Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಯಣ್ಣ ಮೂರ್ತಿಯ ಮೇಲೆ ಬಿದ್ದ ಕಪ್ಪು ಕಲೆಯ ಬಗ್ಗೆ ಪೊಲೀಸರಿಂದ ಮಹತ್ವದ ಮಾಹಿತಿ ಬಹಿರಂಗ

ಬೆಳಗಾವಿ : ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಬಣ್ಣ ಎರಚಿ ಅಪಮಾನ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಇದೀಗ ಪೊಲೀಸರು ತೆರೆ ಎಳೆದಿದ್ದಾರೆ. ಒಟ್ಟಾರೆ ಇಡೀ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ.

ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ದಿನಾಂಕ. 19/02/2026 ರಂದು ತುರ್ತು ಕರೆಯೊಂದು ಬಂದಿದ್ದು, ಅದರಲ್ಲಿ ಯಾರೋ ಕಿಡಿಗೇಡಿಗಳು ಯಾವುದೋ ಕಪ್ಪು ಪದಾರ್ಥವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ಹಾಕಿರುತ್ತಾರೆಂದು ಮಾಹಿತಿ ಬಂದಾಗ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಬೆಳಗಾವಿ ಗ್ರಾಮೀಣ ಠಾಣೆ ಪ್ರ ಸಂ. 47/2026 ಕಲಂ. 192 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ಸ್ಥಳಕ್ಕೆ ಫಾರೆನ್ಸಿಕ್ ತಂಡದಿಂದಲೂ ಸಹ ಪರಿಶೀಲನೆ ಕೈಗೊಳ್ಳಲಾಯಿತು.

ಸಿಸಿಟಿವಿ ಫುಟೇಜ ಪರಿಶೀಲಿಸಲಾಗಿ ದಿನಾಂಕ. 18/02/2026 ರ ಸಾಯಂಕಾಲ ರಸ್ತೆಯ ಮೇಲೆ ಯಾವುದೇ ಕಲೆಗಳು ಕಂಡು ಬಂದಿರುವುದಿಲ್ಲ. ಆದರೆ ದಿನಾಂಕ. 19/02/2026 ರಂದು ಬೆಳಿಗ್ಗೆ 7.04 ಗಂಟೆಗೆ ಕಲೆಗಳು ಕಂಡು ಬಂದಿರುತ್ತವೆ. ದಿನಾಂಕ. 18/02/2026 ರ ಸಂಜೆಯಿಂದ ದಿನಾಂಕ. 19/02/2026 ರ ಬೆಳಿಗಿನ ವರೆಗೆ ಯಾವುದೇ ವ್ಯಕ್ತಿಯು ಮೂರ್ತಿಯ ಸಮೀಪ ಬಂದು ಯಾವುದೇ ವಸ್ತುವನ್ನು ಎರಚಿರುವ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದಿಲ್ಲ.

ಮೂರ್ತಿ, ಮೂರ್ತಿಯ ಹತ್ತಿರದ ರಸ್ತೆ ಹಾಗೂ ಮೂರ್ತಿಯ ಸ್ವಲ್ಪ ಮೇಲಿರುವ ಮರದ ಎಲೆಯ ಅಂಟು ಪದಾರ್ಥವನ್ನು ಸಂಗ್ರಹಿಸಿ ಆರ್‌ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ಸದರಿಯವರ ವರದಿಯಂತೆ ಮೂರೂ ಕಡೆಗೆ ಸಂಗ್ರಹಿಸಿದ ಸ್ಯಾಂಪಲ್‌ಗಳು ಮರದ ಅಂಟು ದ್ರಾವಣವಾಗಿರುತ್ತವೆ (Component Of Plant Resin) ಎಂದು ಆರ್‌ಎಫ್‌ಎಸ್‌ಎಲ್ ವರದಿ ನೀಡಿದೆ.

ಆದ್ದರಿಂದ ಮಸಿ ಎಂದು ಊಹಿಸಿದ ದ್ರವ ಪ್ರದಾರ್ಥವು ಮೂರ್ತಿಯ ಹತ್ತಿರವಿದ್ದ ಮರದ ಎಲೆಯ ಅಂಟು ಪದಾರ್ಥವಾಗಿರುವ ಬಗ್ಗೆ ಪರೀಕ್ಷೆಗಳಿಂದ ದೃಢಪಟ್ಟಿರುತ್ತದೆ. ಆದರೆ ಇದು ಯಾವುದೇ ಕಿಡಿಗೇಡಿಗಳ ಕೃತ್ಯವಾಗಿರುವುದಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ