Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹಿರಿಯ ನಾಗರಿಕರಿಗಾಗಿಯೇ ಜನ್ಮದಿನ ಸಮರ್ಪಣೆ — ಅಪರೂಪದ ಕಾರ್ಯಕ್ರಮ ಮಾನವೀಯ ಮೌಲ್ಯಗಳಿಗೆ ಹೊಸ ಅರ್ಥ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಫೆಬ್ರವರಿ 14,ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಜನ್ಮ ದಿನಾಚರಣೆ.ಹಿರಿಯ ನಾಗರಿಕರೊಂದಿಗೆ,ಅವರನ್ನು ಗೌರವಿಸುವ ಮೂಲಕ ಜನ್ಮ ದಿನಾಚರಣೆ ಮಾಡಲು ಲಕ್ಷ್ಮೀ ಹೆಬ್ಬಾಳಕರ್ ಅವರು ನಿರ್ಧರಿಸಿದ್ದಾರೆ.

ಸಾಮಾನ್ಯವಾಗಿ ಜನ್ಮದಿನವೆಂದರೆ ಕೇಕ್, ಹೂಗುಚ್ಛಗಳು, ಶುಭಾಶಯಗಳ ನಡುವೆ ನಡೆಯುವ ವೈಯಕ್ತಿಕ ಆಚರಣೆ. ಆದರೆ ಇದಕ್ಕೆ ವಿಭಿನ್ನ ಅರ್ಥ ನೀಡುವ ಮೂಲಕ ಮಾನವೀಯ ಮೌಲ್ಯಗಳಿಗೆ ಹೊಸ ಅರ್ಥ ಕೊಟ್ಟಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್.
ತಮ್ಮ ಜನ್ಮದಿನವನ್ನು ವೈಯಕ್ತಿಕ ಸಂಭ್ರಮವನ್ನಾಗಿ ಆಚರಿಸದೆ, ಹಿರಿಯ ನಾಗರಿಕರಿಗೆ ಸಮರ್ಪಿಸುವ ಮೂಲಕ ಅವರು ಸಮಾಜಮುಖಿ ನಾಯಕತ್ವದ ವಿಶಿಷ್ಟ ಮಾದರಿಯನ್ನು ನಿರ್ಮಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರೊಂದಿಗೆ ಸಮಯ ಕಳೆಯುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಗೌರವ ಸಲ್ಲಿಸುವುದು ಹಾಗೂ ಆಶೀರ್ವಾದ ಪಡೆಯುವುದು ಮುಖ್ಯ ಉದ್ದೇಶ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯರು ಹೊಸ ಜೀವನೋತ್ಸಾಹದಿಂದ ಮರಳಬೇಕು ಎನ್ನುವುದು ಹೆಬ್ಬಾಳಕರ್ ಅವರ ಬಯಕೆ. ಇದು ಅವರ ಜೀವನದಲ್ಲಿ ಮರೆಯಲಾಗದ ದಿನವಾಗಬೇಕು ಎನ್ನುತ್ತಾರೆ ಅವರು.

ಸಾಮಾಜಿಕ ಜೀವನದಲ್ಲಿ ಹಿರಿಯ ನಾಗರಿಕರು ಜ್ಞಾನ, ಅನುಭವ ಮತ್ತು ಸಂಸ್ಕಾರದ ಜೀವಂತ ಭಂಡಾರವಾಗಿದ್ದಾರೆ. ಇಂತಹವರನ್ನು ಗೌರವಿಸುವುದೇ ನಿಜವಾದ ಸಂಸ್ಕೃತಿ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಲಿದೆ. ರಾಜಕೀಯ ವೇದಿಕೆಯಲ್ಲಿ ಸಾಮಾನ್ಯವಾಗಿ ಕಾಣದ ಈ ರೀತಿಯ ಕಾರ್ಯಕ್ರಮ ಇತಿಹಾಸದಲ್ಲೇ ಅಪರೂಪವೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಜನಸೇವೆ, ಜನಸಂಪರ್ಕ ಮತ್ತು ಜನವಿಶ್ವಾಸ ಎಂಬ ತ್ರಿವೇಣಿ ಸಂಗಮದಂತೆ ಕಾರ್ಯನಿರ್ವಹಿಸುತ್ತಿರುವ ಸಚಿವೆಯ ಈ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು ಸಾರ್ವಜನಿಕ ವಲಯಗಳವರೆಗೆ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಜನಪ್ರತಿನಿಧಿಯೊಬ್ಬರು ಜನರ ಪ್ರೀತಿಯನ್ನು ಹೇಗೆ ಗೌರವಿಸಬೇಕು ಎಂಬುದಕ್ಕೆ ಇದು ಜೀವಂತ ಉದಾಹರಣೆ ಎನ್ನಲಾಗುತ್ತಿದೆ.
ಒಟ್ಟಾರೆ, ಜನ್ಮದಿನವನ್ನು ಸ್ವಂತ ಸಂಭ್ರಮದಿಂದ ಹೊರತೆಗೆದು ಸಮಾಜದ ಹಿರಿಯರಿಗೆ ಅರ್ಪಿಸಿದ ಈ ಹೆಜ್ಜೆ ಕೇವಲ ಕಾರ್ಯಕ್ರಮವಲ್ಲ - ಅದು ಮೌಲ್ಯಗಳ ಘೋಷಣೆ, ಸೇವಾಭಾವದ ಸಂಕೇತ ಮತ್ತು ಸಮಾಜಕ್ಕೆ ದಾರಿದೀಪವಾಗಿದೆ.

----------
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರುನಾಡಿಗೆ ಜಲಕಂಟಕ, ಭುವಿಯೇ ತಲ್ಲಣ : ಭವಿಷ್ಯ ನುಡಿದ ಪ್ರಖ್ಯಾತ ಸ್ವಾಮೀಜಿ...!ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ...!ಕೊನೆಗೂ ಸಿಹಿಸುದ್ದಿ : ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ:  ಲಕ್ಷ್ಮೀ ಹೆಬ್ಬಾಳಕರ್ ಕೊಟ್ರು ಈ ಗುಡ್ ನ್ಯೂಸ್..!ನೈರುತ್ಯ ರೇಲ್ವೆ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆಬೆಳಗಾವಿ : 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಸರಕಾರಿ ನೌಕರರಿಗೆ ಸಿಹಿಸುದ್ದಿ : ತುಟ್ಟಿಭತ್ಯೆ ಹೆಚ್ಚಳ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವುದು ನಾಗರಿಕರ ಆದ್ಯ ಕರ್ತವ್ಯ : ಎ.ಎಸ್.ಪಾಶ್ಚಾಪುರೆಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್‌ ಪತ್ತೆತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ