ಸೂಚನೆಯನ್ನೂ ನೀಡಿದ್ದರು.
ಪುತ್ತೂರು ಶಾಸಕರ ಗಿಡಗಳ ಮೇಲಿನ ಈ ಪ್ರೀತಿ‌ ದೂರದ ಬೆಳಗಾವಿಗೂ ಪಸರಿಸಿತ್ತು.‌ಶಾಸಕನಾದ ಬಳಿಕ ಬೆಳಗಾವಿ ಅಧಿವೇಶನದಲ್ಲಿ‌ಮೊದಲ ಬಾರಿಗೆ ಭಾಗವಹಿಸಿದಾಗ ಅಲ್ಲೊಂದು ಹಲಸಿನ ಗಿಡ ನಾಟಿ ಮಾಡಿದ್ದರು.‌ಅಂದು‌ಅದಕ್ಕೆ ನೀರು‌ಗೊಬ್ಬರ ಹಾಕಿ ನೋಡಿಕೊಳ್ಳಿ ಎಂದು ಹೇಳಿ ಬಂದಿದ್ದರು. ಇಂದು‌ ಆ ಗಿಡಕ್ಕೆ‌ಎರಡರ ಹರೆಯ...
ತಾನು ನೆಟ್ಟ ಗಿಡ ಏನಾಗಿದೆ ಎಂದು ನೋಡಲು ಸದನದ ಕಲಾಪದ ವಿರಾಮದ ವೇಳೆ ತೆರಳಿದ್ದಾರೆ. ಗಿಡ ಬದುಕಿದೆ,ದೊಡ್ಡದಾಗಿದೆ,ಅದಕ್ಕೆ ನೀರು ಗೊಬ್ಬರ ಹಾಕಿ ಅಲ್ಲಿನ‌ ಸಿಬಂದಿಗಳು ಪೋಷಣೆ ಮಾಡಿದ್ದನ್ನು ಕಂಡು ತೃಪ್ತರಾದರು. ತಾನೂ ಇವತ್ತು ಅದೇ ಗಿಡಕ್ಕೆ ನೀರು, ಗೊಬ್ಬರ ಹಾಕಿ ಬಂದಿದ್ದೇನೆ ಎಂದು ಗಿಡದ ಬಳಿ ಮಾತನಾಡಿದಂತೆ ಭಸವಾಗುವ ರೀತಿಯಲ್ಲಿ ಸಂತೈಸಿ ಬಂದಿದ್ದಾರೆ.ಇದಲ್ಲವೇ ನಿಜವಾದ ಸಸ್ಯ ಪ್ರೇಮ,ಪರಿಸರ ಪ್ರೇಮ...
ನಾವೂ ನೆಟ್ಟ ಗಿಡ ಏನಾಗಿದೆ ಎಂದು ನೋಡಿ ಬರೋಣ,ಗಿಡಗಳ ಮೇಲಿನ ಪ್ರೀತಿಯನ್ನು ಜಗಕೆ ಸಾರಿ ಹೇಳೋಣ
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾದೇಶದ ಹೆಸರಲ್ಲಿ ವಿದೇಶಿ ಅಡಕೆ ಅಕ್ರಮ ಆಮದು ಪತ್ತೆ ; ₹2500 ಕೋಟಿ ನಷ್ಟದ ಶಂಕೆ : ನಮ್ಮ ಬೆಳೆಗಾರರ ಮೇಲೆ ಪರಿಣಾಮ ಏನು..?ಅಮೆರಿಕ ಸೈನಿಕನನ್ನು ಕೊಂದ್ರೆ ಅಥವಾ ಸೆರೆ ಹಿಡಿದ್ರೆ 30 ಸಾವಿರ ಡಾಲರ್ ಬಹುಮಾನ : ಮಹಿಳೆಯರಿಗೆ ದುಪ್ಪಟ್ಟು ಹಣ; ಇರಾನ್‌ ಘೋಷಣೆನಾಲ್ಸಾರ್‌ ನಂತರ ಬೆಂಗಳೂರಿನ ಪ್ರತಿಷ್ಠಿತ ಕಾನೂನು ಕಾಲೇಜಿನಿಂದಲೂ ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಕ್ಕೆ ವಿರೋಧದೇವಸ್ಥಾನದಲ್ಲಿ ಕಾಲ್ತುಳಿತ : 7 ಮಂದಿ ಸಾವು, ಹಲವರಿಗೆ ಗಾಯವಂದೇ ಮಾತರಂಗೆ ಅಪಮಾನ ಆರೋಪ ; ಸೋನಿಯಾ ಗಾಂಧಿ ವಿರುದ್ಧ ದೂರುಒಳಚರಂಡಿ ಕಾಮಗಾರಿ ವೇಳೆ 18 ವರ್ಷದ ಕಾರ್ಮಿಕನಿಗೆ ಸಿಕ್ಕಿತು 98 ಕೋಟಿ ರೂ. ಮೌಲ್ಯದ ನಿಧಿ….!ಕರ್ನಾಟಕದ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕ ಹೆಚ್ಚಳ46 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕಳ್ಳತನ ಪ್ರಕರಣದ ಆರೋಪಿ ಬಂಧನಕನ್ನಡ ಸಾಹಿತ್ಯ ಕಣಜವನ್ನು ಶ್ರೀಮಂತಗೊಳಿಸಿದವರು ಡಾ. ಸರಜೂ ಕಾಟ್ಕರ್ : ಡಾ. ಬಸವರಾಜ ಜಗಜಂಪಿಮೇಕೆ ಬೇಟೆಗೆ ಮಾಂಸದ ಅಂಗಡಿಗೆ ನುಗ್ಗಿದ ಹೆಬ್ಬಾವು; ಕುತ್ತಿಗೆಗೆ ಸುತ್ತಿಕೊಂಡು ಆಟವಾಡಿದ ಕುಡುಕ!