Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಎಲ್ಲವೂ ಸಹಜ ಎಂಬಂತೆ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದು ಮಹಿಳೆಯರ ಸಹಜ ಗುಣ: ರೇವತಿ ಕಾಮತ್

ಬೆಳಗಾವಿ: ಇಂದಿನ ಸಂಘರ್ಷಮಯ ಬದುಕಿನಲ್ಲಿ ಮಹಿಳೆಯರ ಹೋರಾಟ ಹಾಗೂ ತಮ್ಮ ಸಂತೃಪ್ತ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ಎಲ್ಲವೂ ಸಹಜ ಎಂಬಂತೆ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದು ಅವರ ಸಹಜ ಗುಣವಾಗಿದೆಯೆಂದು ಖ್ಯಾತ ಪರಿಸರ ತಜ್ಞೆ ಹಾಗೂ ವಿದುಷಿ ರೇವತಿ ಕಾಮತ್ ಹೇಳಿದ್ದಾರೆ.

“ನಾನು ನಮ್ಮವರೊಂದಿಗೆ” ಫೌಂಡೇಶನ್ ಜೆಎನ್‌ಎಂಸಿ ಆವರಣದಲ್ಲಿರುವ ಡಾ ಎ.ಬಿ. ರಾಜಶೇಖರ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ, ತನ್ನತನವನ್ನು ಉಳಿಸಿಕೊಳ್ಳುವಲ್ಲಿ ಅವಳ ನಿರಂತರ ಸಂಘರ್ಷ ಬಹಳ ಮಹತ್ವದ್ದಾಗಿದೆಯೆಂದು ಹೇಳಿದರು.

ಖ್ಯಾತ ರಂಗ ಕಲಾವಿದೆ ಹಾಗೂ ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಮಾತನಾಡಿ, ತೆರೆದ ಕಣ್ಣುಗಳಿಂದ ಕಂಡ ಕನಸ್ಸನ್ನು ನನಸಾಗಿಸುತ್ತೇನೆ ಎಂಬ ಛಲ ಹಾಗೂ ಆತ್ಮವಿಶ್ವಾಸ ಮಹಿಳೆಯರಲ್ಲಿದ್ದಾಗ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಆಯೋಜನೆ ಸಾಧ್ಯ ಎಂದು ಶ್ಲಾಘಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ, ಭರತೇಶ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಫೌಂಡೇಶನ್ ಸಂಸ್ಥಾಪಕಿ ಸರ್ವಮಂಗಳಾ ಅರಳಿಮಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ನೆರವೇರಿಸಿದರು.

ಮಹಿಳಾ ಉದ್ಯಮಿ ನೀಲಂ ಗುತ್ತಿಗೊಳಿ, ಲೀನಾ ಪಡಿಹಾರ, ದಾನೇಶ್ವರಿ ಪಡೆಕರ, ಅನ್ನಪೂರ್ಣಾ ಅಗಡಿ, ವಿನೋದ ದೊಡ್ಡಣ್ಣವರ, ಉಪೇಂದ್ರ ಕುಮಾರ ಕೆ.ಆರ್. ಭೂವಿಜ್ಞಾನಿ ಬಿಂದನಾ ಪಾಟೀಲ ಅವರಿಗೆ ನಮ್ಮವರ ಅಭಿಮಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳಗಾವಿಯ 20 ಜನ ವೀಣಾ ಕಲಾವಿದರಿಂದ ವೀಣಾ ವಾದನ ಮಹೋತ್ಸವ ನೆರೆವೇರಿತು.

ಭಾಗ್ಯಶ್ರೀ ಭೈರಪ್ಪನ್ನವರ, ಜ್ಯೋತಿ ಬದಾಮಿ, ರಾಜನಂದಾ ಗಾರಗಿ, ಮಾಧುರಿ ಹಿರೇಮಠ, ಆಶಾ ಹೊಸಮನಿ, ಅಂಜನಾ ಹಿರೇಮಠ, ಆರತಿ ನಿಪ್ಪಾಣಿಕರ, ಬೀನಾ ಕತ್ತಿ, ವಿಜಯಲಕ್ಷ್ಮಿ ಪಾಟೀಲ, ಲಲಿತಾ ಹೂಗಾರ, ವೀಣಾ ಪೂಜಾರ ಮತ್ತಿತರರು ಪಾಲ್ಗೊಂಡು ಮಹಿಳಾ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವು