ಬೆಳಗಾವಿ : ಅಂಕಲಗಿಯ ಪ್ರತಿಷ್ಠಿತ ಎಸ್.ವೈ. ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತರಾಗಿ ಜನಮನ್ನಣೆ ಗಳಿಸಿದ್ದ ಎಸ್ .ವೈ. ಪಾಟೀಲ(80) ರವಿವಾರ ನಿಧನರಾಗಿದ್ದಾರೆ. ಕೃಷಿ ಇಲಾಖೆಯ ಆಯುಕ್ತ ವೈ.ಎಸ್. ಪಾಟೀಲ ಸೇರಿದಂತೆ ಮೂವರು ಹೆಣ್ಣು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಸುಲಧಾಳ ಗ್ರಾಮದ ಅವರ ಹೊಲದಲ್ಲಿ ನೆರವೇರಿಸಲಾಗುವುದು. ಮೃತರು ಬಂಧು-ಮಿತ್ರರು ಮತ್ತು ಅಪಾರ ಸಂಖ್ಯೆಯ ಶಿಷ್ಯ ಕೋಟಿಯನ್ನು ಅಗಲಿದ್ದಾರೆ. ಅವರು ರಾಮಕೃಷ್ಣ ಮಿಷನ್ ಆಶ್ರಮ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳಲ್ಲಿ ಅವಿರತವಾಗಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಇತಿಹಾಸ ಪ್ರಾಧ್ಯಾಪಕರಾಗಿ ಅಪಾರ ಹೆಸರು ಗಳಿಸಿ ಕೀರ್ತಿ ಸಂಪಾದಿಸಿದ್ದರು.
