Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯ ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣಗಳಿಗೆ ಒಂದೇ ದಿನ ಶಿಕ್ಷೆ ಪ್ರಕಟ; ಕಣ್ಣು ಹೊಡೆದವನಿಗೆ 3 , ಅತ್ಯಾಚಾರಿಗೆ 27 ವರ್ಷ ಜೈಲು ಶಿಕ್ಷೆ..!

ಕಾಕತಿ ಠಾಣೆಯ ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣಗಳಿಗೆ ಒಂದೇ ದಿನ ಶಿಕ್ಷೆ ಪ್ರಕಟ..!

ಬಾಲಕಿಗೆ ಕಣ್ಣು ಹೊಡೆದು, ಸಣ್ಣೆ ಮಾಡಿದವನಿಗೆ 3 ವರ್ಷ..!

  • ಬೆನಕೊಳ್ಳಿ ಅತ್ಯಾಚಾರಿಗೆ 27 ಜೈಲು ಶಿಕ್ಷೆ..!


ಕಿರುಕುಳ ಕೊಡುತ್ತಿದ್ದ ಕಿರಾತಕರಿಗೆ ಕಂಬಿ ಹಿಂದೆ ಕಳಿಸಿದ ಕಾಕತಿ PI ಸುರೇಶ್ ಶಿಂಗಿ & PSI ಮಂಜುನಾಥ ನಾಯಿಕ, ರವಿ ವಿ, ಮಂಜುನಾಥ ಹುಲಕುಂದ, ಮೃತ್ಯುಂಜಯ ತನಿಖೆ..!

ಬೆಳಗಾವಿ ತಾಲೂಕಿನ ಕಾಕತಿ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪೋಕ್ಸೋ ಪ್ರಕರಣಗಳಿಗೆ ಒಂದೇ ದಿನ ಶಿಕ್ಷೆ ಪ್ರಕಟವಾಗಿದ್ದು , ಪರಶ್ಯನಟ್ಟಿ ಗ್ರಾಮದಲ್ಲಿ ಬಾಲಕಿಗೆ ಕಣ್ಣು ಹೊಡೆದು, ಸಣ್ಣೆ ಮಾಡಿದವನಿಗೆ 3 ವರ್ಷ ಹಾಗೂ ಇನ್ನೊಂದು ಪ್ರಕರಣದ ಬೆನಕೊಳ್ಳಿ ಗ್ರಾಮದಲ್ಲಿ ಬಾಲಕಿಯ ಅತ್ಯಾಚಾರಿಗೆ 27 ಜೈಲು ಶಿಕ್ಷೆ ವಿಧಿಸಿ ಪೋಕ್ಸೋ ನ್ಯಾಯಾಲಯ ನಿನ್ನೆ (10ಮಾರ್ಚ್2026) ಆದೇಶ ಹೊರಡಿಸಿದೆ.

ಯಾವವು ಪ್ರಕರಣಗಳು..?

ದಿನಾಂಕ 17/01/2024 ರಂದು ಆರೋಪಿ ಸಚಿನ ಅಪ್ಪಯ್ಯಾ ನಾಯಿಕ (24) ಸಾ: ಪರಶ್ಯಾನಟ್ಟಿ ತಾ- ಜಿ: ಬೆಳಗಾವಿ ಈತನು ನೊಂದ ಬಾಲಕಿ ಆಡುಗಳಿಗೆ ಮೇವು ತರಲು ಹೋಗುವಾಗ ಆಕೆಯನ್ನು ಹಿಂಬಾಲಿಸಿ ಅವಳಿಗೆ ಕಣ್ಣು ಹೊಡೆದು, ಸಣ್ಣೆ ಮಾಡಿ, ಲೈಂಗಿಕ ಕಿರುಕುಳ ನೀಡುತ್ತಿರುವ ಕುರಿತಾಗಿ ಕಾಕತಿ ಪೊಲೀಸ್ ಠಾಣೆ 25/2024 ಕಲಂ 354(ಎ) ಐಪಿಸಿ & 12 ಪೋಕ್ಸೋ ಆಕ್ಟ್-2012 ನೇದ್ದರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖಾಧಿಕಾರಿಗಳಾದ ಮಂಜುನಾಥ ಹುಲಕುಂದ ಪಿ.ಎಸ್.ಐ ಈ ಹಿಂದೆ ಕಾಕತಿ ಠಾಣೆ ಸದ್ಯ ಮಾರಿಹಾಳ ಠಾಣೆ ಮತ್ತು ರವಿ ವಡ್ಡರ, ಪಿ.ಎಸ್.ಐ ಸದ್ಯ ಬೆಂಡಿಗೇರಿ ಠಾಣೆ (ಹು-ಧಾ ಪೊಲೀಸ್ ಕಮೀಷನರೇಟ್) ಹಾಗೂ ಅವರ ನೇತೃತ್ವದ ತಂಡವು ತನಿಖೆ ಕೈಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸದರಿ ಪ್ರಕರಣವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-01 ನ್ಯಾಯಾಲಯದ ಸ್ಟೇಷಲ್ ಸಿ.ಸಿ ನಂ. 199/2024 ರಲ್ಲಿ ವಿಚಾರಣೆ ಮಾಡಿ ನ್ಯಾಯಾಧೀಶೆ ಸಿ.ಎಮ್. ಪುಷ್ಪಲತಾ ಆರೋಪಿಯಾದ ಸಚಿನ್ ಅಪ್ಪಯ್ಯಾ ನಾಯಿಕ, (24) ಸಾ॥ ಪರಶ್ಯಾನಟ್ಟಿ ತಾ॥ಜಿ! ಬೆಳಗಾವಿ ಈತನಿಗೆ ದಿನಾಂಕ 10/03/2025 ರಂದು ಒಟ್ಟು 3 ವರ್ಷ ಶಿಕ್ಷೆ ಮತ್ತು 10,000/- ದಂಡ ವಿಧಿಸಿ ಅಂತಿಮ ಆದೇಶ ಹೊರಡಿಸಿರುತ್ತಾರೆ.

ಬೆನಕೊಳ್ಳಿ ಅತ್ಯಾಚಾರಿಗೆ 27 ವರ್ಷ ಜೈಲು ಶಿಕ್ಷೆ..!

ಬೆಳಗಾವಿ: ದಿನಾಂಕ 18/03/2025 ರಂದು ಆರೋಪಿ ಈರಪ್ಪಾ ತಂದೆ ಈರಪ್ಪಾ ದನಾಕಾರ. (23) ಸಾ: ಬೆನಕೋಳ್ಳಿ, ತಾ&ಜಿ: ಬೆಳಗಾವಿ ಈತನು ನೊಂದ ಬಾಲಕಿಯನ್ನು ಆಕೆಯ ಮನೆಯಿಂದ ತನ್ನ ಮೋಟಾರ್ ಸೈಕಲ್ ಮೇಲೆ ಪಣಗುತ್ತಿ ಗ್ರಾಮ ಹದ್ದಿ ಸರ್ಕಾರಿ ಪಾರೆಸ್ಟ್ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಪ್ತಾಪ್ತ ವಯಸ್ಸಿನವಳು ಅಂತಾ ಗೊತ್ತಿದರೂ ಬಲವಂತವಾಗಿ ಅತ್ಯಾಚಾರ ಮಾಡಿದ ಬಗ್ಗೆ ಕಾಕತಿ ಪೊಲೀಸ್ ಠಾಣೆ ಮೊ ಸಂ. 59/2025 ಕಲಂ 137(2), 65(1) ಬಿ.ಎನ್.ಎಸ್ ಆಕ್ಟ್-2023 & 4, 6 ಪೋಕ್ಸ್ ಆಕ್ಟ್-2012 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಿನಾಂಕ 23/04/2025 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತನಿಖಾಧಿಕಾರಿಯಾದ ಕಾಕತಿ PI ಸುರೇಶ ಪಿ ಶಿಂಗಿ ಹಾಗೂ ಅವರ ತಂಡ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಸದರಿ ಪ್ರಕರಣವು ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ. ಎಫ್.ಟಿ.ಎಸ್.ಸಿ-01 ನ್ಯಾಯಾಲಯದ ಸ್ಪೇಷಲ್ ಸಿ.ಸಿ ನಂ. 362/2025 ರಲ್ಲಿ ವಿಚಾರಣೆ ಮಾಡಿ ಸಿ.ಎಮ್. ಪುಷ್ಪಲತಾ ನ್ಯಾಯಾಧೀಶರು ಆರೋಪಿಯಾದ ಈರಪ್ಪಾ ತಂದೆ ಈರಪ್ಪಾ ದನಾಕಾರ (23) ಸಾ: ಬೆನಕೋಳ್ಳಿ, ತಾ&ಜಿ: ಬೆಳಗಾವಿ ಈತನಿಗೆ ದಿನಾಂಕ 10/03/2026 ರಂದು ಒಟ್ಟು 27 ವರ್ಷ ಶಿಕ್ಷೆ ಮತ್ತು 1,25,000/- ದಂಡ ವಿಧಿಸಿ ಅಂತಿಮ ಆದೇಶ ಹೊರಡಿಸಿರುತ್ತಾರೆ.

ಈ ಎರಡು ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಎಲ್.ವಿ ಪಾಟೀಲ, ಪಬ್ಲಿಕ್ ಪ್ರಾಸಿಕ್ಯೂಟರ್ ರವರು ವಾದ ಮಂಡಿಸಿದ್ದು, ಆರೋಪಿಗಳಿಗೆ ಶಿಕ್ಷೆಯಾಗಲು ಮಹತ್ವದ ಪಾತ್ರ ವಹಿಸಿದ್ದಾರೆ.

ಬೆಳಗಾವಿ ಗ್ರಾಮೀಣ ACP ಗಂಗಾಧರ ಬಿ.ಎಮ್, ಮಾರ್ಗದರ್ಶನದಲ್ಲಿ ತನಿಖೆ ಕೈಕೊಂಡು ಸುರೇಶ ಪಿ ಶಿಂಗಿ, ಪಿ.ಐ ಕಾಕತಿ ಪಿ.ಎಸ್, ಮಂಜುನಾಥ ಹುಲಕುಂದ ಪಿ.ಎಸ್.ಐ ಮಾರಿಹಾಳ ಠಾಣೆ, ಮಂಜುನಾಥ ನಾಯಕ, ಪಿ.ಎಸ್.ಐ, PSI ರವಿ ವಡ್ಡರ ಬೆಂಡಿಗೇರಿ ಠಾಣೆ, ಮೃತ್ಯುಂಜಯ ಮಠದ, ಪಿ.ಎಸ್.ಐ, ತನಿಖಾ ಸಹಾಯಕರಾದ ಯಲ್ಲಪ್ಪಾ ಕೊಚ್ಚರಗಿ, ಧರೆಪ್ಪಾ ಘನನ್ನವರ ಹಾಗೂ ಕೋರ್ಟ್ ಮಾನಿಟರಿಂಗ್ ಸೆಲ್ ಸಿಬ್ಬಂದಿಯಾದ ರಾಜು ಎಸ್. ಲಮಾಣಿ, ಪ್ರೋಸೆಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿ, ಆರೋಪಿಗೆ ಶಿಕ್ಷೆಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರೆಲ್ಲರ ಕಾರ್ಯವನ್ನು ಪೊಲೀಸ್ ಆಯುಕ್ತರು, ಬೆಳಗಾವಿ ನಗರ ಮತ್ತು ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ