Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Politics News

ನೀರಾ ಕುಡಿದ ಅನುಭವ ಹಂಚಿಕೊಂಡ ಡಿಸಿಎಂ : ಮೇಲ್ಮನೆಯಲ್ಲಿ ನೀರಾ ಬಗ್ಗೆ ಡಿಸಿಎಂ ಪ್ರಸ್ತಾಪದಿಂದ ಸ್ವಾರಸ್ಯಕರ ಚರ್ಚೆ !

ಬೆಂಗಳೂರು : "30-35 ವರ್ಷಗಳ ಹಿಂದೆ ನಾನು ನೀರಾ ಕುಡಿದಿದ್ದೆ. ಅದು ಜ್ಯೂಸ್ ನಂತಿತ್ತು. ನನಗೆ ಯಾವುದೇ ಮತ್ತು ಬರಲಿಲ್ಲ” ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೆಲ್ಮನೆಯಲ್ಲಿ ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.

ಪ್ರಶ್ನೋತ್ತರ ಕಲಾಪದ ವೇಳೆ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯದಲ್ಲಿ ಸಾರಾಯಿ ನಿಷೇಧದ ನಂತರ ಅನೇಕರು ಬೀದಿಗೆ ಬಂದಿದ್ದು, ಅಬಕಾರಿ ಇಲಾಖೆ ವತಿಯಿಂದ ಇವರಿಗಾಗಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡಿದೆಯೇ ಎಂದು ಪ್ರಶ್ನೆ ಕೇಳಿದರು.

ಈ ಸಂದರ್ಭದಲ್ಲಿ ಸೇಂದಿ, ಸಾರಾಯಿಯನ್ನು ಉಪಕಸುಬಾಗಿಸಿಕೊಂಡಿದ್ದ ಸಮುದಾಯಕ್ಕೆ ನೀರಾಕ್ಕೆ ಅನುಮತಿ ನೀಡುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀರಾ ಸೇವನೆ ವಿಚಾರವಾಗಿ ಮಾಡಿಕೊಂಡ ಲಘು ಮಾತಿನ ವಿನಿಮಯ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, “ಸಾರ್ವಜನಿಕ ಹಿಸಾಸಕ್ತಿಗಾಗಿ ಮಾಜಿ ಸಿಎಂಗಳಾದ ವಿರೇಂದ್ರ ಪಾಟೀಲ್ ಅವರ ಕಾಲದಲ್ಲಿ ಸೇಂದಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಸೇಂದಿ ಬದಲು ನೀರಾ ಬಂದಿದ್ದು, ನೀರಾ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಬೇಕು. ಈ ಸಮುದಾಯದವರಿಗೆ ನೀರಾ ಮಾರಲು ಎಂಎಸ್ಐಎಲ್ ನಲ್ಲಿ ಅವಕಾಶ ನೀಡಬೇಕು” ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು.

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀವು ನೀರಾ ಕುಡಿಯುವ ಪ್ರಯತ್ನ ಮಾಡಿಲ್ಲವೇ ಎಂದು ಪೂಜಾರಿ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಪೂಜಾರಿ ಅವರು, “ನಾನು ನೀರಾ ಕುಡಿಯಬೇಕು ಎಂದು ಅಂದುಕೊಂಡೆ. ಆದರೆ, ಅದನ್ನು ಕುಡಿದ ಮೇಲೆ ನಿಂತುಕೊಳ್ಳುವ ಶಕ್ತಿ ನನ್ನಲ್ಲಿರುತ್ತದೆಯೇ ಎಂಬ ಅನುಮಾನ ಮೂಡಿತು. ನಾನು ಡಿ.ಕೆ. ಶಿವಕುಮಾರ್ ಅವರಂತೆ ದಪ್ಪಗಿದ್ದರೆ ಕುಡಿದ ನಂತರವೂ ನಿಲ್ಲುವ ಶಕ್ತಿ ಇರುತ್ತಿತ್ತು” ಎಂದು ಚಟಾಕಿ ಹಾರಿಸಿದಾಗ ಸದನದಲ್ಲಿ ನಗೆಬುಗ್ಗೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್ ಅವರು, ಪೂಜಾರಿ ಅವರಿಗೆ ಕುಡಿಯುವ ಅಭ್ಯಾಸವಿಲ್ಲ. ಕುಡಿಸುವ ಅಭ್ಯಾಸವಿದೆ ಎಂದರು.

ಆಗ ಡಿ.ಕೆ. ಶಿವಕುಮಾರ್ ಅವರು, “ಪ್ರಕೃತಿ ಮುಂದೆ ಯಾವುದೂ ಇಲ್ಲ. ಸುಮಾರು 30-35 ವರ್ಷಗಳ ಹಿಂದೆ ನಮ್ಮ ಪಕ್ಕದ ಊರಿನಲ್ಲಿ ನಾನು ನೀರಾ ಕುಡಿದಿದ್ದೆ. ಅದರಿಂದ ಮತ್ತು ಬರುವುದಿಲ್ಲ” ಎಂದು ನೀರಾ ಕುಡಿದ ತಮ್ಮ ಅನುಭವವನ್ನು ಮೆಲಕು ಹಾಕಿದರು.

ಆಗ ತೇಜಸ್ವಿನಿಗೌಡ ಅವರು, “ಶಿವಕುಮಾರ್ ಅವರು ನೀರಾ ನೆನಪು ಎಂಬ ಪುಸ್ತಕ ಬರೆಯಬಹುದು” ಎಂದು ಸಲಹೆ ಕೊಟ್ಟರು.

ಮಾತು ಮುಂದುವರಿಸಿದ ಶಿವಕುಮಾರ್ ಅವರು, “ಪೂಜಾರಿ ಹಾಗೂ ರವಿ ಕುಮಾರ್ ಅವರು ಈ ಸಮುದಾಯದ ಜನರ ರಕ್ಷಣೆ ಬಗ್ಗೆ ಆಲೋಚಿಸುತ್ತಿದ್ದಾರೆ. ಈಗ ಬೀದಿ ಬದಿಯ ಎಳನೀರನ್ನು 20 ರೂಪಾಯಿಗೆ ಮಾರುತ್ತಾರೆ. ಆದರೆ ಅದನ್ನೇ ಪ್ಯಾಕೆಟ್ ಅಥವಾ ಬಾಟೆಲ್ ನಲ್ಲಿ ಹಾಕಿ ಮಾರಿದರೆ 100 ರೂ. ಕೊಟ್ಟು ಖರೀದಿ ಮಾಡುವ ಜನರೂ ಇದ್ದಾರೆ. ಅದೇ ರೀತಿ ಬಂಡವಾಳ ಹಾಕಿ ನೀರಾ ಉತ್ಪನ್ನವನ್ನು ಈ ವರ್ಗದ ಜನರಿಗೆ ಎಂಎಸ್ಐಎಲ್ ಮೂಲಕ ಮಾರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಇದೇ ಸದನದಲ್ಲಿ ಎಂ.ಸಿ ನಾಣಯ್ಯ ಅವರು ನೀರಾ ಕುರಿತು ಮಾಡಿದ ಭಾಷಣ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಿತು. ಆಗ ಖೋಡೇ, ಮಲ್ಯ, ತಿಮ್ಮೇಗೌಡ, ನಾರಾಯಣಸ್ವಾಮಿ ಸೇರಿದಂತೆ ಅನೇಕರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಅದೇ ರೀತಿ ಇಂದು ನೀವು ಎತ್ತಿರುವ ವಿಚಾರ ಹಾಗೂ ಇದರಿಂದ ತೆಗೆದುಕೊಳ್ಳುವ ನಿರ್ಧಾರ ಮುಂದೆ ಬದಲಾವಣೆಗೆ ದಾರಿಯಾಗಬಹುದು. ಈ ಬಗ್ಗೆ ಸುದೀರ್ಘ ಚರ್ಚೆ ಆಗಬೇಕಿದೆ” ಎಂದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು