Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

1 ಬಿಲಿಯನ್ ಡಾಲರ್ ಕೊಡಿ, ಟರ್ಕಿ ಸುಂದರಿ ಜೊತೆ ನನಗೆ ಮದುವೆ ಮಾಡಿ : ಟರ್ಕಿಗೆ ಉಗಾಂಡಾ ಸೇನಾಪತಿಯ ವಿಚಿತ್ರ ಷರತ್ತು…!

ಕಂಪಾಲ: ಉಗಾಂಡಾದ ಅಧ್ಯಕ್ಷ ಯೋವೇರಿ ಮುಸೆವೆನಿ ಅವರ ಪುತ್ರ ಹಾಗೂ ದೇಶದ ಸೇನಾ ಮುಖ್ಯಸ್ಥ (Chief of Defence Forces) ಮುಹೂಜಿ ಕೈನೆರುಗಾಬಾ ಅವರು ಟರ್ಕಿ ದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅತ್ಯಂತ ವಿಲಕ್ಷಣ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಟರ್ಕಿ ಸರ್ಕಾರವು ಉಗಾಂಡಾಗೆ 1 ಬಿಲಿಯನ್ ಡಾಲರ್ (ಸುಮಾರು 8,300 ಕೋಟಿ ರೂ.) ಪರಿಹಾರ ನೀಡಬೇಕು ಮತ್ತು ಆ ದೇಶದ “ಅತ್ಯಂತ ಸುಂದರ ಮಹಿಳೆ”ಯನ್ನು ತನಗೆ ಮದುವೆ ಮಾಡಿಕೊಡಬೇಕು ಎಂದು ವಿಲಕ್ಷಣ ಬೇಡಿಕೆಯನ್ನು ಮುಂದಿಟ್ಟಿರುವುದು ಈಗ ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಟ್ವಿಟರ್‌ನಲ್ಲಿ ಎಚ್ಚರಿಕೆ: 30 ದಿನಗಳ ಗಡುವು
ಸಾಮಾಜಿಕ ಜಾಲತಾಣ ‘X’ ನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡುವ ಸೇನಾ ಮುಖ್ಯಸ್ಥ ಕೈನೆರುಗಾಬಾ, ತನ್ನ ಬೇಡಿಕೆಗಳು ಈಡೇರದಿದ್ದರೆ ಮುಂದಿನ 30 ದಿನಗಳಲ್ಲಿ ಕಂಪಾಲಾದಲ್ಲಿರುವ ಟರ್ಕಿ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. “ಇದು ಕೇವಲ ಸೋಶಿಯಲ್ ಮೀಡಿಯಾ ಡ್ರಾಮಾ ಅಲ್ಲ, ನಾವು ಗಂಭೀರವಾಗಿದ್ದೇವೆ. ಅವರು ನಮ್ಮ ರಾಯಭಾರ ಕಚೇರಿಯನ್ನು ಮುಚ್ಚಿದರೂ ನಮಗೆ ಅಭ್ಯಂತರವಿಲ್ಲ,” ಎಂದು ಹೇಳಿದ್ದಾರೆ.

ಏನಿದು ವಿವಾದ?
ಸೋಮಾಲಿಯಾದಲ್ಲಿನ ಭದ್ರತಾ ಹಿತಾಸಕ್ತಿಗಳ ವಿಚಾರವಾಗಿ ಕೈನೆರುಗಾಬಾ ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮಾಲಿಯಾದ ರಾಜಧಾನಿ ಮೊಗಾದಿಶುದಲ್ಲಿರುವ ಬಂದರುಗಳು ಮತ್ತು ವಿಮಾನ ನಿಲ್ದಾಣಗಳಂತಹ ಮೂಲಸೌಕರ್ಯ ಯೋಜನೆಗಳಿಂದ ಟರ್ಕಿ ದೊಡ್ಡ ಮಟ್ಟದ ಲಾಭ ಗಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಆಫ್ರಿಕನ್ ಯೂನಿಯನ್ ಕಾರ್ಯಾಚರಣೆಯ ಭಾಗವಾಗಿ ಉಗಾಂಡಾ ಸೈನಿಕರು ಸೋಮಾಲಿಯಾದಲ್ಲಿ ಅಲ್-ಶಬಾಬ್ ಉಗ್ರರ ವಿರುದ್ಧ ಹೋರಾಡುತ್ತಾ ಭದ್ರತೆಯನ್ನು ಕಾಪಾಡುತ್ತಿದ್ದಾರೆ.
“ಭದ್ರತೆಯ ಲಾಭಾಂಶವಾಗಿ” (Security Dividend) ಟರ್ಕಿ ನಮಗೆ 1 ಬಿಲಿಯನ್ ಡಾಲರ್ ನೀಡಬೇಕು. ಟರ್ಕಿ ನಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

“ಸುಂದರಿ”ಯರ ಮೇಲೆ ಕಣ್ಣು ಮತ್ತು ಇಸ್ರೇಲ್‌ಗೆ ಬೆಂಬಲ
ಆರ್ಥಿಕ ಬೇಡಿಕೆಯ ಜೊತೆಗೆ, ಟರ್ಕಿಯ ಅತ್ಯಂತ ಸುಂದರ ಮಹಿಳೆಯನ್ನು ತಮಗೆ ಹಸ್ತಾಂತರಿಸಬೇಕು, ಆಕೆಯನ್ನು ತಾನು ಮದುವೆಯಾಗುವುದಾಗಿ ಕೈನೆರುಗಾಬಾ ಹೇಳಿರುವುದು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ ಉಗಾಂಡಾದ ಪ್ರಜೆಗಳು ಟರ್ಕಿಗೆ ಪ್ರಯಾಣಿಸದಂತೆ ಅವರು ಸಲಹೆ ನೀಡಿದ್ದಾರೆ.
ಇದೇ ವೇಳೆ ಇಸ್ರೇಲ್ ಪರ ಬ್ಯಾಟಿಂಗ್ ಮಾಡಿರುವ ಅವರು, “ಯೇಸುಕ್ರಿಸ್ತನ ಪವಿತ್ರ ಭೂಮಿಯಾದ ಇಸ್ರೇಲ್ ಅನ್ನು ರಕ್ಷಿಸಲು ನನ್ನ ನೇತೃತ್ವದಲ್ಲಿ 1 ಲಕ್ಷ ಉಗಾಂಡಾ ಸೈನಿಕರನ್ನು ಕಳುಹಿಸಲು ಸಿದ್ಧನಿದ್ದೇನೆ,” ಎಂದು ಹೇಳಿದ್ದಾರೆ.

ವಿವಾದ ಇದೇ ಮೊದಲಲ್ಲ...
ಕೈನೆರುಗಾಬಾ ಈ ರೀತಿಯ ವಿಲಕ್ಷಣ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. 2022ರ ಅಕ್ಟೋಬರ್‌ನಲ್ಲಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಮದುವೆಯಾಗಲು ತಾನು 100 ‘ಅಂಕೋಲ್’ ತಳಿಯ ಹಸುಗಳನ್ನು ನೀಡುವುದಾಗಿ ಘೋಷಿಸಿ ವಿವಾದ ಸೃಷ್ಟಿಸಿದ್ದರು.
ಸದ್ಯ ಉಗಾಂಡಾ ಸೇನಾ ಮುಖ್ಯಸ್ಥನ ಈ ಹೇಳಿಕೆಗಳಿಂದಾಗಿ ಟರ್ಕಿ ಮತ್ತು ಉಗಾಂಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿ ಪೊಲೀಸರ ಬೇಜವಾಬ್ದಾರಿಗೆ ಮೊಮ್ಮಗನಿಂದಲೇ ಕೊಲೆಯಾದ ಅಜ್ಜಿ..!ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಭಾರಿ ಬೆಂಕಿ ಅವಘಡ; 68 ಪ್ರಯಾಣಿಕರ ಸ್ಥಳಾಂತರವಿದೇಶಕ್ಕೆ ತೆಗೆದುಕೊಂಡು ಹೋಗಿದ್ದ ಸಾವಿರ ವರ್ಷಗಳ ಹಿಂದಿನ ತಾಮ್ರ ಶಾಸನಕ್ಕೆ ಕೊನೆಗೂ ಭಾರತಕ್ಕೆ ವಾಪಸ್..!ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ಮೂತ್ರ ವಿಸರ್ಜನೆಗೆ ತೆರಳಿದ್ದ ಗೋವಾ ಕಾಂಗ್ರೆಸ್‌ ಅಭ್ಯರ್ಥಿಗೆ  ಕಚ್ಚಿದ ಹಾವು; ಚುನಾವಣಾ ಪ್ರಚಾರದ ಮಧ್ಯೆ ಕೇತನ್ ಭಾಟಿಕರ್ ಸಾವು..ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು