Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

1 ರೂಪಾಯಿ ನೋಟು ತಂದ್ರೆ ಹೊಸ ಶೂ ಕೊಡ್ತೇವೆ ಅಂದ್ರು : ಕನಸು ಕಂಡು ಬಂದವರಿಗೆ ಸಿಕ್ಕಿದ್ದು ಲಾಠಿ ಏಟು…!

Advertisement
ಕೋಯಿಕ್ಕೋಡ್: ಕೇವಲ ಒಂದು ರೂಪಾಯಿಗೆ ಬ್ರಾಂಡೆಡ್ ಶೂ ಸಿಗುತ್ತದೆ ಎಂದರೆ ಯಾರಿಗೆ ತಾನೇ ಆಸೆ ಆಗಲ್ಲ ಹೇಳಿ? ಆದರೆ ಅದೇ ಆಸೆ ಇಂದು, ಭಾನುವಾರ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ. ವ್ಯಾಪಾರ ಹೆಚ್ಚಿಸಿಕೊಳ್ಳಲು ಅಂಗಡಿಯವರು ಮಾಡಿದ ಒಂದು ‘ಗಿಮಿಕ್’ ನಿಂದ ಜನರ ನಿಯಂತ್ರಣಕ್ಕೆ ಪೊಲೀಸರ ಲಾಠಿ ಚಾರ್ಜ್ ನಡೆಸಬೇಕಾಯಿತು. ಇದು ಮಾಲೀಕರ ಬಂಧನದಲ್ಲಿ ಅಂತ್ಯವಾಗಿದೆ.

ಇದು ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದಿದೆ. ಇಲ್ಲಿನ ‘ಟ್ರೆಂಡ್ ಫ್ಯಾಕ್ಟರಿ’ ಹೆಸರಿನ ಶೂ ಅಂಗಡಿ, ತನ್ನ ಉದ್ಘಾಟನೆ ದಿನದಂದು ಒಂದು ರೂಪಾಯಿಗೆ ಶೂ ನೀಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಿತ್ತು.

“ಯಾರು ಒಂದು ರೂಪಾಯಿಯ ನೋಟು ತರುತ್ತಾರೋ, ಅಂತಹ ಮೊದಲ 100 ಜನರಿಗೆ ಪ್ರೀಮಿಯಂ ಗುಣಮಟ್ಟದ ಶೂ ಕೇವಲ 1 ರೂಪಾಯಿಗೆ ಸಿಗಲಿದೆ” ಎಂಬ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಆಫರ್‌ ಪಡೆಯಲು ಸಾವಿರಾರು ಜನ, ಅದರಲ್ಲೂ ಹೆಚ್ಚಾಗಿ ಯುವಕ-ಯುವತಿಯರು, ಬೆಳಗಿನ ಜಾವ 2 ಗಂಟೆಯಿಂದಲೇ ಅಂಗಡಿ ಮುಂದೆ ಬಂದು ಕಾಯುತ್ತಿದ್ದರು. ಬ್ರಾಡೆಂಡ್‌ ಶೂ ಸಿಗುತ್ತದೆಯೆಂದು ದೂರದ ಊರುಗಳಿಂದಲೂ ಜನ ಲಗ್ಗೆ ಇಟ್ಟಿದ್ದರು. ವಯನಾಡಿನಿಂದ ಬಂದಿದ್ದ ಪುಟ್ಟ ಬಾಲಕನೊಬ್ಬ, “ನಾನು ರಾತ್ರಿ 2:30ಕ್ಕೇ ಇಲ್ಲಿಗೆ ಬಂದೆ, ಆದರೆ ಆಗಲೇ ಇಲ್ಲಿ ಸಾವಿರಾರು ಜನ ಇದ್ದರು!” ಎಂದು ಆಶ್ಚರ್ಯದಿಂದ ಹೇಳಿಕೊಂಡಿದ್ದಾನೆ.

ಟ್ರಾಫಿಕ್ ಜಾಮ್, ನೂಕುನುಗ್ಗಲು ಮತ್ತು ಗದ್ದಲ
ಸೂರ್ಯ ಉದಯಿಸುವಷ್ಟರಲ್ಲಿಯೇ ಪರಿಸ್ಥಿತಿ ಕೈಮೀರಿತ್ತು. ಬೆಳಿಗ್ಗೆ 10 ಗಂಟೆಗೆ ಮಳಿಗೆ ತೆರೆಯುವುದಾಗಿ ಹೇಳಿದ್ದರೂ ಬೆಳಗಿನ ಜಾವ 2 ಗಂಟೆಗೇ ಅಂಗಡಿಯ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲು ಇತ್ತು. ಜನಸಂದಣಿ ರಸ್ತೆಗೆ ನುಗ್ಗಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಕೇವಲ 1 ರೂಪಾಯಿಗೆ ಶೂ ಪಡೆಯಲೇಬೇಕು ಎಂಬ ಹಠಕ್ಕೆ ಬಿದ್ದ ಜನರು ಒಬ್ಬರನ್ನೊಬ್ಬರು ತಳ್ಳಾಡಲು ಶುರು ಮಾಡಿದರು. ಇದು ಸಣ್ಣ ಮಟ್ಟದ ಕಾಲ್ತುಳಿತದ ಸನ್ನಿವೇಶಕ್ಕೆ ಕಾರಣವಾಯಿತು.

ಹದಗೆಟ್ಟ ಪರಿಸ್ಥಿತಿ-ಪೊಲೀಸರ ಮಧ್ಯಪ್ರವೇಶ
ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದನ್ನು ಕಂಡ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರು. ಜನರನ್ನು ಚದುರಿಸಲು ಪ್ರಯತ್ನಿಸಿದರೂ ಯಾರೂ ಜಪ್ಪಯ್ಯ ಅನ್ನಲಿಲ್ಲ. ಕೊನೆಗೆ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಂಭವನೀಯ ಅನಾಹುತ ತಡೆಯಲು ಪೊಲೀಸರು ಸಣ್ಣ ಮಟ್ಟದ ಲಾಠಿ ಪ್ರಹಾರ ನಡೆಸಬೇಕಾಯಿತು. ಶೂ ಆಸೆಗಾಗಿ ಬಂದವರು ಪೊಲೀಸರ ಏಟಿನ ರುಚಿ ನೋಡಬೇಕಾಯಿತು.
ಮಾಲೀಕರು ಈಗ ಪೊಲೀಸ್ ವಶದಲ್ಲಿ
ಯಾವುದೇ ಪೂರ್ವ ತಯಾರಿ ಇಲ್ಲದೆ, ಇಷ್ಟೊಂದು ದೊಡ್ಡ ಮಟ್ಟದ ಜನ ಸೇರುವ ಮುನ್ಸೂಚನೆ ಇದ್ದರೂ ಪೊಲೀಸರಿಗೆ ಮಾಹಿತಿ ನೀಡದೆ ಪ್ರಚಾರ ನಡೆಸಿದ್ದಕ್ಕಾಗಿ ಅಂಗಡಿಯ ಮಾಲೀಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ತುಂಬಾ ಆಕರ್ಷಕವಾಗಿ ಕಾಣುವ ಆಫರ್‌ಗಳು ಕೆಲವೊಮ್ಮೆ ಸಂಭ್ರಮಕ್ಕಿಂತ ಹೆಚ್ಚಾಗಿ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇರುತ್ತದೆ” ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೇಂದ್ರ ಸರಕಾರದಿಂದ ವಿಶೇಷ ಯೋಜನೆ ಮತ್ತು ಅನುದಾನ ಒದಗಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ ಕಿರಣ್ ಜಾಧವ ಆಟೋನಗರ, ರಾಮತೀರ್ಥನಗರ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ ನೀಡಿSSLC ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ : ಶಿಕ್ಷಕನಿಗೆ ಥಳಿತವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನಇನ್ಮುಂದೆ ವೈದ್ಯರ ಚೀಟಿ ಇಲ್ಲದೇ ಕೆಮ್ಮಿನ ಔಷಧ ಮಾರಾಟ ನಿಷೇಧಮಾರಿಹಾಳ ಗ್ರಾಮದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ; ಉಚಿತ ನೇತ್ರ ತಪಾಸಣೆಯಿಂದ ಗ್ರಾಮಸ್ಥರಿಗೆ ಪ್ರಯೋಜನಟೆಲಿಗ್ರಾಮ್ ನಿರ್ಬಂಧಿಸಿದ ಕೇಂದ್ರ ಸರ್ಕಾರಶರಣರು ಜನಪರವಾದ ಸಾಹಿತ್ಯಕ್ಕೆ ಒತ್ತು ನೀಡಿದರು: ಡಾ.ವಿದ್ಯಾವತಿ ಕುಂದರಗಿ* *ಮಹಾಸಭೆಯಲ್ಲಿ ಅಮವಾಸ್ಯೆ ಅನುಭಾವ ಗೋಷ್ಠಿರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಹಣದ ತೊಂದರೆಯುದ್ದರೂ ಪರರ ಹಣ ಬೇಡವೆಂದು ಚಿಕ್ಕೋಡಿಯಲ್ಲಿ ಪ್ರಾಮಾಣಿಕತೆ ಮೆರೆದ ಕುಂದಾಪುರದ ವ್ಯಕ್ತಿ..!ಐಎಎಸ್‌ ಅಧಿಕಾರಿಗಳೂ ಸೇರಿದಂತೆ ಎಲ್ಲರ ಮೇಲೂ ‘ಎಐ’ ಕಣ್ಗಾವಲು | ಕರ್ತವ್ಯದ ಸ್ಥಳದ ಮಾಹಿತಿ ಸರ್ಕಾರಕ್ಕೆ ಲಭ್ಯ