Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚುನಾವಣೆ : ತಮಿಳುನಾಡು, ಕೇರಳ, ಅಸ್ಸಾಂನಲ್ಲಿ ಗೆಲ್ಲುವುದು ಯಾರು..? ಎಕ್ಸಿಟ್‌ ಪೋಲ್‌ ಹೇಳುವುದೇನು..?

ನವದೆಹಲಿ: ತಮಿಳುನಾಡು, ಕೇರಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳ ಮಹಾ ಸಮರ ಮುಕ್ತಾಯಗೊಂಡಿದೆ. ಮತಯಂತ್ರಗಳಲ್ಲಿ ಭದ್ರವಾಗಿದ್ದ ಅಭ್ಯರ್ಥಿಗಳ ಭವಿಷ್ಯದ ಸುಳಿವು ನೀಡುವ ‘ಎಕ್ಸಿಟ್ ಪೋಲ್’ಗಳು (ಮತಗಟ್ಟೆ ಸಮೀಕ್ಷೆ) ಇದೀಗ ಹೊರ ಬಿದ್ದಿದೆ.

ತಮಿಳುನಾಡಿನಲ್ಲಿ ಡಿಎಂಕೆಯ ಭದ್ರಕೋಟೆಗೆ ನಟ ವಿಜಯ ಸವಾಲಾಗಲಿದ್ದಾರೆಯೇ? ಕೇರಳದಲ್ಲಿ ದಶಕಗಳ ಕಾಲ ನಡೆದಿದ್ದ ಅಧಿಕಾರ ಬದಲಾವಣೆಯ ಸಂಪ್ರದಾಯ ಮರಳಿ ಬರಲಿದೆಯೇ?  ಅಸ್ಸಾಂನಲ್ಲಿ ಬಿಜೆಪಿಯ ಅಶ್ವಮೇಧ ಕುದುರೆಯನ್ನು ತಡೆಯುವವರು ಯಾರಿದ್ದಾರೆ? ಎಂಬ ಪ್ರಶ್ನೆಗಳಿಗೆ ಈ ಸಮೀಕ್ಷೆಗಳು ಉತ್ತರಿಸಿವೆ.

 ತಮಿಳುನಾಡು: ಸ್ಟಾಲಿನ್ ಭದ್ರಕೋಟೆಗೆ ನಟ ವಿಜಯ ಲಗ್ಗೆ..?
ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಸಮೀಕ್ಷೆಗಳು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆಗೆ ಗೆಲುವು ಅಂದಾಜಿಸಿವೆ. ಆದರೆ, ನಟ ವಿಜಯ್ ಅವರ ಹೊಸ ಪಕ್ಷ ಟಿವಿಕೆ (TVK) ಮೊದಲ ಚುನಾವಣೆಯಲ್ಲೇ ಭಾರಿ ಪ್ರಭಾವ ಬೀರುವ ಮುನ್ಸೂಚನೆ ನೀಡಿದೆ.

ಎಕ್ಸಿಸ್‌ ಮೈ ಇಂಡಿಯಾ (Axis My India): ಡಿಎಂಕೆ ಮೈತ್ರಿಕೂಟಕ್ಕೆ 92-110 ಸ್ಥಾನ, ಎಐಎಡಿಎಂಕೆಗೆ 22-23 ಸ್ಥಾನ, ಹಾಗೂ ನಟ ವಿಜಯ  ಅವರ ಟಿವಿಕೆಗೆ 98-120 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ.

ಪ್ರಜಾ ಪೋಲ್‌ (Praja Poll): ಡಿಎಂಕೆ ಮೈತ್ರಿಕೂಟ 148-168 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿದೆ, ಎಐಎಡಿಎಂಕೆಗೆ 61-81 ಹಾಗೂ ಟಿವಿಕೆಗೆ  1-9 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.

ಕಾಮಾಖ್ಯ ಅನಾಲಿಟಿಕ್ಸ್‌ (Kamakhya Analytics): ಡಿಎಂಕೆ (78-95), ಎಐಎಡಿಎಂಕೆ (68-84) ಹಾಗೂ ಟಿವಿಕೆ ಮೈತ್ರಿಗೆ 67-81 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ. ಹೀಗಾದರೆ  ವಿಜಯ ಕಿಂಗ್ ಮೇಕರ್ ಆಗಲಿದ್ದಾರೆ.
JVC: ಈ ಸಂಸ್ಥೆಯು ಅಚ್ಚರಿಯ ರೀತಿಯಲ್ಲಿ ಎಐಎಡಿಎಂಕೆ ಮೈತ್ರಿಗೆ 128-147 ಸ್ಥಾನ ನೀಡಿ ಅಧಿಕಾರ ಹಿಡಿಯಲಿದೆ ಎಂದಿದೆ. ಡಿಎಂಕೆಗೆ 75-95 ಹಾಗೂ ಟಿವಿಕೆಗೆ 8-15 ಸ್ಥಾನ ನೀಡಿದೆ.

ಇತರ ಸಮೀಕ್ಷೆಗಳು: Peoples Pulse (125-145), Peoples Insight (120-140), P-Marq (125-145), ಮತ್ತು Matrize (122-132) ಸಂಸ್ಥೆಗಳು ಡಿಎಂಕೆ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿವೆ.

ಕೇರಳ: ಹ್ಯಾಟ್ರಿಕ್ ಕನಸಿಗೆ ಯುಡಿಎಫ್ ಅಡ್ಡಿ?
ಕೇರಳದಲ್ಲಿ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಮೇ 4ರಂದು ಫಲಿತಾಂಶ ಬರಲಿದೆ. ಇಲ್ಲಿ ಎಲ್‌ಡಿಎಫ್ ಸತತ ಮೂರನೇ ಅವಧಿಗೆ ಅಧಿಕಾರ ಬಯಸಿದ್ದರೆ, ಬಿಜೆಪಿ ತನ್ನ ಅಸ್ತಿತ್ವ ವಿಸ್ತರಿಸಲು ಯತ್ನಿಸಿದೆ.

 Axis My India: ಯುಡಿಎಫ್ (78-90), ಎಲ್‌ಡಿಎಫ್ (49-62), ಎನ್‌ಡಿಎ (0-3).
Matrize & P-Marq: ಯುಡಿಎಫ್ (70-75), ಎಲ್‌ಡಿಎಫ್ (60-65), ಎನ್‌ಡಿಎ (3-5).
People’s Pulse: ಯುಡಿಎಫ್ (75-85), ಎಲ್‌ಡಿಎಫ್ (55-65), ಎನ್‌ಡಿಎ (0-3).
JVC: ಯುಡಿಎಫ್ (72-84), ಎಲ್‌ಡಿಎಫ್ (52-61), ಎನ್‌ಡಿಎ (3-7) ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿದೆ.

 ಅಸ್ಸಾಂ: ಬಿಜೆಪಿಗೆ ಭರ್ಜರಿ ಜಯದ ಮುನ್ಸೂಚನೆ
ಅಸ್ಸಾಂನ 126 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮರಳಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.

Axis My India: ಬಿಜೆಪಿ+ (88-100), ಕಾಂಗ್ರೆಸ್+ (24-36).
ಜನ್ಮತ್‌ ಪೋಲ್ಸ್‌ : ಬಿಜೆಪಿ+ (87-98), ಕಾಂಗ್ರೆಸ್+ (29-30).
Poll Diary: ಬಿಜೆಪಿ+ (86-101) ಸ್ಥಾನ ನೀಡುವ ಮೂಲಕ ಕಾಂಗ್ರೆಸ್‌ಗೆ ಕೇವಲ 15-26 ಸ್ಥಾನ ಲಭಿಸಬಹುದು ಎಂದು ತಿಳಿಸಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರುನಾಡಿಗೆ ಜಲಕಂಟಕ, ಭುವಿಯೇ ತಲ್ಲಣ : ಭವಿಷ್ಯ ನುಡಿದ ಪ್ರಖ್ಯಾತ ಸ್ವಾಮೀಜಿ...!ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ...!ಕೊನೆಗೂ ಸಿಹಿಸುದ್ದಿ : ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ:  ಲಕ್ಷ್ಮೀ ಹೆಬ್ಬಾಳಕರ್ ಕೊಟ್ರು ಈ ಗುಡ್ ನ್ಯೂಸ್..!ನೈರುತ್ಯ ರೇಲ್ವೆ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆಬೆಳಗಾವಿ : 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಸರಕಾರಿ ನೌಕರರಿಗೆ ಸಿಹಿಸುದ್ದಿ : ತುಟ್ಟಿಭತ್ಯೆ ಹೆಚ್ಚಳ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವುದು ನಾಗರಿಕರ ಆದ್ಯ ಕರ್ತವ್ಯ : ಎ.ಎಸ್.ಪಾಶ್ಚಾಪುರೆಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್‌ ಪತ್ತೆತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ