Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಾಯುಪಡೆ ಸಿಬ್ಬಂದಿ ಪತ್ನಿಗೆ ಮತ್ತು ಬರಿಸುವ ಪಾನೀಯ ನೀಡಿ ಅತ್ಯಾಚಾರ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರಕ್ಕೆ ಯತ್ನ; ಇಬ್ಬರ ಬಂಧನ

ನಾಗಪುರ: ವಾಯುಪಡೆ (ಏರ್‌ಫೋರ್ಸ್) ಸಿಬ್ಬಂದಿಯೊಬ್ಬರ ಪತ್ನಿಗೆ ಆಕೆಯ ಹಳೆಯ ಸಹಪಾಠಿ ಮತ್ತು ಆತನ ಕಡೆಯವರು ಸೇರಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿದ್ದಲ್ಲದೆ, ಬ್ಲ್ಯಾಕ್‌ಮೇಲ್, ಮಾಟಮಂತ್ರ ಹಾಗೂ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿರುವ ಅತ್ಯಂತ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪುರ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಯಾಜ್ ಮದಾರೆ (26) ಮತ್ತು ಆತನ ಸಹಚರ ಅಮೀನ್ ಶೇಖ್ ಎಂದು ಗುರುತಿಸಲಾಗಿದೆ. ಈ ದಂದೆಯಲ್ಲಿ ಭಾಗಿಯಾಗಿರುವ ಮಧ್ಯಪ್ರದೇಶದ ತಾಮಿಯಾ ಗ್ರಾಮದ ಮೌಲಾನಾ (ಧಾರ್ಮಿಕ ಗುರು) ಪತ್ತೆಗಾಗಿ ಪೊಲೀಸರ ವಿಶೇಷ ತಂಡವೊಂದು ನೆರೆರಾಜ್ಯಕ್ಕೆ ಧಾವಿಸಿದೆ.
ಮಾದಕ ಪಾನೀಯ, ಅತ್ಯಾಚಾರ ಮತ್ತು ಬ್ಲ್ಯಾಕ್‌ಮೇಲ್
ಪೊಲೀಸರು ದಾಖಲಿಸಿಕೊಂಡಿರುವ ಪ್ರಥಮ ಮಾಹಿತಿ ವರದಿ (FIR) ಪ್ರಕಾರ, ಫೆಬ್ರವರಿ 8, 2025 ರಂದು ಹೋಟೆಲೊಂದರಲ್ಲಿ ನಡೆದ ಭೇಟಿಯ ಸಂದರ್ಭದಲ್ಲಿ, ಪ್ರಮುಖ ಆರೋಪಿ ಅಯಾಜ್ ಮದಾರೆ 24 ವರ್ಷದ ಸಂತ್ರಸ್ತ ಮಹಿಳೆಯ ಪಾನೀಯದಲ್ಲಿ ಮಾದಕ ದ್ರವ್ಯ ಬೆರೆಸಿದ್ದ. ಮಹಿಳೆ ಪ್ರಜ್ಞೆ ತಪ್ಪಿದಾಗ ಆಕೆಯ ಆಕ್ಷೇಪಾರ್ಹ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು. ನಂತರ ಆಕೆಗೆ ಪ್ರಜ್ಞೆ ಬಂದಾಗ, ಈ ದೃಶ್ಯಗಳನ್ನು ಆಕೆಯ ಪತಿಗೆ ಕಳುಹಿಸುವುದಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಆರೋಪಿಯು ಮಹಿಳೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಸುಮಾರು 4 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ  
ಈ ಪ್ರಕರಣದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಪ್ರಮುಖ ಸಾಕ್ಷಿಯಾಗಿದೆ. ಆ ವಿಡಿಯೋದಲ್ಲಿ 24 ವರ್ಷದ ಮಹಿಳೆ ತೀವ್ರವಾಗಿ ಕಣ್ಣೀರು ಹಾಕುತ್ತಾ, ತನ್ನನ್ನು ಬಿಟ್ಟುಬಿಡುವಂತೆ (“ಛೋಡೋ ಮುಝೆ”) ಅಯಾಜ್ ಮದಾರೆ ಬಳಿ ಕೈಮುಗಿದು ಬೇಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆರೋಪಿ ಅಯಾಜ್ ಆಕೆಯ ಕೈಗಳನ್ನು ಬಲವಂತವಾಗಿ ಹಿಡಿದುಕೊಂಡು, ಕೆಲವು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ ಆಕೆಯ ಮುಖದ ಮೇಲೆ ಪದೇ ಪದೇ ಉಸಿರು ಬಿಡುತ್ತಿರುವುದು (ಮಂತ್ರಿಸುವುದು) ದಾಖಲಾಗಿದೆ. ಮಹಿಳೆ ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ತೀವ್ರವಾಗಿ ಹೋರಾಡುತ್ತಿರುವುದು ವಿಡಿಯೋದಲ್ಲಿದೆ. ಈ ಘಟನೆಯ ನಂತರ ತನ್ನನ್ನು ಮತಾಂತರಗೊಳಿಸಲಾಗಿದೆ ಎಂದು ಘೋಷಿಸಿ, ಮತ್ತೊಮ್ಮೆ ಅತ್ಯಾಚಾರಕ್ಕೆ ಯತ್ನಿಸಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ನೀಡಿರುವ ದೂರಿನ ಪ್ರಕಾರ, ಅಯಾಜ್ ಪದೇ ಪದೇ ಪ್ಲಾಸ್ಟಿಕ್ ಬಾಟಲಿಯಲ್ಲಿ ಯಾವುದೋ ದ್ರವವನ್ನು ತಂದು ಆಕೆಗೆ ಬಲವಂತವಾಗಿ ಕುಡಿಸುತ್ತಿದ್ದ. ನಂತರ ಉರ್ದು ಭಾಷೆಯಲ್ಲಿ ಏನನ್ನೋ ಪಠಿಸಿ, ಆಕೆಯ ಮುಖಕ್ಕೆ ಊದುತ್ತಿದ್ದ. ಇದು “ವಶೀಕರಣ ಮತ್ತು ಮಾಟಮಂತ್ರ” ಎಂದು ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ. ವೈರಲ್ ಆಗಿರುವ ವಿಡಿಯೋದಲ್ಲಿ ಈ ಮಾಟಮಂತ್ರ ಹಾಗೂ ವಶೀಕರಣದ ಕ್ರಿಯೆಗಳು ಪತ್ತೆಯಾಗಿವೆ.

ಬಲವಂತದಿಂದ ಮತಾಂತರಕ್ಕೆ ಯತ್ನ 
ದೂರಿನಲ್ಲಿ ಉಲ್ಲೇಖಿಸಲಾದ ಮತ್ತೊಂದು ಘಟನೆಯಲ್ಲಿ, ಮೇ 31 ರಂದು ಅಯಾಜ್ ಮತ್ತು ಆತನ ಸಹಚರ ಸೇರಿ ಮಹಿಳೆಯನ್ನು ಬಲವಂತವಾಗಿ ಕಲ್ಮೇಶ್ವರ ಎಂಬ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ತಾಮಿಯಾ ಗ್ರಾಮದ ಹಜರತ್ ಮೌಲಾನಾ ಎಂಬ ಮೂರನೇ ಆರೋಪಿಯನ್ನು ಕರೆಸಲಾಗಿತ್ತು. ಆತ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ “ಖುಬೂಲ್ ಹೈ” ಎಂದು ಹೇಳಿಸಿ ಮತಾಂತರಕ್ಕೆ ಯತ್ನಿಸಿದ್ದ.
ಆ ಧಾರ್ಮಿಕ ವಿಧಿಯ ನಂತರ, ಮಹಿಳೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಮತ್ತು ಅಯಾಜ್ ಜೊತೆ ಆಕೆಯ ‘ನಿಕಾಹ್’ (ಮದುವೆ) ಮುಕ್ತಾಯಗೊಂಡಿದೆ ಎಂದು ಮೌಲಾನಾ ಘೋಷಿಸಿದ್ದ. ಅಷ್ಟೇ ಅಲ್ಲದೆ, ಆಕೆಗೆ ಬಲವಂತವಾ ಕಲ್ಮಾ ಪಠಿಸುವಂತೆ ಒತ್ತಾಯಿಸಲಾಗಿತ್ತು. ಇದರ ನಂತರ, ಆರೋಪಿಗಳು ಆಕೆಯನ್ನು ಹೋಟೆಲ್‌ಗೆ ಕರೆದೊಯ್ದು ಅಯಾಜ್ ಮತ್ತೆ ಅತ್ಯಾಚಾರ ಎಸಗಿದ್ದ. ನಂತರವೂ ಆರೋಪಿಗಳು ಆಕೆಯ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಮುಂದುವರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಕಠಿಣ ಕಾನೂನಿನಡಿ ಪೊಲೀಸರ ಕ್ರಮ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗಪುರ ಪೊಲೀಸರು, ಆರೋಪಿಗಳ ವಿರುದ್ಧ ಅತ್ಯಾಚಾರ, ನಿರಂತರ ಲೈಂಗಿಕ ದೌರ್ಜನ್ಯ, ಸುಲಿಗೆ, ಬ್ಲ್ಯಾಕ್‌ಮೇಲ್, ಬಲವಂತದ ಮತಾಂತರದ ಆರೋಪಗಳ ಜೊತೆಗೆ ಮಹಾರಾಷ್ಟ್ರದ ‘ಮಾಟಮಂತ್ರ ವಿರೋಧಿ ಕಾಯ್ದೆ’ಯ (Anti-Black Magic Law) ಅಡಿಯಲ್ಲಿ ಕಠಿಣ ಮೊಕದ್ದಮೆ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಮೌಲಾನಾ ಬಂಧನಕ್ಕಾಗಿ ಜಾಲ ಬೀಸಲಾಗಿದೆ.
“ಸಂತ್ರಸ್ತ ಮಹಿಳೆಯು ಅತ್ಯಾಚಾರ, ಸುಲಿಗೆ, ಬಲವಂತದ ಮತಾಂತರ ಮತ್ತು ಮಾಟಮಂತ್ರದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ಎಲೆಕ್ಟ್ರಾನಿಕ್ ಸಾಧನಗಳನ್ನು (ಮೊಬೈಲ್, ವಿಡಿಯೋ ಇತ್ಯಾದಿ) ವಿಧಿವಿಜ್ಞಾನ ಪ್ರಯೋಗಾಲಯದ (Forensic) ವಿಶ್ಲೇಷಣೆಗೆ ಕಳುಹಿಸಲಾಗಿದೆ. ಈ ತಾಂತ್ರಿಕ ಪುರಾವೆಗಳು ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕವಾಗಲಿವೆ. ಮತಾಂತರ ಪ್ರಕ್ರಿಯೆ ನಡೆಸಿದ ಮೌಲಾನಾ ಪತ್ತೆಗಾಗಿ ನಮ್ಮ ಪೊಲೀಸ್ ತಂಡ ನೆರೆರಾಜ್ಯಕ್ಕೆ ತೆರಳಿದೆ. ಪ್ರಕರಣದ ಸಮಗ್ರ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕರೆ: ಪ್ರವೀಣ ಗುಡಿಜಗತ್ತಿನ ಆವಿಷ್ಕಾರದಲ್ಲಿ ನ್ಯಾನೋ ತಂತ್ರಜ್ಞಾನದ ಪಾತ್ರ ಅಪಾರ: ಕುಲಪತಿ ಸಿ. ಎಂ. ತ್ಯಾಗರಾಜ ಆಡಳಿತದಲ್ಲಿ ಇನ್ಮುಂದೆ 'ಬಂಗಾಳಿ' ಕಡ್ಡಾಯ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಘೋಷಣೆಕೌಶಲ್ಯ ಅಭಿವೃದ್ಧಿ ಯುವಕರ ಭವಿಷ್ಯದ ಕೀಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುವ ಕಾರ್ಯ ಸ್ತುತ್ಯಾರ್ಹ : ಪ್ರೊ. ಹೊಸಕೋಟಿಬಿಸಿಸಿಐ ಚುನಾವಣೆ : ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಕರ್ನಾಟಕದ ಹಲವು ಜಿಲ್ಲೆಗಳಲ್ಲಿ 4 ದಿನ ಭಾರಿ ಮಳೆಯ ಮುನ್ಸೂಚನೆಒಡೆಸಾ ಬಂದರಿನಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: ನಾಲ್ವರು ಭಾರತೀಯರು ಸಾವು, ಮತ್ತೊಬ್ಬನ ಸ್ಥಿತಿ ಗಂಭೀರಸಿಜೆಪಿ ನಾಯಕರ ಜೊತೆ ಸೌಹಾರ್ದಯುತ ಮಾತುಕತೆ ಬಳಿಕ ಧರಣಿ ಅಂತ್ಯಗೊಳಿಸುವಂತೆ ಕೇಂದ್ರ ಸರ್ಕಾರದ ಮನವಿನ್ಯಾನೋ ಜಾಥಾ-2026' ಕಾರ್ಯಕ್ರಮ