ವಿಜಯಪುರ: ಗಾಳಿ ಸಹಿತ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಗುರುವಾರ(ಮೇ14) ರಾತ್ರಿ ಆಲಮೇಲ ತಾಲೂಕಿನ ಮೊರಗಟಿ ಗ್ರಾಮದಲ್ಲಿ ನಡೆದಿದೆ.
ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವಂತ ಸಮಾಧಿಯಾಗಿದ್ದಾರೆ. ಮೃತ ದುರ್ದೈವಿಗಳು ಗುರುನಾಥ ಬಡಿಗೇರ (35),ಜ್ಯೋತಿ ಬಡಿಗೇರು (28),ಕಾಳಮ್ಮ ಬಡಿಗೇರ (13),ಕೀರ್ತಿ ಬಡಿಗೇರ (9) ಎನ್ನುವವರಾಗಿದ್ದಾರೆ.
ಸ್ವಂತ ಮನೆಯ ದುರಸ್ತಿ ಮಾಡುತ್ತಿದ್ದ ಕಾರಣ ಹಳೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.
