Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಶಾಸಕ ಲಕ್ಷ್ಮಣ ಸವದಿ ವಿರುದ್ಧ ಸುಳ್ಳು ಹಲ್ಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಅಥಣಿಯಲ್ಲಿ ಬೃಹತ್ ಪ್ರತಿಭಟನೆ

ಅಥಣಿ: ಪಟ್ಟಣದಲ್ಲಿ ಸೋಮವಾರ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಸುಪತ್ರ ಚಿದಾನಂದ ಸವದಿ ಅವರು ಡಿಸಿಸಿ ಯುನಿಯನ್ ಅಧ್ಯಕ್ಷ ನಿಂಗಪ್ಪ ಕರೆಣ್ಣವರ ಸುಳ್ಳು ಹಲ್ಲೆ ಆರೋಪ ಖಂಡಿಸಿ ಅಥಣಿಯಲ್ಲಿ ಸಾವಿರಾರು ಜನ ಜಮಾವಣೆಗೊಂಡ ಸವದಿ ಬೆಂಬಲಿಗರು ಶಾಸಕರ ನಿವಾಸದಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಮೂಲಕ ಶಿವಯೋಗಿ ವೃತ್ತದಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ರಾಜಕೀಯ ಪಿತೂರಿ ಮಾಡುತ್ತಿರುವವರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿವೈಎಸ್‌ಪಿ ಪ್ರಶಾಂತ ಮುನ್ನೊಳ್ಳಿ ಅವರಿಗೆ ಮನವಿ ಸಲ್ಲಿಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಶಿವಕುಮಾರ ಸವದಿ ಮಾತನಾಡಿ, "ಇದು ಶಾಸಕ ಲಕ್ಷ್ಮಣ ಸವದಿ ಅವರ ರಾಜಕೀಯ ವರ್ಚಸ್ಸನ್ನು ಕುಗ್ಗಿಸಲು ವಿರೋಧಿಗಳು ಹೂಡಿರುವ ವ್ಯವಸ್ಥಿತ ಷಡ್ಯಂತ್ರವಾಗಿದೆ,ಅಥಣಿ ತಾಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧಿಗಳು ಸುಳ್ಳು ಆರೋಪ ಹೊರಿಸುತ್ತಿರುವುದು ಸರಿಯಲ್ಲ" ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರ ವಿರುದ್ದ ಹಿಂದೆ ಅನೇಕ ಬಾರಿ ಸುಳ್ಳು ಆರೋಪಗಳನ್ನು ಮಾಡಿದ್ದಾಗ ಕ್ಷೇತ್ರದ ಜನರು ಅಂತವರಿಗೆ ತಕ್ಕ ಉತ್ತರ ನೀಡಿದ್ದಾರೆ. ಶಿವಯೋಗಿಗಳ ನಾಡಿನಲ್ಲಿ ದಬ್ಬಾಳಿಕೆ ಷಡ್ಯಂತ್ರಗಳಿಗೆ ಅವಕಾಶ ಇಲ್ಲ
"ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆ ಮಾಡಬೇಕು. ರಾಜಕೀಯ ದ್ವೇಷಕ್ಕಾಗಿ ಅಮಾಯಕರನ್ನು ಬಳಸಿಕೊಂಡು ಸವದಿ ಅವರ ಹೆಸರಿಗೆ ಕಪ್ಪುಚುಕ್ಕೆ ತರುವ ಪ್ರಯತ್ನವನ್ನು ನಾವು ಸಹಿಸುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮುಖಂಡ ಶಿವು ಗುಡ್ಡಾಪುರ ಮಾತನಾಡಿ ಶಾಸಕ ಲಕ್ಷ್ಮಣ ಸವದಿ ವಿರುದ್ದ ಕಾಣದ ಕೈಗಳು ಕೆಲಸ ಮಾಡುತ್ತಿವೆ, ರಾಜಕೀಯ ಷಡ್ಯಂತ್ರ ಹಿನ್ನಲೆಯಲ್ಲಿ ಸುಳ್ಳು ಹಲ್ಲೆ ಆರೋಪಗಳನ್ನು ಸವದಿ ಕುಟುಂಬದ ವಿರುದ್ದ ಮಾಡಲಾಗುತ್ತಿದೆ, ಇಂತಹ ಘಟನೆಗಳನ್ನು ಅಥಣಿ ಕ್ಷೇತ್ರದ ಜನರು ಸಹಿಸುವದಿಲ್ಲ ಎಂದು ಹೇಳಿದರು .

ಈ ವೇಳೆ ಕೃಷ್ಣಾ ಸಕ್ಕರೆ ಕಾರ್ಖಾನೆ ಅದ್ಯಕ್ಷ ಪರಪ್ಪಾ ಸವದಿ , ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಪುರಸಬೆ ಸದಸ್ಯರಾದ ರಾಜೂ ಗುಡೋಡಗಿ, ಸಂತೋಷ ಸಾವಡಕರ, ಮುಖಂಡರಾದ ಡಾ. ಎಮ್ ಜಿ ಹಂಜಿ, ವಿಜಯಕುಮಾರ ಬುರ್ಲಿ, ಸುರೇಶ ಮಾಯಣ್ಣವರ,ಮಲ್ಲೇಶ ಸವದಿ, ಶಿವಾನಂದ ಸವದಿ,ಶ್ರೀಶೈಲ ಶೆಲ್ಲಪ್ಪಗೋಳ, ಪರಪ್ಪ ಸವದಿ, ಅಮೋಘ ಖೋಬ್ರಿ, ಎಸ್ ಆರ್ ಗೂಳಪ್ಪನವರ, ಮಲ್ಲೇಶ ಸವದಿ, ಡಿ ಬಿ ಠಕ್ಕಣ್ಣವರ. ಸುಶೀಲಕುಮಾರ ಪತ್ತಾರ, ಸಿದ್ರಾಯ ಯಲ್ಲಡಗಿ, ರಾಜೂ ನಾಡಗೌಡ, ಸಿ ಎಸ್ ನ್ಯಾಮಗೌಡ, ಕಲ್ಲಪ್ಪ ವನಜೋಳ, ಪ್ರಸನ್ನ ಸಗರಿ, ಬಿಪೀನ್ ತೇಜವಾಣಿ, ವಿಶ್ವನಾಥ ತೆಲಸಂಗ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು .
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಪೊಲೀಸರ ಬೇಜವಾಬ್ದಾರಿಗೆ ಮೊಮ್ಮಗನಿಂದಲೇ ಕೊಲೆಯಾದ ಅಜ್ಜಿ..!ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ಬೆಂಕಿ ಅವಘಡ; 68 ಪ್ರಯಾಣಿಕರ ಸ್ಥಳಾಂತರವಿದೇಶಕ್ಕೆ ತೆಗೆದುಕೊಂಡು ಹೋಗಿದ್ದ ಸಾವಿರ ವರ್ಷಗಳ ಹಿಂದಿನ ತಾಮ್ರ ಶಾಸನಕ್ಕೆ ಕೊನೆಗೂ ಭಾರತಕ್ಕೆ ವಾಪಸ್..!ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು