Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನಿಮ್ಮ ಮೊಬೈಲಿನಲ್ಲಿ ಸೈರನ್ ಮೊಳಗಿತೇ..? ಗಾಬರಿ ಬೇಡ ; ಯಾಕೆಂದರೆ ಇದು ಹೊಸ ತಂತ್ರಜ್ಞಾನದ ಪರೀಕ್ಷೆ…!

ನವದೆಹಲಿ: ಇಂದು ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಒಮ್ಮೆಲೇ‘ಎಮರ್ಜೆನ್ಸಿ ಅಲರ್ಟ್’ ಸಂದೇಶಗಳು ಬಂದಿವೆ. ಸೈಲೆಂಟ್ ಮೋಡ್‌ನಲ್ಲಿದ್ದ ಫೋನ್‌ಗಳೂ ಸಹ ಜೋರಾಗಿ ಶಬ್ದ ಮಾಡುತ್ತಾ ಕಂಪಿಸಲು (Vibrate) ಶುರುಮಾಡಿವೆ. ಮೊಬೈಲ್ ಫೋನ್ ಹಠಾತ್ತಾಗಿ ಜೋರಾಗಿ ಶಬ್ದ ಮಾಡುತ್ತ ಕಂಪಿಸಿದ್ದರೆ ಅಥವಾ ವಿಚಿತ್ರವಾದ ಸೌಂಡ್ ಮಾಡಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಯಾಕೆಂದರೆ ಇದು ದೇಶದ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು ಭಾರತ ಸರ್ಕಾರವು ನಡೆಸಿದ ತಾಂತ್ರಿಕ ಪರೀಕ್ಷೆಯಾಗಿದೆ.

ಶನಿವಾರ ದೇಶದಾದ್ಯಂತ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ “ಅತ್ಯಂತ ತೀವ್ರವಾದ ಎಚ್ಚರಿಕೆ” (Extremely Severe Alert) ಎಂಬ ಸಂದೇಶವನ್ನು ರವಾನಿಸುವ ಮೂಲಕ, ಸರ್ಕಾರವು ತನ್ನ ಸ್ವದೇಶಿ ನಿರ್ಮಿತ ‘ಸೆಲ್ ಬ್ರಾಡ್‌ಕಾಸ್ಟ್’ (Cell Broadcast) ತುರ್ತು ಎಚ್ಚರಿಕೆ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಈ ಅತ್ಯಾಧುನಿಕ ವ್ಯವಸ್ಥೆಯನ್ನು ಮೇ 2, 2026 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಈ ಇಡೀ ವ್ಯವಸ್ಥೆಯ ಹಿಂದಿರುವುದು ‘ಸಚೇತ್’ (SACHET) ಎಂಬ ಸಮಗ್ರ ಎಚ್ಚರಿಕೆ ಪ್ಲಾಟ್‌ಫಾರ್ಮ್‌.
ದೂರಸಂಪರ್ಕ ಇಲಾಖೆಯ ಪ್ರಮುಖ ಸಂಶೋಧನಾ ಸಂಸ್ಥೆಯಾದ ಸಿ-ಡಾಟ್ (C-DOT) ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಶಿಫಾರಸಿನಂತೆ ‘ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದೆ.

ಈ ವ್ಯವಸ್ಥೆ ಏಕೆ ಮುಖ್ಯ?
ಸಾಮಾನ್ಯ ಎಸ್‌ಎಂಎಸ್ (SMS) ಸಂದೇಶಗಳಿಗಿಂತ ಈ ‘ಸೆಲ್ ಬ್ರಾಡ್‌ಕಾಸ್ಟ್’ ತಂತ್ರಜ್ಞಾನ ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿದೆ. ನಿಮ್ಮ ಫೋನ್ ಸೈಲೆಂಟ್ ಮೋಡ್ ಅಥವಾ ‘ಡೋಂಟ್ ಡಿಸ್ಟರ್ಬ್’ ಮೋಡ್‌ನಲ್ಲಿದ್ದರೂ ಸಹ, ಈ ಎಚ್ಚರಿಕೆ ಸಂದೇಶವು ದೊಡ್ಡದಾದ ಶಬ್ದದೊಂದಿಗೆ ಪರದೆಯ ಮೇಲೆ ಮೂಡುತ್ತದೆ. ಭೂಕಂಪ, ಸುನಾಮಿ, ಮಿಂಚಿನ ಹೊಡೆತದಂತಹ ನೈಸರ್ಗಿಕ ವಿಕೋಪಗಳು ಹಾಗೂ ಅನಿಲ ಸೋರಿಕೆಯಂತಹ ವಿಪತ್ತುಗಳ ಸಮಯದಲ್ಲಿ ಜನರನ್ನು ತಕ್ಷಣವೇ ಎಚ್ಚರಿಸಲು ಇದು ಸಹಕಾರಿಯಾಗಿದೆ. ಇದು ಅಡೆತಡೆಯಿಲ್ಲದ ಸೇವೆ ನೀಡುತ್ತದೆ. ಮೊಬೈಲ್ ನೆಟ್‌ವರ್ಕ್ ಜಾಮ್ ಆಗಿದ್ದರೂ ಸಹ ಈ ಸಂದೇಶಗಳು ನಿಖರವಾಗಿ ತಲುಪುತ್ತವೆ.

134 ಶತಕೋಟಿ ಸಂದೇಶಗಳ ದಾಖಲೆ
ಈ ವ್ಯವಸ್ಥೆಯು ಈಗಾಗಲೇ ಪರೀಕ್ಷಾರ್ಥ ಹಂತದಲ್ಲಿ ದೊಡ್ಡ ಯಶಸ್ಸು ಕಂಡಿದೆ. ಚಂಡಮಾರುತ ಮತ್ತು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ . ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಈವರೆಗೆ 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು 134 ಶತಕೋಟಿ ಎಚ್ಚರಿಕೆ ಸಂದೇಶಗಳನ್ನು ರವಾನಿಸಿವೆ.

ಈಗ ಅಧಿಕೃತವಾಗಿ ಚಾಲನೆಗೊಂಡಿರುವ ಈ ವ್ಯವಸ್ಥೆಯು, ಯಾವುದೇ ವ್ಯಕ್ತಿ ತನ್ನ ಫೋನ್‌ನಲ್ಲಿ ಎಂತಹ ಸೆಟ್ಟಿಂಗ್ ಇಟ್ಟುಕೊಂಡಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಆತನಿಗೆ ಮಾಹಿತಿ ತಲುಪುವಂತೆ ಮಾಡುತ್ತದೆ. ಇದು ಭವಿಷ್ಯದಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಪ್ರಾಣಹಾನಿಯನ್ನು ತಡೆಗಟ್ಟಲು ಭಾರತಕ್ಕೆ ದೊರೆತ ದೊಡ್ಡ ತಾಂತ್ರಿಕ ಶಕ್ತಿಯಾಗಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಲಿಂಗರಾಜ ಕಾಲೇಜು ವಿದ್ಯಾರ್ಥಿನಿಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 4 ಕ್ಕೂ ಅಧಿಕ ಜನ ಸಾವುಬೆಳಗಾವಿ ಕೃಷ್ಣಮಠದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆಕಾನೂನು ವಿದ್ಯಾರ್ಥಿಗಳು ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆಖ್ಯಾತ ನಟ ದರ್ಶನ್ ಗೆ ಇನ್ನೊಂದು ವರ್ಷ ಜಾಮೀನು ಇಲ್ಲ : ಸುಪ್ರೀಂ ಕೋರ್ಟ್ಸಿದ್ದಾಪುರ : ಸ್ಕೂಟಿಗೆ ಟ್ರ್ಯಾಕ್ಟರ್ ಡಿಕ್ಕಿ ; ಜನಗಣತಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಶಿಕ್ಷಕಿ ಸಾವುಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ದಾರುಣ ಸಾವುಒಂದೇ ಸಲ 224 ವಿಧಾನ ಸಭೆ ಸ್ಥಾನ ಗೆದ್ದು ಸಿಎಂ ಆಗುತ್ತೇನೆ ಎಂದಿದ್ದ ನೀಲಣ್ಣನವರಿಗೆ ಅಧಿಕಾರಿಗಳಿಂದ ಶಾಕ್ ..!ಉತ್ತರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಮಳೆಗೆ 100ಕ್ಕೂ ಹೆಚ್ಚು ಮಂದಿ ಸಾವುಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ