Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಲೋಂಡಾ ಕಾಡಿನಲ್ಲಿ ಕೆಂದಳಿಲು ಬೇಟೆ: ಬೇಟೆಗಾರನ ಬಂಧನ..!

ಲೋಂಡಾ ಕಾಡಿನಲ್ಲಿ ಕೆಂದಳಿಲು ಬೇಟೆ: ಬೇಟೆಗಾರನ ಬಂಧನ..!

RFO ಭೀಮಗೋಳ ಬಲೆಗೆ ಬಿದ್ದ ಬೇಟೆಗಾರ..!

ಖಾನಾಪುರ: ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಕಾಡು ಬೆಕ್ಕು ಜಾತಿಯ ಮರಗಳಲ್ಲಿ ವಾಸವಿರುವ ಅಪರೂಪದ ವನ್ಯಜೀವಿ ಕೆಂದಳಿಲನ್ನು ಬೇಟೆಯಾಡಿದ ಬೇಟೆಗಾರನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ತಾಲೂಕಿನ ಲೋಂಡಾ ವಲಯದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಲೋಂಡಾ ಅರಣ್ಯ ವ್ಯಾಪ್ತಿಯ ತಿವೋಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಕೆಂದಳಿಲು ಬೇಟೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಆರ್.ಎಫ್.ಒ ನಾಗರಾಜ ಭೀಮಗೋಳ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಬೇಟೆಗಾರನನ್ನು ವನ್ಯಜೀವಿಯ ಕಳೇಬರದ ಸಮೇತ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಿವೋಲಿ ಗ್ರಾಮದ ಲಾದ್ರು ಲೂಯಿಸ್ ಧಮೆಲ್ ಬಂಧಿತ ಬೇಟೆಗಾರ. ಈತನ ಜೊತೆಗೆ ಬೇಟೆಗೆ ಬಂದಿದ್ದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತನಿಂದ ಒಂದು ನಾಡ ಬಂದೂಕು, ಹಲವು ಜೀವಂತ ಗುಂಡುಗಳು, ಸಿಡಿಮದ್ದು ಪೌಡರ್ ಮತ್ತು ಕೆಂದಳಿಲ ಕಳೇಬರವನ್ನು ವಶಪಡಿಸಿಕೊಂಡು ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಿಸಿಎಫ್ ಮಂಜುನಾಥ ಚವಾಣ, ಡಿಸಿಎಫ್ ಹರ್ಷಭಾನು, ಎಸಿಎಫ್ ಸಂತೋಷ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಲೋಂಡಾ ಅರಣ್ಯ ವಲಯದ ರಾಜು ಪವಾರ, ಅಶೋಕ ವಾಘ, ಮಂಜುನಾಥ ಕಟ್ಟಿ, ಗುಂಡಪ್ಪ ಹೊಸಮನಿ, ಮಲ್ಲೇಶಪ್ಪ ನಂದೆಪ್ಪಗೋಳ, ಸಂತೋಷ ಜೋಗಿ ಹಾಗೂ ಇತರರು ಪಾಲ್ಗೊಂಡಿದ್ದರು.

ಅರಣ್ಯದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಟ್ರಾಕ್ಟರ್ ವಶ
ಖಾನಾಪುರ: ತಾಲೂಕಿನ ಲೋಂಡಾ ವಲಯದ ಗುಂಜಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗುಸುತ್ತಿದ್ದ ಟ್ರಾಕ್ಟರ್ ಮಾಲುಸಮೇತ ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸೋಮವಾರ ಲೋಂಡಾ ವಲಯದ ತಿವೋಲಿ-ಗುಂಜಿ ನಡುವಿನ ಅರಣ್ಯ ಪ್ರದೇಶದಲ್ಲಿ ಹರಿಯುವ ಹಳ್ಳದ ದಂಡೆಯಲ್ಲಿ ಸಂಗ್ರಹವಾಗಿದ್ದ ಮರಳನ್ನು ಟ್ರಾಕ್ಟರ್ನಲ್ಲಿ ತುಂಬಿಸಿಕೊಂಡು ಗುಂಜಿ ಗ್ರಾಮದತ್ತ ತರುತ್ತಿದ್ದ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ರಾಜು ಪವಾರ ಹಾಗೂ ಇತರರು ಟ್ರಾಕ್ಟರ್ ತಪಾಸಣೆ ಮಾಡಿದ್ದರಿಂದ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಕುರಿತು ಗುಂಜಿ ಉಪ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಟ್ರಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೆಳಗಾವಿ ಜಿಎ ಪ್ರೌಢಶಾಲೆ ಅದ್ವಿತೀಯ ಸಾಧನೆ ಶೈಕ್ಷಣಿಕ ಸಾಧನೆಗೆ ಮತ್ತೆ ಮುಕುಟಪ್ರಾಯವಾದ ಹಿರಿಯಣ್ಣಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಶೇ.94.1ರಷ್ಟು ವಿದ್ಯಾರ್ಥಿಗಳು ತೇರ್ಗಡೆ ; ಯಾವ ಜಿಲ್ಲೆ ಫಸ್ಟ್​​? ಯಾವುದು ಲಾಸ್ಟ್​​? ಇಲ್ಲಿದೆ ಮಾಹಿತಿ625 ಕ್ಕೆ 625 ಅಂಕ ಪಡೆದ ಕಟಗೇರಿ ವಿದ್ಯಾರ್ಥಿನಿ...!SSLC Results: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಹಿಂದಿ ಸೇರಿ ತೃತೀಯ ಭಾಷೆಗಳಿಗೆ ಈ ವರ್ಷ ಅಂಕ ನೀಡಲು ಸರಕಾರ ತೀರ್ಮಾನಸಹಜ ಸ್ಥಿತಿಗೆ ಬಾರದ ಕಾಶ್ಮೀರ: ಪಹಲ್ಗಾಮ್ ಹತ್ಯಾಕಾಂಡಕ್ಕೆ 1 ವರ್ಷ: ತನಿಖಾ ಸಂಸ್ಥೆಗಳ ಕೈಗೆ ಸಿಕ್ಕ ಸಾಕ್ಷ್ಯಗಳೇನು? ತನಿಖೆಯ ಈಗಿನ ಸ್ಥಿತಿಗತಿ ಏನು?2026 ರಲ್ಲಿ ಅಪ್ಪಳಿಸಲಿದೆಯೇ ‘ಮೆಗಾ ಎಲ್ ನಿನೋ’ ? 1877 ರ ಭೀಕರ ʼಬರʼ ಮರುಕಳಿಸುವ ಬಗ್ಗೆ ಎಚ್ಚರಿಕೆ ನೀಡಿದ ವಿಜ್ಞಾನಿಗಳು !  ನೈಟಿ ಹಾಕುವ ವಿಷಯವಾಗಿ ಹೆಂಡತಿಯೊಂದಿಗೆ ತಕರಾರು: ಕೊಲೆಗೆ ಯತ್ನಿಸಿದ ಪತಿರಾಯ..!ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಕೆಎಲ್‌ಇ ಪಿಯು ಕಾಲೇಜುಗಳ ಸಾಧನೆ – ಅದ್ವಿತೀಯ