ಬೆಳಗಾವಿ: ರಾಜ್ಯದ ಪ್ರಭಾವಿ ಸಚಿವ ಸತೀಶ ಜಾರಕಿಹೊಳಿ ಅವರ ಅಳಿಯನಿಗೆ ಇಡಿ ಬುಧವಾರ ಬೆಳಗ್ಗೆ ಬಿಗ್ ಶಾಕ್ ನೀಡಿದೆ. ಮಂಜುನಾಥ ಮನೆ ಸೇರಿ ಅಧಿಕಾರಿಗಳು 6 ಕಡೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ ಅವರ ಮೇಲೆ ಈ ದಾಳಿ ನಡೆದಿದೆ. ಈ ದಾಳಿ ಬೆಳಗಾವಿಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.