ಗದಗ : ಗದಗದ ಕೆಎಲ್ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಕಾಲೇಜಿನ ಧ್ರುವಿ ಎಲ್ ಸಂಕಲೇಶ (II ವರ್ಷ ಎಲ್ ಎಲ್ ಬಿ) ಮತ್ತು ಸ್ನೇಹಾ ಕಟ್ವಾ (II ವರ್ಷ ಎಲ್ ಎಲ್ ಬಿ) ಅವರು ಮೇ 15 ಮತ್ತು 16, 2026 ರಂದು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಕಾಲೇಜು ಆಯೋಜಿಸಿದ್ದ 3 ನೇ ರಾಷ್ಟ್ರೀಯ ಕಾನೂನು ಉತ್ಸವ -2026 ರಲ್ಲಿ ಕಕ್ಷಿದಾರರ ಸಮಾಲೋಚನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.
