Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಧೂಮ್..ಧೂಮ್.. ಯಮಕನಮರಡಿಯಲ್ಲಿ 1.2 ಕೆಜಿ ಚಿನ್ನ ಕಳ್ಳತನ ಮನೆಗಳ್ಳನ ಸೆರೆ

ಬೆಳಗಾವಿ: ಅದ್ದೂರಿ ಜೀವನ ನಡೆಸಲು ಹಣ ಮಾಡುವ ಉದ್ದೇಶದಿಂದ ಹಿಂದಿ ಭಾಷೆಯ ಧೂಮ್ ಚಲನಚಿತ್ರದ ಮಾದರಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಮನೆಗಳ್ಳತನ ಮಾಡುತ್ತಿದ್ದವನನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ನಗರದಲ್ಲಿ ಎಸ್‌ಪಿ ಡಾ.ಭೀಮಾಶಂಕರ ಗುಳೇದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಗಾವಿ ಮಹಾಂತೇಶ ನಗರದಲ್ಲಿ ವಾಸವಿರುವ ಸುರೇಶ ಮಾರುತಿ ನಾಯಿಕ ಬಂಧಿತ. ಆತನಿಂದ 1,280 ಗ್ರಾಂ ಚಿನ್ನಾಭರಣ, 8.5 ಕೆ.ಜಿ. ಬೆಳ್ಳಿ ಆಭರಣ, ರೂ.1.25 ಲಕ್ಷ ನಗದು, ಒಂದು ಥಾರ್ ವಾಹನ ಮತ್ತು ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಯಮಕನಮರಡಿಯಲ್ಲಿ ಅ.22 ರಂದು ವಿಶ್ವನಾಥ ದುಗ್ಗಾಣಿ ಅವರ ಮನೆಯಲ್ಲಿ 1,280 ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ ಆಭರಣ, ರೂ. 1.25 ಲಕ್ಷ ನಗದು ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆಗೆ ಯಮಕನಮರಡಿ ಠಾಣೆ ಇನ್‌ಸ್ಪೆಕ್ಟ‌ರ್ ಜಾವೀದ್‌ ಮುಶಾಪುರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಮಹತ್ವದ ಸುಳಿವು ಆಧರಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿದ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.
ಈತ ಧೂಮ್ ಸಿನೆಮಾ ಮಾದರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಕದ್ದ ಹಣದಲ್ಲಿ ದುಬಾರಿ ಬೆಲೆಯ ಥಾರ್ ವಾಹನ, ಎರಡು ಬೈಕ್‌ ಖರೀದಿಸಿದ್ದಾನೆ. ಐಷಾರಾಮಿ ಜೀವನ ಸಾಗಿಸುವುದು ಈತನ ದಿನಚರಿಯಾಗಿತ್ತು.

ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುರೇಶ ಮೇಲೆ 21 ಪ್ರಕರಣಗಳಿವೆ. ಶ್ರೀಮಂತರು ವಾಸವಿರುವ, ಅದರಲ್ಲಿಯೂ ಮನೆಯಲ್ಲಿ ಯಾರೂ ಇಲ್ಲದಿರುವುದು, ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿ ಈತ ಕೃತ್ಯ ಎಸಗುತ್ತಿದ್ದ ಎಂದು ತಿಳಿಸಿದರು.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಶ್ವನಾಥ ದುಗ್ಗಾಣಿ ಅವರ ಮನೆ ಮಾತ್ರವಲ್ಲ. ಯಮಕನಮರಡಿ, ಮಣಗುತ್ತಿ, ಸಂಕೇಶ್ವರ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಒಟ್ಟು ನಾಲ್ಕು ಮನೆಕಳ್ಳತನ ಪ್ರಕರಣ ಭೇದಿಸಲಾಗಿದೆ ಎಂದು ವಿವರಿಸಿದರು.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಹುಕೋಟಿ ವಂಚನೆ : ನೀಲಣ್ಣವರ, ಆಪ್ತರ ನಿವಾಸಗಳ ಮೇಲೆ ಇಡಿ ದಾಳಿSIR : ಗಣತಿ ನಮೂನೆ ಸಲ್ಲಿಸಲು 17 ರವರೆಗೆ ಅವಕಾಶಈ ನಿಗೂಢ ಬಾವಿಯಲ್ಲಿ ಮತ್ತೆ ಅಚ್ಚರಿ ; ಸಮುದ್ರದ ಅಲೆಯಂತೆ ತನ್ನಷ್ಟಕ್ಕೆ ತಾನೇ ಏರಿಳಿಯುವ ನೀರು..!ವಿಭಾಗೀಯ ಕಚೇರಿಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕ್ರಮ ಕೈಕೊಂಡವರು ಅರಸುಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!ಕರ್ನಾಟಕದ 4 ಜಿಲ್ಲೆಗಳಲ್ಲಿ ಅತಿ ಭಾರಿ ಮಳೆ ಮುನ್ಸೂಚನೆ ; ಆರೆಂಜ್‌ ಅಲರ್ಟ್‌ ಘೋಷಣೆಪುತ್ರಿಯರಿಗಾಗಿ ಜೀವನ ಮುಡಿಪಾಗಿಟ್ಟಿದ್ದ ತಂದೆ ವೃದ್ಧಾಶ್ರಮದಲ್ಲಿ ನಿಧನ ; ₹5100 ಕಳುಹಿಸಿ ವಿಡಿಯೊ ಕಾಲ್‌ನಲ್ಲಿ ಕೊನೆ ವಿದಾಯ ಹೇಳಿದ ಪುತ್ರಿಯರು...!ಯುವಜನತೆ  ಪಠ್ಯ ಮತ್ತು ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಿ : ಕುಲಪತಿ ತ್ಯಾಗರಾಜಗುರಿ, ಶಿಸ್ತು ಮತ್ತು ಸಾಧನೆಯಿಂದ ಯಶಸ್ಸು ಸಾಧ್ಯ: ಡಾ. ಸಿದ್ದು ಹುಲ್ಲೊಳ್ಳಿ  ಲಕ್ಷ್ಮೀ ಇದ್ದರೆ DK ಸಂಪುಟಕ್ಕೆ ಶೋಭೆ:  ಹೆಬ್ಬಾಳ್ಕರ್ ಯಾಕೆ ಸಂಪುಟಕ್ಕೆ ಅತ್ಯಂತ ಅವಶ್ಯಕ ಗೊತ್ತೇ ? ಬೆಳಗಾವಿಗೆ ಅಭಿವೃದ್ಧಿಯ ಹೊಳೆಯನ್ನೇ ಹರಿಸಿದ್ದ ಮಹಾನಾಯಕಿ