Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿಯಲ್ಲಿ ಶ್ರೀಮಂತರನ್ನೇ ಹನಿ ಟ್ರ್ಯಾಪ್ ಮಾಡುತ್ತಿದ್ದ ಯುವತಿಯ ಕರಾಮತ್ತು ಬಯಲಿಗೆ ಈಕೆಯ ಅಮಂತ್ರಣ ಹೇಗಿರುತ್ತಿತ್ತು ಗೊತ್ತೇ ?

ಬೆಳಗಾವಿ: ಮಹಾಲಿಂಗಪುರ ಮೂಲದ ದೀಪಾ ಅವಟಗಿ(33) ಎಂಬ ಮಹಿಳೆ ಇದೀಗ ಹನಿ ಟ್ರ್ಯಾಕ್ ಪ್ರಕರಣದಲ್ಲಿ ಬಂಧಿತಳಾಗಿ ಬಿಡುಗಡೆಯಾಗಿದ್ದು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಆಕೆಯ ಸ್ನೇಹಿತ ಹುಕ್ಕೇರಿ ತಾಲೂಕಿನ ಶಿವಾನಂದ ಮಠಪತಿ, ಪರಾರಿಯಾಗಿದ್ದು ಈತ ಶ್ರೀಮಂತ ವ್ಯಕ್ತಿಗಳ ಬಗ್ಗೆ ದೀಪಾಳಿಗೆ ಪೂರಕ ಮಾಹಿತಿ ನೀಡಿ ಸಹಕರಿಸುತ್ತಿದ್ದ.

ದೀಪಾ ಶ್ರೀಮಂತರನ್ನೇ ಬಲೆಗೆ ಬೀಳಿಸುತ್ತಿದ್ದು ಹೇಗೆ ಗೊತ್ತೇ ?

ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡ ದೀಪಾ ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು. ಇದೀಗ ಈಕೆ ನಡೆಸುತ್ತಿದ್ದ ಹನಿಟ್ರ್ಯಾಪ್ ದಂಧೆಯನ್ನು ಬೆಳಗಾವಿಯ ಟಿಳಕವಾಡಿ ಪೊಲೀಸರು ಪತ್ತೆ ಹಚ್ಚಿ ಕ್ರಮಕ್ಕೆ ಮುಂದಾಗಿದ್ದಾರೆ.

ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಮೂಲಕ ಶ್ರೀಮಂತರನ್ನೇ ಪರಿಚಯ ಮಾಡಿಕೊಂಡು ಅವರನ್ನು ತನ್ನ ಬಲೆಗೆ ಬೀಳಿಸಿ ಕೊಳ್ಳುತ್ತಿದ್ದಳು. ನಂತರ ಅಶ್ಲೀಲ ಚಾಟ್ ನಡೆಸಿ ಬೆಳಗಾವಿಯ ವಸತಿ ಗೃಹಕ್ಕೆ ಭೇಟಿ ನೀಡಲು ಆಮಂತ್ರಿಸುತ್ತಿದ್ದಳು. ಅಮಂತ್ರಣ ಸ್ವೀಕರಿಸಿ ಬಂದ ವ್ಯಕ್ತಿಗೆ ಸ್ನಾನ ಮಾಡಿ ಬರಲು ಹೇಳಿ ಆತ ಬಾತ್ ರೂಮಿಗೆ ಹೋದ ಕೂಡಲೇ ಹೊರಗಿನಿಂದ ಬಾಗಿಲು ಹಾಕಿ ಲಾಕ್ ಮಾಡುತ್ತಿದ್ದಳು. ಆ ವ್ಯಕ್ತಿ ತಂದಿದ್ದ ಮೊಬೈಲ್, ಹಣ, ಕಾರಿನ ಕೀ ಸಮೇತವಾಗಿ ಪರಾರಿ ಆಗುತ್ತಿದ್ದಳು. ಪರಾರಿಯಾಗುತ್ತಿರುವ ದೃಶ್ಯಗಳು ವಸತಿಗೃಹಗಳ ಸಿಸಿಟಿವಿ ಟಿವಿಯಲ್ಲಿ ಸೆರೆಯಾಗಿವೆ.

ನಂತರ ಬಾತ್ ರೂಮ್ ನಲ್ಲಿ ಸಿಲುಕಿದ್ದ ವ್ಯಕ್ತಿಗೆ ಹೇಗೋ ಸಂಪರ್ಕಿಸಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಹಣ ಕೊಡದೆ ಇದ್ದರೆ ದೂರು ದಾಖಲಿಸುವುದಾಗಿ ಹೇಳುತ್ತಿದ್ದಳು.

ಈ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ಅವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ನಡುವೆ ಆರೋಪಿ ಬೇಲ್ ಪಡೆದು ಬಿಡುಗಡೆಯಾಗಿದ್ದಾನೆ. ಆರೋಪಿಯಿಂದ ಒಟ್ಟು 32 ಲಕ್ಷದ 86,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫಾರ್ಚುನರ್ ಕಾರು, ಮಾರುತಿ ಕಾರು, ಕಾರು, 11 ಮೊಬೈಲ್, ಟ್ಯಾಬ್, ಡೊಂಗಲ್ ಮೂರು ಕಾರಿನ ಕೀ ಗಳು ಮತ್ತು 14 ಸಾವಿರ ರೂಪಾಯಿ ನಗದು ಸೇರಿವೆ. ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದಲ್ಲಿ ಜೂನ್ 1ಕ್ಕೆ ಶಾಲೆ ಪ್ರಾರಂಭೋತ್ಸವ : ಅಂದೇ ಪೋಷಕರ ಮಹಾಸಭೆಪೋಕ್ಸೋ ಪ್ರಕರಣ : ಪೊಲೀಸರ ಮುಂದೆ ಶರಣಾದ ಕೇಂದ್ರ ಸಚಿವ ಬಂಡಿ ಸಂಜಯ ಪುತ್ರ3 ನೇ ಮಗು ಜನಿಸಿದರೆ ₹30 ಸಾವಿರ, 4ನೇ ಮಗು ಜನಿಸಿದರೆ ₹40 ಸಾವಿರ ಧನಸಹಾಯ ! ವಿಶಿಷ್ಟ ಯೋಜನೆ ಘೋಷಿಸಿದ ಆಂಧ್ರ ಸಿಎಂ…!SSLC ಮರುಮೌಲ್ಯಮಾಪನ : ಜಿಲ್ಲೆಯ ವಿದ್ಯಾರ್ಥಿ ಈಗ ಇಡೀ ರಾಜ್ಯಕ್ಕೆ ಪ್ರಥಮ..!ಕಕ್ಷಿದಾರರ ಸಮಾಲೋಚನಾ ಸ್ಪರ್ಧೆ: ರಾಷ್ಟ್ರೀಯ ಕಾನೂನು ಉತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಗದಗ ಮಾನ್ವಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳುಸಾವಿರಾರು ಕೋಟಿ ಹೂಡಿಕೆ ಮಾಡಿದವರಿಗೆ ಆತಂಕ :  ICE CREAM ಮಾರುತ್ತಿದ್ದವ ಈ ಪರಿ ಬೆಳೆದದ್ದು ಹೇಗೆ ?ಕೊನೆಗೂ ಶಿವಾನಂದ ನೀಲಣ್ಣವರ ಬಂಧನ..!ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ