Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬಿಹಾರ ಚುನಾವಣಾ ಫಲಿತಾಂಶ : ಭಾರೀ ಗೆಲುವಿನತ್ತ ಎನ್‌ ಡಿಎ, ಮಹಾಘಟಬಂಧನಕ್ಕೆ ಹಿನ್ನಡೆ

ಪಾಟ್ನಾ : ಬಿಹಾರದ ಬಹು ನಿರೀಕ್ಷಿತ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು, ಆರಂಭಿಕ ಟ್ರೆಂಡ್‌ಗಳಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಭಾರೀ ಮುನ್ನಡೆ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಘಟಬಂಧನ ಹಿನ್ನಡೆಯಲ್ಲಿದೆ.

ಬಿಹಾರದಲ್ಲಿ ಬಹುತೇಕ ಎಲ್ಲಾ ಚುನಾವಣಾ ಸಮೀಕ್ಷೆಗಳು ಎನ್‌ಡಿಎಗೆ ಸ್ಪಷ್ಟ ಮುನ್ನಡೆ ನೀಡಿದ್ದವು. 243 ಕ್ಷೇತ್ರಗಳಾದ್ಯಂತ ಸ್ಪರ್ಧಿಸಿರುವ 2,616 ಅಭ್ಯರ್ಥಿಗಳ ಭವಿಷ್ಯವನ್ನು ಈ ಫಲಿತಾಂಶಗಳು ನಿರ್ಧರಿಸಲಿವೆ. ರಾಜ್ಯದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ನಿತೀಶಕುಮಾರ ಅವರು ದಾಖಲೆಯ ಐದನೇ ಅವಧಿಗೆ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಜೆಡಿ(ಯು) ಸುಪ್ರಿಮೋ ಅವರ ಎರಡು ದಶಕಗಳ ‘ಸುಶಾಸನ’ (ಉತ್ತಮ ಆಡಳಿತ) ಭರವಸೆಯು ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿದ ಮತದಾರರ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದರ ಮೇಲೆ ಫಲಿತಾಂಶ ನಿಂತಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಇತ್ತೀಚಿನ ಮಾಹಿತಿ ಪ್ರಕಾರ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ ಬಹುಮತದ ಗಡಿಯನ್ನು ದಾಟಿದ್ದು, 180 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ತೇಜಸ್ವಿ ಯಾದವ್ ಅವರ ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ ಎರಡನೇ ಸ್ಥಾನದಲ್ಲಿದ್ದು, 80 ಸ್ಥಾನಗಳಲ್ಲಿ ಮುಂದಿದೆ. ಅಚ್ಚರಿಯೆಂದರೆ, ಪ್ರಶಾಂತ ಕಿಶೋರ ಅವರ ಹೊಸ ಪಕ್ಷವಾದ ಜನ ಸುರಾಜ್ ಪಾರ್ಟಿ (JSP) ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ (AIMIM) ಒಂದು ಸ್ಥಾನದಲ್ಲಿ ಮುಂದಿದೆ.

ಪಕ್ಷಗಳ ಮುನ್ನಡೆ:
ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ (BJP)76, ಜೆಡಿ(ಯು) 78, ಎಲ್‌ಜೆಪಿ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಹುಮತಕ್ಕೆ 122 ಸ್ಥಾನಗಳು ಬೇಕಿವೆ. ಮಹಾಘಟಬಂಧನದಲ್ಲಿ ಆರ್‌ಜೆಡಿ 38, ಕಾಂಗ್ರೆಸ್‌ 11 ಸ್ಥಾನಗಳಲ್ಲಿ ಹಾಗೂ ಎಡಪಕ್ಷಗಳು 8 ಸ್ಥಾನಗಳಲ್ಲಿ ಮುಂದಿವೆ. ಜನ ಸುರಾಜ್ ಪಾರ್ಟಿ (JSP)3, ಎಐಎಂಐಎಂ (AIMIM)1 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿ ಎರಡು ಹಂತಗಳ ಮತದಾನದಲ್ಲಿ, ಬಿಹಾರವು ದಾಖಲೆಯ 66.91 ಪ್ರತಿಶತ ಮತದಾನವನ್ನು ದಾಖಲಿಸಿದೆ. 1951ರ ನಂತರ ಇದೇ ಅತಿ ಹೆಚ್ಚು ಮತದಾನ ಪ್ರಮಾಣವಾಗಿದೆ. ಈ ಬಾರಿ ಮತದಾರರ ಪಟ್ಟಿಯಲ್ಲಿ ಕಡಿಮೆ ಇದ್ದರೂ, ಮಹಿಳೆಯರು ಪುರುಷರಿಗಿಂತ 4.3 ಲಕ್ಷಕ್ಕೂ ಹೆಚ್ಚು ಮತಗಳನ್ನು ಚಲಾಯಿಸಿದ್ದಾರೆ.ಮೊದಲ ಹಂತದಲ್ಲಿ ಮಹಿಳಾ ಮತದಾನವು 69% ಮತ್ತು ಎರಡನೇ ಹಂತದಲ್ಲಿ 74% ಆಗಿತ್ತು. ಈ ಹೆಚ್ಚಳವು ನಿತೀಶಕುಮಾರ ನೇತೃತ್ವದ ಎನ್‌ಡಿಎಗೆ ಹೆಚ್ಚು ಅನುಕೂಲವಾಗಿದೆ ಎಂದು ಭಾವಿಸಲಾಗಿದೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ