Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಜ್ಯ ಸರಕಾರದ ಹುಚ್ಚುತನದ " ಮ್ಯಾಗ್ನೆಟ್ " ಶಾಲಾ ಯೋಜನೆ! ಜನಾಂದೋಲನದ ಹಾದಿಯಲ್ಲಿ " ನಮ್ಮೂರು ಶಾಲೆ ಉಳಿಸಿ "ಚಳವಳಿ!! ಬೆಳಗಾವಿಯಲ್ಲಿ ಭಾಷೆ ಮೀರಿದ ಹೋರಾಟ!!

ಬೆಳಗಾವಿ: ರಾಜ್ಯದ ಶಿಕ್ಷಣ ಸಚಿವರು ವಿಧಾನಸಭೆ ಒಳಗೂ ಹೊರಗೂ ಕೂಡಿಯೇ ಸರಕಾರಿ ಶಾಲೆಗಳ ಮುಚ್ಚುವ ಸಂಬಂಧ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಹಲವಾರು ಶಾಲೆಗಳನ್ನು ವಿಲೀನಗೊಳಿಸಿ ಒಂದೇ " ಮ್ಯಾಗ್ನೆಟ್ "ಸುಧಾರಿತ ಶಾಲೆಯನ್ನು ಆರಂಭಿಸುವ ಯೋಜನೆಯು ಈಗ ಬಡವರ, ಕಾರ್ಮಿಕರ, ರೈತರ ಮಕ್ಕಳ ಶಿಕ್ಷಣಕ್ಕೆ ಕುತ್ತು ತಂದಿದೆ.

ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ 40 ಸಾವಿರ
ಸರಕಾರಿಗಳು, ಬೆಳಗಾವಿ ಜಿಲ್ಲೆಯ 2 ಸಾವಿರ ಶಾಲೆಗಳು
ಮುಚ್ಚಳಿವೆ. ಮಕ್ಕಳು ಐದರಿಂದ 10,15 ಕಿ. ಮೀ. ದೂರದ ಶಾಲೆಗಳಿಗೆ ಹೋಗುವ ಅನಿವಾರ್ಯತೆ ಉಂಟಾಗಲಿದೆ.
ಹಳ್ಳಿ ಹಳ್ಳಿಗಳಲ್ಲಿ ಪೋಷಕರು, ಆಯಾ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಈ ಹೊಸ ಯೋಜನೆಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮುಚ್ಚಲಿರುವ ಶಾಲೆಗಳ ಪಟ್ಟಿಯನ್ನು ನಾನು
ತೆಗೆದುಕೊಂಡಿದ್ದೇನೆ. ಇದನ್ನು ನೋಡಿದರೆ ಸರಕಾರ
ಎಂಥಾ ಅನಾಹುತಕ್ಕೆ ಕೈ ಹಾಕಿದೆ ಎಂಬುದು
ಗೊತ್ತಾಗುತ್ತದೆ.
ಮೊದಲೇ ಮಕ್ಕಳನ್ನು ಶಾಲೆಗೆ ಮನೆಯ ಹತ್ತಿರದ
ಶಾಲೆಗೆ ಕಳಿಸಿ ದುಡಿಯಲು ಹೋಗುವ ಬಡ ವರ್ಗದವರಿಗೆ ದೂರದ ಶಾಲೆಗಳಿಗೆ ಕಳಿಸುವುದು ಮತ್ತು ಹೆಚ್ಚಿನ ಆರ್ಥಿಕ ಭಾರವನ್ನು ಹೊಟ್ಟುಕೊಳ್ಳುವದು ಅಸಾಧ್ಯದ ಮಾತು.

ಇಂದು ರವಿವಾರ ಬೆಳಗಾವಿಯ ಕಿತ್ತೂರು ಚನ್ನಮ್ಮ
ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಪೋಷಕರ, ಮಕ್ಕಳ, ಗ್ರಾಮ ಪಂಚಾಯತ ಅಧ್ಯಕ್ಷರ ಸಭೆಯನ್ನು
" ಎಡ್ಸೋ " ಸಂಸ್ಥೆಯ ಹೋರಾಟಗಾರ ಮಹಾಂತೇಶ
ಬೀಳೂರು ಮತ್ತು ಗೆಳೆಯರು ಆಯೋಜಿದ್ದರು. ನಾನು ಹಾಗೂ ಸಾಹಿತಿ ಡಿ. ಎಸ್. ಚೌಗುಲೆ ಅತಿಥಿಗಳಾಗಿ
ಹಾಜರಿದ್ದೆವು. ಬೆಳಗಾವಿ ತಾಲ್ಲೂಕಿನ ಅನೇಕ
ಗ್ರಾಮ ಪಂಚಾಯತಗಳ ಅಧ್ಯಕ್ಷರು, ಸದಸ್ಯರು
ಭಾಗವಹಿಸಿದ್ದ ಈ ಸಮಾವೇಶದಲ್ಲಿ " ಮ್ಯಾಗ್ನೆಟ್ " ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತ್ತು.

ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯತಗಳು ಈ ಯೋಜನೆಯ ವಿರುದ್ಧ ನಿರ್ಣಯ ಪಾಸು
ಮಾಡಲಿವೆ. ಕನ್ನಡ ಪರ ಸಂಘಟನೆಗಳು
ಶಿಕ್ಷಣದ ಇಲಾಖೆಯ ಮತ್ತು ಶಾಸಕರ ಮನೆಗಳ ಮುಂದೆ ಧರಣಿ ನಡೆಸಿ ಪ್ರತಿಭಟನೆ ನಡೆಸಲು ಸಭೆಯಲ್ಲಿ
ತೀರ್ಮಾನಿಸಲಾಯಿತು. ಕನ್ನಡ,ಮರಾಠಿ ಹಾಗೂ ಉರ್ದು ಭಾಷಿಕರು ಭಾಷಾ ಭೇದ ಬದಿಗಿಟ್ಟು ಹೋರಾಟಕ್ಕೆ
ಇಳಿಯಲು ಸಭೆಯು ನಿರ್ಧರಿಸಿತು.

-ಅಶೋಕ ಚಂದರಗಿ
ಅಧ್ಯಕ್ಷರು, ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿ