Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಮರಾಠಿ ಭಾಷೆ ಕಲಿತ ಖ್ಯಾತನಾಮ ಕನ್ನಡ ನಟಿ : ಕಾರಣ ಏನು ಗೊತ್ತೇ ?

ಚವ್ವ ಎಂಬ ಮರಾಠಿ ಸಿನಿಮಾದಲ್ಲಿನ ಪಾತ್ರಕ್ಕೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಧ್ವನಿ ನೀಡಲಿದ್ದಾರೆ. ಹಾಗಾಗಿ ಅವರು ಮರಾಠಿ ಭಾಷೆಯ ಸಂಭಾಷಣೆಗಳನ್ನು ಸರಿಯಾಗಿ ಉಚ್ಛರಿಸಬೇಕು. ಆದ್ದರಿಂದ 4 ವಾರಗಳ ಕಾಲ ಅವರು ವಿಶೇಷ ತರಬೇತಿ ಪಡೆದುಕೊಂಡು ಮರಾಠಿ ಕಲಿತಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ. ಈ ಸಿನಿಮಾಗೆ ಲಕ್ಷ್ಮಣ್​ ಉಟೇಕರ್​ ನಿರ್ದೇಶನ ಮಾಡಲಿದ್ದಾರೆ.

ಬೆಳಗಾವಿ : ಕನ್ನಡದ ನೆಲದಲ್ಲಿ ಹುಟ್ಟಿ ಚಲನಚಿತ್ರ ರಂಗದಲ್ಲಿ ಅಪಾರ ಹೆಸರು ಮಾಡಿರುವ ಖ್ಯಾತನಾಮ ನಟಿ ಇದೀಗ ಮರಾಠಿ ಭಾಷೆ ಕಲಿಯಲು ಮುಂದಾಗಿರುವುದು ಹಳೆಯ ಸುದ್ದಿ.

ಕೊಡಗಿನ ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ಅವರು ಭಾಷೆಗಳ ಗಡಿ ಮೀರಿ ಬೆಳೆಯುತ್ತಿದ್ದಾರೆ. ಎಲ್ಲ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಪಾತ್ರಕ್ಕೆ ತಕ್ಕಂತೆ ಭಾಷೆಗಳನ್ನು ಅವರು ಕಲಿಯುತ್ತಿದ್ದಾರೆ. ಮರಾಠಿ ಭಾಷೆ ಕಲಿಯಲು ರಶ್ಮಿಕಾ ಮಂದಣ್ಣ ಅವರು 4 ವಾರಗಳ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಅವರ ಜೊತೆ ವಿಕ್ಕಿ ಕೌಶಲ್​ ಅವರು ಸಹಾ ಮರಾಠಿ ಕಲಿಕೆಯಲ್ಲಿ ನಿರತರಾಗಿದ್ದಾರೆ.
ಪ್ಯಾನ್​ ಇಂಡಿಯಾ ಮಟ್ಟದಲ್ಲಿ
ಅತ್ಯಂತ ಜನಪ್ರಿಯರಾಗಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹತ್ತಾರು ಅವಕಾಶಗಳು ಸಿಗುತ್ತಿವೆ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಅವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಬಾಲಿವುಡ್​ನಲ್ಲಿ ರಶ್ಮಿಕಾ ಅವರು ಸಖತ್​ ಶೈನ್​ ಆಗುತ್ತಿದ್ದಾರೆ. ಈಗ ಅವರು ವಿಕ್ಕಿ ಕೌಶಲ್​ ಜೊತೆ ‘ಚವ್ವ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಸಲುವಾಗಿ ಮರಾಠಿ ಕಲಿತಿದ್ದಾರೆ ಎಂದು ಸುದ್ದಿಯಾಗಿದೆ. ಇದು ಹಿಂದಿ ಸಿನಿಮಾ. ಹಾಗಿದ್ದರೂ ಪಾತ್ರಕ್ಕಾಗಿ ಮರಾಠಿ ಕಲಿಯುವುದು ಅಗತ್ಯವಾಗಿದೆ.

ಛತ್ರಪತಿ ಸಂಭಾಜಿ ಮಹಾರಾಜ್​ ಅವರ ಜೀವನದ ಕಥೆಯನ್ನು ಆಧರಿಸಿ ‘ಚವ್ವ’ ಸಿನಿಮಾ ಮೂಡಿಬರುತ್ತಿದೆ. ಶಿವಾಜಿಯ ಪುತ್ರನಾದ ಸಂಭಾಜಿ ಓರ್ವ ಮರಾಠಿ ವೀರ. ಸಂಭಾಜಿ ಪತ್ನಿ ಎಸುಬಾಯಿ ಪಾತ್ರವನ್ನು ರಶ್ಮಿಕಾ ಮಂದಣ್ಣ ಅವರು ನಿಭಾಯಿಸಲಿದ್ದಾರೆ. ಈ ಚಿತ್ರದ ಹಲವು ಸಂಭಾಷಣೆಗಳು ಮರಾಠಿ ಭಾಷೆಯಲ್ಲಿ ಇರಲಿವೆ. ಹಾಗಾಗಿ ಕಲಾವಿದರು ಮರಾಠಿ ಕಲಿಯುತ್ತಿದ್ದಾರೆ.

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸೂಪರ್​ ಸ್ಟಾರ್​ ಆದ ರಶ್ಮಿಕಾ ಮಂದಣ್ಣ ಅವರನ್ನು ಬಾಲಿವುಡ್​ ಕೂಡ ಕೈ ಬೀಸಿ ಕರೆಯಿತು. ‘ಅನಿಮಲ್​’ ಸಿನಿಮಾದಿಂದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ಹಾಗಾಗಿ ಹಿಂದಿ ಸಿನಿಮಾ ಮಂದಿಗೆ ರಶ್ಮಿಕಾ ಫೇವರಿಟ್​ ಆಗಿದ್ದಾರೆ. ‘ಚವ್ವ’ ಚಿತ್ರದಲ್ಲಿ ವಿಕ್ಕಿ ಕೌಶಲ್​ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಲಿದ್ದಾರೆ.

ಇತ್ತೀಚೆಗೆ ‘ಬ್ಯಾಡ್​ ನ್ಯೂಸ್​’ ಸಿನಿಮಾದ ‘ತೋಬಾ ತೋಬಾ..’ ಹಾಡಿನಿಂದ ವಿಕ್ಕಿ ಕೌಶಲ್​ ಸೆನ್ಸೇಷನ್​ ಸೃಷ್ಟಿಸಿದ್ದಾರೆ. ದಿನದಿಂದ ದಿನಕ್ಕೆ ಅವರ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಮೊದಲು ಒಂದು ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್​ ಅವರು ತೆರೆ ಹಂಚಿಕೊಂಡಿದ್ದರು. ಆ ಜಾಹೀರಾತು ವಿವಾದ ಸೃಷ್ಟಿ ಮಾಡಿತ್ತು.

Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಕಲಗಿ ಪಟ್ಟಣದಲ್ಲಿ ವಿಜಯ ದಶಮಿ ನಿಮಿತ್ತ ಶ್ರೀ ಮಹಾಲಕ್ಷ್ಮೀ ದೇವಿ ಅಗ್ನಿ ಹಾಯುವ ಕಾರ್ಯಕ್ರಮ.ಮಾರ್ಕಂಡೇಯ ನದಿಯಲ್ಲಿ  ಮರ್ಡರ್..?ಬೆಳಗಾವಿಯಲ್ಲಿ ಹೊಸ ಶೋರೂಮ್ ಮೂಲಕ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ವಿಸ್ತರಿಸಿದ PuREPowerನೀಲಿ ಡ್ರಮ್ ಕೊಲೆ ಪ್ರಕರಣ : ಪತ್ನಿ ಮುಸ್ಕಾನ್‌, ಪ್ರಿಯಕರ ಸಾಹಿಲ್‌ಗೆ ಮರಣದಂಡನೆ ಶಿಕ್ಷೆRCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರು