Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

BREAKING: ಕಲರ್ ಕಾಟನ್ ಕ್ಯಾಂಡಿ ಬ್ಯಾನ್‌ ಕೊನೆಗೂ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು : ರಾಜ್ಯದಲ್ಲಿ ಕಲ‌ರ್ ಕಾಟನ್ ಕ್ಯಾಂಡಿ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್ ಒಂದು ವೇಳೆ ಕೃತಕ ಬಣ್ಣದ ಕಾಟನ್ ಕ್ಯಾಂಡಿ ಮಾರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬಣ್ಣ ಬಳಸದ ಕಾಟನ್ ಕ್ಯಾಂಡಿ ಮಾರಬಹುದು ಎಂದಿದ್ದಾರೆ. ಸದ್ಯಕ್ಕೆ ಗೋಬಿ ಮಂಚೂರಿ ನಿಷೇಧಿಸಿಲ್ಲ. ಆದರೆ ಕೃತಕ ಬಣ್ಣ ಬಳಸಿದ್ದು ಗೊತ್ತಾದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಗೋಬಿಗೆ ನಿಷೇಧ ಇಲ್ಲ :

ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಬ್ಯಾನ್ ಆಗಿದೆ. ಇನ್ನು ಗೋಬಿ ಮಂಚೂರಿಗೆ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ. ಕ್ಯಾಂಡಿ ಬ್ಯಾನ್ ಮಾರಾಟ ಮಾಡಿದರೇ ಮತ್ತು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.

ಕಲರ್ ಕಾಟನ್ ಕ್ಯಾಂಡಿಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದ್ದು, ಗೋಬಿ ಮಂಚೂರಿಯಲ್ಲೂ ಕೃತಕ ಬಣ್ಣ ಬಳಸುವಂತಿಲ್ಲ ಎಂದು ಹೇಳಿದರು.
ಕಾಟನ್ ಕ್ಯಾಂಡಿಯಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳಿವೆ. ಅದನ್ನು ಬ್ಯಾನ್ ಮಾಡಲಾಗುತ್ತದೆ. ಆದರೆ ಬಣ್ಣ ಬಳಸದೆ ತಯಾರಿಸುವ ಕಾಟನ್ ಕ್ಯಾಂಡಿಗೆ ಅವಕಾಶವಿದೆ.
ಒಂದು ವೇಳೆ ಕಲರ್ ಕಾಟನ್ ಕ್ಯಾಂಡಿ ಮಾರಿದರೆ ಕಾನೂನು ರೀತಿಯ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಪ್ರಸಿದ್ಧ ಖಾದ್ಯ ಗೋಬಿ ಮಂಚೂರಿಯು ಸಸ್ಯಹಾರಿ ಪದಾರ್ಥವಾದ ಕಾರಣ ಅದನ್ನು ಬ್ಯಾನ್ ಮಾಡಲಾಗದು. ಆದರೆ ಅದಕ್ಕೆ ಕೃತಕ ಬಣ್ಣ ಬಳಸುವಂತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ 171 ಗೋಬಿ ಮಂಚೂರಿಯನ್ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅದರಲ್ಲಿ 107 ಸ್ಯಾಂಪಲ್ ನಲ್ಲಿ ಕೃತಕ ಬಣ್ಣ ಪತ್ತೆಯಾಗಿದೆ. ಗೋಬಿ ಮಂಚೂರಿಯನ್ ನಲ್ಲಿ ಟಾರ್ ಟ್ರಾಸೈನ್, ಸಮ್ ಸೆಟ್ ಯೆಲ್ಲೋ ಮತ್ತು ಕಾರ್ಮಿಸನ್ ಬಳಕೆ ಮಾಡಲಾಗಿದೆ ಎಂದರು.
ಗೋಬಿ ಮಂಚೂರಿಯನ್ನು ನಿಷೇಧಿಸುತ್ತಿಲ್ಲ. ಆದರೆ ಕೃತಕ ಬಣ್ಣ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕೃತಕ ಬಣ್ಣ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು