Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪಶ್ಚಿಮ ಬಂಗಾಳ ಚುನಾವಣೆ : ಮಮತಾಗೆ ಶಾಕ್ ನೀಡುತ್ತಾ ಬಿಜೆಪಿ ? ಅಚ್ಚರಿಯ ಫಲಿತಾಂಶ ಬರಬಹುದು ಎಂದ ಮ್ಯಾಟ್ರಿಜ್ ಸಮೀಕ್ಷೆ

ಕೋಲ್ಕತ್ತಾ: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಮತ್ತು ಭಾರತೀಯ ಜನತಾ ಪಾರ್ಟಿ (BJP) ನಡುವೆ ತೀವ್ರ ಹಣಾಹಣಿ ನಡೆಯಲಿದೆ ಎಂದು ‘ಮ್ಯಾಟ್ರಿಜ್’ (Matrize) ಸಂಸ್ಥೆಯ ಚುನಾವಣಾ ಪೂರ್ವ ಸರ್ವೆ ಹೇಳಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಪ್ರಬಲ ಸವಾಲೊಡ್ಡುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

ಸರ್ವೆ ಪ್ರಕಾರ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) 140 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ, ಬಿಜೆಪಿ 130 ರಿಂದ 150 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಂಡುಬಂದಿದ್ದು, ಇದು ಚುನಾವಣೆಯ ಜಿದ್ದಾಜಿದ್ದಿನ ಹೋರಾಟವನ್ನು ಸೂಚಿಸುತ್ತದೆ. ಇತರ ಪಕ್ಷಗಳು 8 ರಿಂದ 16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಚುನಾವಣಾ ಪೂರ್ವ ಸಮೀಕ್ಷೆಯ ಮುಖ್ಯಾಂಶಗಳು (ಒಟ್ಟು ಸ್ಥಾನಗಳು: 294)
ಟಿಎಂಸಿ : 140 – 160 ಸ್ಥಾನಗಳು
ಬಿಜೆಪಿ: 130 – 150 ಸ್ಥಾನಗಳು
ಇತರರು: 08 – 16 ಸ್ಥಾನಗಳು

ಮತ ಹಂಚಿಕೆ:
ರಾಜ್ಯದಲ್ಲಿ ಟಿಎಂಸಿ ಶೇ. 43ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದ್ದರೆ, ಬಿಜೆಪಿ ಶೇ. 41ರಷ್ಟು ಮತ್ತು ಇತರರು ಶೇ. 16ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಉತ್ತರ ಬಂಗಾಳದಲ್ಲಿ ಟಿಎಂಸಿ 17-20 ಸ್ಥಾನಗಳನ್ನು, ಬಿಜೆಪಿ 30-33 ಸ್ಥಾನಗಳನ್ನು ಮತ್ತು ಇತರರು 2-5 ಸ್ಥಾನಗಳನ್ನು ಗೆಲ್ಲಬಹುದು ಎಂದು ಮ್ಯಾಟ್ರಿಜ್ ಅಭಿಪ್ರಾಯ ಸಮೀಕ್ಷೆ ಭವಿಷ್ಯ ನುಡಿದಿದೆ. ದಕ್ಷಿಣ ಬಂಗಾಳದಲ್ಲಿ ಟಿಎಂಸಿ 95-100 ಸ್ಥಾನಗಳನ್ನು, ಬಿಜೆಪಿ 75-80 ಮತ್ತು ಇತರರು 04-08 ಸ್ಥಾನಗಳನ್ನು ಪಡೆಯಬಹುದು ಎಂದು ಅದು ಹೇಳಿದೆ.

ಟಿಎಂಸಿ ವರ್ಸಸ್ ಬಿಜೆಪಿ: ಪ್ರತಿಷ್ಠೆಯ ಕಣ
2011ರಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. 2016ರಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ, 2021ರಲ್ಲಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು.
ಈ ಬಾರಿ ಮಾಜಿ ಟಿಎಂಸಿ ನಾಯಕ ಹುಮಾಯೂನ್ ಕಬೀರ್ ಸ್ಥಾಪಿಸಿರುವ ‘ಆಮ್ ಜನತಾ ಉನ್ನಯನ್ ಪಾರ್ಟಿ’ (AJUP) ಜೊತೆ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ (AIMIM) ಮೈತ್ರಿ ಮಾಡಿಕೊಂಡಿದೆ. ಇದು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಮತ ಹಂಚಿಕೆಯ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಸ್ಪರ್ಧೆಯು ಪ್ರಮುಖವಾಗಿ ಟಿಎಂಸಿ ಮತ್ತು ಬಿಜೆಪಿ ನಡುವೆಯೇ ಇರಲಿದೆ.

2021ರ ಚುನಾವಣಾ ಫಲಿತಾಂಶ ಏನಾಗಿತ್ತು?
ಕಳೆದ ಚುನಾವಣೆಯಲ್ಲಿ ಟಿಎಂಸಿ 213 ಸ್ಥಾನಗಳನ್ನು ಗೆಲ್ಲುವ ಮೂಲಕ ಶೇ. 48.02ರಷ್ಟು ಮತಗಳೊಂದಿಗೆ ಟಿಎಂಸಿ ಭರ್ಜರಿ ಬಹುಮತ ಪಡೆದಿತ್ತು. ಬಿಜೆಪಿ 77 ಸ್ಥಾನ (ಶೇ. 38.15 ಮತ) ಗಳಿಸಿತ್ತು. ಗೂರ್ಖಾ ಜನಮುಕ್ತಿ ಮೋರ್ಚಾ (GJM) ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ತಲಾ ಒಂದು ಸ್ಥಾನ ಗೆದ್ದಿದ್ದವು. ಕಾಂಗ್ರೆಸ್ ಮತ್ತು ಎಡಪಕ್ಷಗಳು (CPI-M, AIFB, RSP, CPI) ಖಾತೆ ತೆರೆಯುವಲ್ಲಿ ವಿಫಲವಾಗಿದ್ದವು.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ