Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಗೋವಾ ಸಿಎಂ ಸಾವಂತ ಟ್ವೀಟ್ ಕಿತಾಪತಿ : ಮಹದಾಯಿ ಪ್ರದೇಶದಲ್ಲಿ 'ಪ್ರವಾಹ': ರಾಜ್ಯ ಸರಕಾರ ಮೌನ

ಬೆಳಗಾವಿ:ಮಹಾದಾಯಿ ನದಿ ನೀರಿನ‌ ಹಂಚಿಕೆ ವಿಷಯದಲ್ಲಿ ಟ್ವೀಟ್ ಮೂಲಕ‌ ಸುಖಾಸುಮ್ಮನೆ ಕಿತಾಪತಿ ಎಬ್ಬಿಸಿರುವ ಗೋವಾ ಸಿಎಂ ಸಾವಂತ್ ಅವರಿಗೆ ತಿರುಗೇಟು ನೀಡುವಲ್ಲಿ ರಾಜ್ಯ ಸರಕಾರ ಕಳೆದ 72 ಗಂಟೆಯಿಂದ ಮೌನ ವಹಿಸಿರುವುದು ಗಮನ ಸೆಳೆದಿದೆ.

ಮಹಾದಾಯಿ ಟ್ರಿಬ್ಯೂನಲ್ ಶಿಫಾರಸ್ಸಿನ‌ ಮೇರೆಗೆ ಕೇಂದ್ರದಿಂದ ಸೃಜಿಸಲಾದ 'ಪ್ರವಾಹ' (ಪ್ರೊಗ್ರೆಸಿವ್ ರಿವರ್ ಅಥಾರಿಟಿ ಫಾರ್ ವೆಲ್ಫೇರ್ ಆ್ಯಂಡ್ ಹಾರ್ಮನಿ)ಅಧಿಕಾರಿಗಳ ತಂಡ ಇಂದು ಗೋವಾ ಕರ್ನಾಟಕ ಗಡಿಯ ಕಣಕುಂಬಿಯಲ್ಲಿ ಸಭೆ ನಡೆಸಿತು.
ಪ್ರವಾಹವನ್ನು ನೀರಿನ‌ ಯೋಜನಾ ಪ್ರದೇಶಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸಲು ಸಮಿತಿ ರಚಿಸಿರುವುದು ಗಮನಾರ್ಹ. ಆದರೆ ಗೋವಾ ಸಿಎಂ ಪ್ರಮೋದ ಸಾವಂತ್ ಟ್ವೀಟ್ ಮಾಡಿ 'ಪ್ರವಾಹ'ವನ್ನು ಪರಿವೀಕ್ಷಣೆಗೆ ಕರೆಸಿದ್ದಾಗಲೂ ಕರ್ನಾಟಕ ಸರಕಾರ ನಿರ್ಲಕ್ಷ್ಯ ವಹಿಸಿದೆ. ನಿಯಮಿತ ಭೇಟಿಗಾಗಿ ಪ್ರವಾಹ ಆಗಮಿಸಿದೆ ಎಂದು ಗೋವಾ ಹೇಳಿಕೊಳ್ಳುತ್ತಿದ್ದರೂ ಅದರ ಹುನ್ನಾರ ಬೇರೆಯದೇ ಆಗದೆ. ಗೋವಾ ಸಿಎಂ ಟ್ವೀಟ್ ಮಾಡಿ 72 ಗಂಟೆ ಕಳೆದರೂ ಕರ್ನಾಟಕ‌ಮಾತ್ರ ಈ ವಿಷಯದಲ್ಲಿ ಗಮನ ಹರಿಸಿಲ್ಲ. ಸರಕಾರದ ಪರ ಹಿರಿಯ ಐಎಎಸ್ ಅಧಿಕಾರಿ ರಾಕೇಶ ಸಿಂಗ್ ಅವರೂ ಸಹ ಭಾಗವಹಿಸಿಲ್ಲ. ಕರ್ನಾಟಕ-ಗೋವಾ ನಡುವಿನ‌ ಮಹದಾಯಿ ಯೋಜನಾ ಪ್ರದೇಶದಲ್ಲಿ ಸಾಮರಸ್ಯ ಮೂಡಿಸುವ ಪ್ರವಾಹ ಆಗಮಿಸಿ ಏನು ಪ್ರಯೋಜನ‌ಮಾಡಿ ಹೋಗಲಿದೆ ತಿಳಿದಿಲ್ಲ.
ಜಲಶಕ್ತಿ ಮಂತ್ರಾಲಯದ 'ಪ್ರವಾಹ' ಸಮಿತಿಯ ಚೇರಮನ್ ಪಿ. ಎಂ. ಸ್ಕಾಟ್, ಸದಸ್ಯರಾದ ಮುಖ್ಯ ಅಭಿಯಂತರ ವಿರೇಂದ್ರ ಶರ್ಮಾ, ನವದೆಹಲಿಯ ಹೈಡ್ರೋಲಾಜಿ ವಿಭಾಗದ ಮುಖ್ಯ ಅಭಿಯಂತರ ಮನೋಜ್ ತಿವಾರಿ, ಮಿಲಿಂದ‌ ನಾಯಕ, ಸುಭಾಶಚಂದ್ರ ಸೇರಿ ಇತರ ಹಿರಿಯ ಅಧಿಕಾರಿಗಳು ಸಾಧಕ ಬಾಧಕಗಳ ಚರ್ಚೆ ಯೋಜನಾ ಪ್ರದೇಶದ ಕಣಕುಂಬಿ ಬಳಿ ನಡೆಸಿದರು.
ಕರ್ನಾಟಕ ಸರಕಾರದ ಮೌನ, ಗೋವಾ ಸಿಎಂ‌ ಕಿತಾಪತಿ, ನಿಯಮಿತದ ಹೆಸರಿನಲ್ಲಿ ಆಗಮಿಸಿದ ಪ್ರವಾಹ ಸಮಿತಿಯ ಪರಿವೀಕ್ಷಣೆಗೆ ಕರ್ಬಾಟಕದ ಕನ್ನಡ ಹಾಗೂ ಸಾಮಾಜಿಕ ಸಂಘಟನೆಗಳ ಆಕ್ಷೇಪ ವ್ಯಕ್ತಪಡಿಸಿವೆ. ಹಿರಿಯ ಹೋರಾಟಗಾರ ಅಶೋಕ ಚಂದರಗಿ ಕರ್ನಾಟಕ ಸರಕಾರದ ಮೌನ ಹಾಗೂ ಗೋವಾ ಸಿಎಂ ಸಾವಂತ ಅವರ ತರಾತುರಿಯ ಉದ್ಧಟತನದ ಬಗ್ಗೆ ಅಸಹನೆ ವ್ಯಕ್ತಪಡಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಕಲಗಿ ಪಟ್ಟಣದಲ್ಲಿ ವಿಜಯ ದಶಮಿ ನಿಮಿತ್ತ ಶ್ರೀ ಮಹಾಲಕ್ಷ್ಮೀ ದೇವಿ ಅಗ್ನಿ ಹಾಯುವ ಕಾರ್ಯಕ್ರಮ.ಮಾರ್ಕಂಡೇಯ ನದಿಯಲ್ಲಿ  ಮರ್ಡರ್..?ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆRCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರು